Home Karnataka State Politics Updates BJP MLA : ಕಲಾಪದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ BJP ಶಾಸಕ! ವೈರಲ್ ಆಯ್ತು ವಿಡಿಯೋ!

BJP MLA : ಕಲಾಪದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ BJP ಶಾಸಕ! ವೈರಲ್ ಆಯ್ತು ವಿಡಿಯೋ!

BJP MLA

Hindu neighbor gifts plot of land

Hindu neighbour gifts land to Muslim journalist

BJP MLA : ಇತ್ತೀಚೆಗಷ್ಟೆ ತ್ರಿಪುರಾದ(Tripura) ಚುನಾವಣೆಯಲ್ಲಿ (Assembly Election)ಅಭೂತಪೂರ್ವ ಜಯಗಳಿಸಿ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷಕ್ಕೆ(BJP) ಮುಜುಗರ ಆಗುವಂತಂಹ ಘಟನೆ ನಡೆದಿದೆ. ವಿಧಾನಸಭೆಯ ಅಧಿವೇಶನದ ವೇಳೆ ತ್ರಿಪುರದ ಬಿಜೆಪಿ ಶಾಸಕ (BJP MLA) ತಮ್ಮ ಮೊಬೈಲ್  ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕ ಜದಬ್ ಲಾಲ್ ನಾಥ್ (Jadab Lal Nath) ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಚರ್ಚೆಯ ಅಧಿವೇಶನ ನಡೆಯುತ್ತಿರುವಾಗ ಬಗ್‌ಬಾಸಾ ಕ್ಷೇತ್ರದ ಶಾಸಕ ತಮ್ಮ ಫೋನ್‌ನಲ್ಲಿ ಅಶ್ಲೀಲ ಕ್ಲಿಕ್​ ನೋಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ರಾಜ್ಯ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ಶಾಸಕ ಮೊಬೈಲ್‍ನಲ್ಲಿ ನೋಡುತ್ತಿರುವ ದೃಶ್ಯಗಳನ್ನು ಹಿಂಬದಿ ಕುಳಿತಿದ್ದ ವ್ಯಕ್ತಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಪಕ್ಷ, ಶಾಸಕನಿಂದ ಸ್ಪಷ್ಟನೆ ಕೇಳಿದ್ದು, ಶಾಸಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿರುವುದು ವೈರಲ್ ಆದ ಬೆನ್ನಲ್ಲೇ ಸರ್ಕಾರ ಹಾಗೂ ಬಿಜೆಪಿ ಪಕ್ಷ ಸಾಕಷ್ಟು ಮುಜುಗರ ಎದುರಿಸುವಂತಾಗಿದೆ. ಹಾಗಾಗಿ ಶೀಘ್ರದಲ್ಲೇ ಜದಬ್​​ಗೆ ಈ ಕುರಿತು ಸ್ಪಷ್ಟನೆ ನೀಡುವಂತೆ ನೋಟಿಸ್​ ಜಾರಿ ಮಾಡುತ್ತೇವೆ ಎಂದು ತ್ರಿಪುರಾ ಬಿಜೆಪಿ ಅಧ್ಯಕ್ಷ ರಾಜಿಬ್ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಪಕ್ಷ ನಾಯಕ ಅನಿಮೇಶ್ ದೆಬ್ಬರ್ಮಾ ಪ್ರತಿಕ್ರಿಯಿಸಿದ್ದ, ಶಾಸಕರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿಧಾನಸಭೆಯ ಒಳಗೆ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ನಾವೆಲ್ಲರೂ ಸದನದ ನಡಾವಳಿಗಳು ಮತ್ತು ವ್ಯವಹಾರಗಳ ಮೇಲೆ ಕೇಂದ್ರೀಕರಿಸಬೇಕು. ಇದರ ಹೊರತಾಗಿಯೂ ನಾಥ್ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವ ಮೂಲಕ ಸದನದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಬಿರಾಜಿತ್ ಸಿನ್ಹಾ ಹೇಳಿದ್ದಾರೆ. ಬಿಜೆಪಿಗೆ ಅಲ್ಪಸ್ವಲ್ಪ ನೈತಿಕತೆ ಎಂಬುದು ಇದ್ದರೆ ತಮ್ಮ ಪಕ್ಷದ ನಾಥ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.

ಈ ಕುರಿತು ಶಾಸಕ ಜದಬ್ ಲಾಲ್ ನಾಥ್ ಅವರನ್ನು ಸಂಪರ್ಕಿಸಿದ್ದಕ್ಕೆ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ” ನಾನು ಅಸೆಂಬ್ಲಿ ಸ್ಪೀಕರ್ (ಬಿಸ್ವಾ ಬಂಧು ಸೇನ್) ಮತ್ತು ಪಕ್ಷದ ರಾಜ್ಯ ಅಧ್ಯಕ್ಷ (ರಜೀಬ್ ಭಟ್ಟಾಚಾರ್ಯ) ಅವರೊಂದಿಗೆ ಮಾತನಾಡುತ್ತೇನೆ ಮತ್ತು ನಂತರ ನಾನು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ” ಎಂದು ತಿಳಿಸಿದ್ದಾರೆ.

ಈ ಹಿಂದೆ 2012ರಲ್ಲಿ ಕರ್ನಾಟಕ (Karnataka) ವಿಧಾನಸಭೆಯ (Assembly) ಕಲಾಪದ ವೇಳೆ ಬಿಜೆಪಿ ನಾಯಕರಾದ ಸಿ.ಸಿ ಪಾಟೀಲ್ ಹಾಗೂ ಲಕ್ಷ್ಮಣ್ ಸವದಿ ಇಬ್ಬರೂ ಅಶ್ಲೀಲ ವಿಡಿಯೋ ನೋಡುತ್ತಿರುವುದು ಚರ್ಚೆಯಾಗಿ ರಾಜಿನಾಮೆ ನೀಡಿದ್ದರು. ನಂತರದ ತನಿಖೆಯಲ್ಲಿ ತಪ್ಪಿತಸ್ಥರಲ್ಲ ಎಂಬುದು ಸಾಬೀತಾದ ಮೇಲೆ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.