Home latest ವ್ಯಕ್ತಿಯ ಖಾತೆಗೆ 8 ಸಾವಿರದ ಬದಲು ಜಮಾ‌ ಆಯ್ತು 82 ಕೋಟಿ ರೂಪಾಯಿ | ಕುಟುಂಬದವರೆಲ್ಲ‌...

ವ್ಯಕ್ತಿಯ ಖಾತೆಗೆ 8 ಸಾವಿರದ ಬದಲು ಜಮಾ‌ ಆಯ್ತು 82 ಕೋಟಿ ರೂಪಾಯಿ | ಕುಟುಂಬದವರೆಲ್ಲ‌ ಸೇರಿ ಮಾಡಿದ್ರು ಭರ್ಜರಿ ಶಾಪಿಂಗ್ | ಅನಂತರ ಕಾದಿತ್ತು ಬಿಗ್ ಶಾಕ್ !!!

Hindu neighbor gifts plot of land

Hindu neighbour gifts land to Muslim journalist

ಯಾರದಾದರೂ ಖಾತೆಗೆ ಹಠಾತ್ತಾಗಿ ಲೆಕ್ಕವಿಲ್ಲದಷ್ಟು ದುಡ್ಡು ಬಂದರೆ ಏನು ಮಾಡುತ್ತೀರಿ? ಹೆಚ್ಚಾಗಿ ಜನರು ಇಷ್ಟ ಬಂದಿದ್ದನ್ನೆಲ್ಲ ಶಾಪಿಂಗ್ ಮಾಡ್ತಾರೆ. ಬೇಕಾಗಿದ್ದನ್ನೆಲ್ಲ ಕೊಂಡುತಂದು ಆರಾಮದಲ್ಲಿರುತ್ತಾರೆ. ಆದರೆ ಇಂಥದ್ದೊಂದು ಘಟನೆ  ಆಸ್ಟ್ರೇಲಿಯಾದಲ್ಲಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರ ಖಾತೆಗೆ 8 ಸಾವಿರದ ಬದಲು 82 ಕೋಟಿ ರೂಪಾಯಿ ಜಮಾ ಆಗಿದೆ.

ಆತ ಈ ಕೋಟಿ ಕೋಟಿ ಹಣ ಸಿಕ್ಕಿದ್ದು ನೋಡಿ ಇಡೀ ಕುಟುಂಬಕ್ಕೆ ವಿಷಯ ತಿಳಿಸಿದ್ದಾನೆ. ಅದ್ಯಾಕೆ ಬಂತು? ತಪ್ಪಿ ಬಂತಾ? ಅಥವಾ ಏನು ವಿಷಯ ಎಂದು ಪರಿಶೀಲಿಸದೇ ಇಡೀ ಕುಟುಂಬ  ಖುಷಿಯಲ್ಲಿ, ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಆದ್ರೆ ಈ ಸಂಭ್ರಮ ಹೆಚ್ಚು ದಿನ ಉಳಿಯಲೇ ಇಲ್ಲ. ತಪ್ಪಾಗಿ ಜಾಸ್ತಿ ಹಣ ಹಾಕಿಬಿಟ್ಟಿದ್ದ ಕ್ರಿಪ್ಟ್ ಕಂಪನಿ ಆ ಮೊತ್ತವನ್ನು ಮರಳಿ ಕೇಳಿದೆ.

Crypto.com ನಿಂದ 100 ಡಾಲರ್ ಹಣ ಜಮಾ ಆಗಬೇಕಿತ್ತು. ಆದ್ರೆ 10.4 ಮಿಲಿಯನ್ ಡಾಲರ್ ಹಣ ಪಾವತಿಯಾಗಿಬಿಟ್ಟಿತ್ತು. ಹಣ ನೋಡಿ ಖುಷಿಯಾದ ಇಡೀ ಕುಟುಂಬದವರು ಇಷ್ಟಬಂದಂತೆ ಅದನ್ನು ಖರ್ಚು ಮಾಡಿದ್ದಾರೆ. ತಾನು ಮಾಡಿದ ಪ್ರಮಾದ ಗೊತ್ತಾಗಿದ್ದಂತೆ ಕ್ರಿಪ್ಟೋ ಹಣವನ್ನು ವಾಪಸ್ ಕೇಳಿದೆ. ಪೂರ್ತಿ ಹಣ ವಾಪಸ್ ಮಾಡದೇ ಇದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.

ಸುಮಾರು 1.35 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಮೊತ್ತವನ್ನು ಬಡ್ಡಿ ರೂಪದಲ್ಲಿ ಅವರು ಪಾವತಿಸಬೇಕಾಗಿದೆ. ಮೆಲ್ಬೋರ್ನ್‌ನಲ್ಲಿ ನೆಲೆಸಿರುವ ತೇವಮನೋಗಿರಿ ಮಣಿವೇಲ್ ಮತ್ತು ಅವರ ಸಹೋದರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಹೆಚ್ಚುವರಿ ಹಣ ಸಿಂಗಾಪುರ ಮೂಲದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಿಂದ ಪಾವತಿಯಾಗಿತ್ತು.

Crypto.com ಸುಮಾರು ಏಳು ತಿಂಗಳ ನಂತರ ಆಡಿಟ್ ಸಮಯದಲ್ಲಿ ಈ ಪ್ರಮಾದವನ್ನು ಗುರುತಿಸಿದೆ.  ದುಡ್ಡು ಬಂತು ಅನ್ನೋ ಸಂಭ್ರಮದಲ್ಲಿ ಅದನ್ನೆಲ್ಲ ಖರ್ಚು ಮಾಡಿದ ಕುಟುಂಬವೀಗ ಭಾರೀ ಮೊತ್ತವನ್ನು ವಾಪಸ್ ಮಾಡಬೇಕಾಗಿ ಬಂದಿದೆ.