Home Karnataka State Politics Updates ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಕೇಂದ್ರದಿಂದ ಅನುಮತಿ !!!

ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಕೇಂದ್ರದಿಂದ ಅನುಮತಿ !!!

Hindu neighbor gifts plot of land

Hindu neighbour gifts land to Muslim journalist

ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತು ಕೇಂದ್ರ ಸರಕಾರವು‌ ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ರಾಜ್ಯ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಬಗ್ಗೆ ರಾಜ್ಯ ಸರಕಾರಗಳೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಲೋಕಸಭೆಯಲ್ಲಿ ಇಂದು ಕೇಂದ್ರ ಸರಕಾರವು ಹೇಳಿದೆ.

ಸಿಬಿಎಸ್ಇ 6,7 ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ಈಗಾಗಲೇ ಕಲಿಸುತ್ತಿದೆ. ಹಾಗಾಗಿ ರಾಜ್ಯ ಸರಕಾರವು ಬಯಸಿದರೆ ಭಗವದ್ಗೀತೆ ಹಾಗೂ ಬೋಜ್ ಪುರಿ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಹುದು ಎಂದು ಶಿಕ್ಷಣ ಖಾತೆ ಅನ್ನಪೂರ್ಣಾದೇವಿ ಹೇಳಿದ್ದಾರೆ‌

ಕೇಂದ್ರ ಸರಕಾರವು ಈ ಬಗ್ಗೆ ಏನಾದರೂ ನಿಬಂಧನೆ ತರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಭಗವದ್ಗೀತೆ ಕಲಿಸಲು ರಾಜ್ಯ ಸರಕಾರವು ಮುಂದಾಗಬಹುದು ಇದಕ್ಕೆ ಕೇಂದ್ರದ ಅನುಮತಿ ಇದೆ ಎಂದು ಹೇಳಿದ್ದಾರೆ.