Home Karnataka State Politics Updates Shakti Scheme: ಮಹಿಳೆಯರೇ ದಯವಿಟ್ಟು ಕೈ ಮುಗಿದು ಬೇಡುತ್ತೇನೆ, ಮನೆಯಲ್ಲಿ ಹೇಳಿ ಫ್ರೀ ಬಸ್ ಹತ್ತಿ...

Shakti Scheme: ಮಹಿಳೆಯರೇ ದಯವಿಟ್ಟು ಕೈ ಮುಗಿದು ಬೇಡುತ್ತೇನೆ, ಮನೆಯಲ್ಲಿ ಹೇಳಿ ಫ್ರೀ ಬಸ್ ಹತ್ತಿ ಅಂದ ಕಾಂಗ್ರೆಸ್ ನಾಯಕ !!

Hindu neighbor gifts plot of land

Hindu neighbour gifts land to Muslim journalist

Shakti Scheme : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಶಕ್ತಿ ಯೋಜನೆಯಿಂದ( Shakthi Free Bus Effect)ಫ್ರೀ ಫ್ರೀ ಎಂದು ಟ್ರಿಪ್ ಹೊಡೆಯುವ ಮಹಿಳೆಯರು ಸಿಕ್ಕಿದ್ದೇ ಚಾನ್ಸ್ ಎಂದು ತೀರ್ಥ ಕ್ಷೇತ್ರ ದರ್ಶನ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಕಾಮನ್ ಆಗಿ ಬಿಟ್ಟಿದೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕ ಗಲಗಲಿಯಲ್ಲಿ ಬಣಜಿಗ ಸಮಾವೇಶ ಕಾರ್ಯಕ್ರಮದಲ್ಲಿ ಅಶೋಕ್ ಪಟ್ಟಣ್ ಶಕ್ತಿ ಯೋಜನೆ(Shakti Scheme) ಕುರಿತು ಮಹಿಳೆಯರಿಗೆ ಮನವಿಯೊಂದನ್ನು ಮಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಲ್ಲಿ (Congress Guarantee scheme) ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾಮಣಿಗಳು ನೂಕು ನುಗ್ಗಲಿನಿಂದ ಓಡಾಡುವುದು ಸಾಮಾನ್ಯವಾಗಿ ಬಿಟ್ಟಿದ್ದು, ಬಸ್ಸಿನಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರ ಒದ್ದಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತಿದೆ. ಈ ನಡುವೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಚಿಕ್ಕ ಗಲಗಲಿಯಲ್ಲಿ ಬಣಜಿಗ ಸಮಾವೇಶ ಕಾರ್ಯಕ್ರಮದಲ್ಲಿ ಅಶೋಕ್ ಪಟ್ಟಣ್ ಶಕ್ತಿ ಯೋಜನೆ ಕುರಿತು ಮಹಿಳೆಯರಿಗೆ ಮನವಿಯೊಂದನ್ನು ಮಾಡಿದ್ದಾರೆ. ಮಹಿಳೆಯರೆಲ್ಲ ಮನೆಯಲ್ಲಿ ಹೇಳದೆ ಕೇಳದೇ ತಿರುಗಾಡುವುದರಿಂದ ಗಂಡಸರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ನಿಮಗೆಲ್ಲ ಕೈ ಮುಗಿದು ಹೇಳುತ್ತಿನಿ ಎಂದು ಎಲ್ಲಿಗೆ ಹೋದರು ಹೇಳಿ ಹೋಗಿ ತಾಯಿ ಎಂದು ಅಶೋಕ್ ಪಟ್ಟಣ್ ಮನವಿ ಮಾಡಿದ್ದಾರೆ.