Home latest ಯುವತಿಯನ್ನು ಕೂರಿಸಿಕೊಂಡು ಅತಿವೇಗದ ಶೋಕಿಯ ಬೈಕ್ ರೈಡ್!! ಕೆಲವೇ ನಿಮಿಷಗಳಲ್ಲಿ ನಡೆಯಿತು ಇಬ್ಬರ ಶವ ಮೆರವಣಿಗೆ

ಯುವತಿಯನ್ನು ಕೂರಿಸಿಕೊಂಡು ಅತಿವೇಗದ ಶೋಕಿಯ ಬೈಕ್ ರೈಡ್!! ಕೆಲವೇ ನಿಮಿಷಗಳಲ್ಲಿ ನಡೆಯಿತು ಇಬ್ಬರ ಶವ ಮೆರವಣಿಗೆ

Hindu neighbor gifts plot of land

Hindu neighbour gifts land to Muslim journalist

ಯುವಕನೊಬ್ಬ ಯುವತಿಯೊಬ್ಬಳನ್ನು ತನ್ನ ಬೈಕಿನ ಹಿಂಬದಿ ಕೂರಿಸಿಕೊಂಡು ಅತಿವೇಗದ ಅಜಾಗರೂಕತೆಯ ಚಾಲನೆ ನಡೆಸಿದ ಪರಿಣಾಮ ಬೈಕ್ ಅಪಘಾತವಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಬೆಂಗಳೂರು ನಗರದ ಹೊರವಲಯದ ಸರ್ಜಾಪುರ ಎಂಬಲ್ಲಿ ನಡೆದಿದೆ.

ಮೃತರನ್ನು ಗಗನ್ ದೀಪ್ (29) ಹಾಗೂ ಯಶಶ್ವಿನಿ(23) ಎಂದು ಗುರುತಿಸಲಾಗಿದೆ.ಇಬ್ಬರೂ ಕಂಪನಿಯೊಂದರ ಉದ್ಯೋಗಿಗಲೆಂದು ತಿಳಿದುಬಂದಿದೆ.

ಯುವಕ ತನ್ನ ಹಿಂದೆ ಯುವತಿ ಕೂತಿದ್ದಾಳೆ ಎಂಬ ಕಾರಣಕ್ಕಾಗಿ ಅತಿವೇಗವಾಗಿ ಸ್ಪೋರ್ಟ್ಸ್ ಬೈಕ್ ಚಲಾಸಿದ್ದೇ ಘಟನೆಗೆ ಕಾರಣವೆಂದು ಹೇಳಲಾಗಿದ್ದು, ಘಟನೆಗೂ ಮುನ್ನ ರಸ್ತೆಯಲ್ಲಿ ಇತರ ವಾಹನ ಸವಾರರು ಜೋಡಿಗೆ ಎಚ್ಚರಿಕೆಯನ್ನೂ ನೀಡಿದ್ದರು ಎನ್ನುವ ಮಾತುಗಳು ಕೇಳಿಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.