Home latest ಪರೀಕ್ಷೆಗೆಂದು ಹೊರ ಹೋದ ಪತ್ನಿ, ಬಾಯ್‌ಫ್ರೆಂಡ್‌ ಜೊತೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದಾಗ ರೆಡ್‌ಹ್ಯಾಂಡಾಗಿ ಹಿಡಿದ ಗಂಡ !...

ಪರೀಕ್ಷೆಗೆಂದು ಹೊರ ಹೋದ ಪತ್ನಿ, ಬಾಯ್‌ಫ್ರೆಂಡ್‌ ಜೊತೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದಾಗ ರೆಡ್‌ಹ್ಯಾಂಡಾಗಿ ಹಿಡಿದ ಗಂಡ ! ನಂತರ ಏನಾಯ್ತು?

image credit source: tv9

Hindu neighbor gifts plot of land

Hindu neighbour gifts land to Muslim journalist

ಬಿಹಾರದ ಪುರ್ನಿಯಾ ಎಂಬಲ್ಲಿ ಪತ್ನಿಯೋರ್ವಳು ಪರೀಕ್ಷೆ ಬರೆಯಲಿದೆ ಎಂದು ತನ್ನ ಪತಿಗೆ ಹೇಳಿ, ಮನೆಯಿಂದ ಹೊರಹೋಗಿದ್ದು, ಬಳಿಕ ತನ್ನ ಪ್ರಿಯಕರನೊಂದಿಗೆ ಊರಿಡೀ ಬೈಕಿನಲ್ಲಿ ಸುತ್ತಾಡುತ್ತಿದ್ದು, ಇದನ್ನು ತಿಳಿದ ಪತಿ ಅಲ್ಲಿ ತಲುಪಿ ಮೊದಲು ಪತ್ನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆತ ಪತ್ನಿಯ ವೀಡಿಯೋ ಕೂಡಾ ಮಾಡುತ್ತಿದ್ದ. ಈ ವೀಡಿಯೋವನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದಾರೆ.

ಪತ್ನಿ ತನ್ನ ಬಾಯ್‌ಫ್ರೆಂಡ್‌ ಜೊತೆ ಬೈಕಿನಲ್ಲಿ ತಿರುಗಾಡುತ್ತಿದ್ದು, ಇನ್ನೊಂದು ಬೈಕಿನಲ್ಲಿ ಬಂದ ಗಂಡ ಇವರಿಬ್ಬರನ್ನು ಹಿಂಬಾಲಿಸಿದ್ದಾನೆ. ಥಟ್ಟನೆ ಎದುರಿಗೆ ಬಂದ ಗಂಡನನ್ನು ನೋಡಿ ಪತ್ನಿ ಹೆದರುತ್ತಾಳೆ. ನಂತರ ಇಲ್ಲಿ ಪತಿ ತನ್ನ ಪತ್ನಿ ಹಾಕಿದ ಮುಖವಾಡವನ್ನು ತೆಗೆದು ಕೆನ್ನೆಗೆ ಛಟೀರನೆಂದು ಬಾರಿಸುತ್ತಾನೆ. ನಂತರ ಇಬ್ಬರು ಪತಿ ಪತ್ನಿ ರಸ್ತೆಯಲ್ಲೇ ಜಗಳವಾಡುತ್ತಾರೆ.

ಜಗಳದ ವೇಳೆ ಪತಿ ಪತ್ನಿಯನ್ನು ಕೇಳುತ್ತಾನೆ, ನೀನು ಪರೀಕ್ಷೆ ಕೊಡುವ ನೆಪದಲ್ಲಿ ಮನೆ ಬಿಟ್ಟು ಹೋಗಿದ್ದೀಯ, ಬೈಕ್‌ನಲ್ಲಿ ಬೇರೆ ಹುಡುಗನೊಂದಿಗೆ ಏನು ಮಾಡುತ್ತಿದ್ದೀಯಾ. ಸ್ವಲ್ಪವೂ ಮಾನ ಮಾರ್ಯಾದೆ ಉಳಿದಿಲ್ಲವೇ? ತಾನು ಹೋಗುತ್ತಿದ್ದ ಮೋಟಾರ್ ಸೈಕಲ್ ಕೆಟ್ಟು ಹೋಗಿದೆ ಎಂದು ಹೆಂಡತಿ ಗಂಡನಿಗೆ ಹೇಳುತ್ತಾಳೆ.

ಇದಾದ ಬಳಿಕ ಪತಿ ಪತ್ನಿಯನ್ನು ಪ್ರಶ್ನಿಸಿದ್ದು, ನಿನ್ನ ಮೋಟಾರ್ ಸೈಕಲ್ ಕೆಟ್ಟು ನಿಂತಾಗ, ನೀನು ನನಗೆ ಯಾಕೆ ಕರೆ ಮಾಡಲಿಲ್ಲ? ಬೇರೆ ಹುಡುಗನೊಂದಿಗೆ ಏಕೆ ಸುತ್ತಾಡುತ್ತಿದ್ದಿ?

ವೀಡಿಯೋದಲ್ಲಿ ಯುವಕ ತನ್ನ ಹೆಸರನ್ನು ರಿತೇಶ್ ಚೌಹಾಣ್ ಎಂದು ಹೇಳುತ್ತಾ ಇವಳು ನನ್ನ ಹೆಂಡತಿ, ಪರೀಕ್ಷೆ ಕೊಡಿಸುವ ನೆಪದಲ್ಲಿ ಬೇರೆ ಹುಡುಗನೊಂದಿಗೆ ತಿರುಗಾಡುತ್ತಿದ್ದಳು. ವಿಡಿಯೋದಲ್ಲಿ ಸ್ವಲ್ಪ ಹೊತ್ತಿನ ನಂತರ ಯುವಕನ ಅತ್ತಿಗೆಯ ಎಂಟ್ರಿಯೂ ನಡೆಯುತ್ತದೆ. ಅತ್ತಿಗೆಯೂ ಯುವಕನೊಂದಿಗೆ ಜಗಳವಾಡುತ್ತಾಳೆ. ಗೊತಿಯಾದಲ್ಲಿ ಒಂದು ವರ್ಷದಿಂದ ಪತ್ನಿಯ ಕೃತ್ಯದ ಬಗ್ಗೆ ಅನುಮಾನವಿತ್ತು ಎಂದು ಪತಿ ಹೇಳಿದ್ದಾನೆ.

ರಸ್ತೆಯಲ್ಲಿ ಹೈವೋಲ್ಟೇಜ್ ನಾಟಕದ ನಂತರ ಜನರು ಮನೆಯಲ್ಲಿ ವಿಷಯ ಈ ಬಗೆಹರಿಸುವಂತೆ ಪತಿಗೆ ಸಲಹೆ ನೀಡಿ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಸದ್ಯ ಈ ವಿಚಾರವಾಗಿ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಪತ್ನಿಯ ದಾಂಪತ್ಯ ದ್ರೋಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.