Home latest ಪ್ರೈಮರಿ ಟೀಚರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ ವೇತನ 30,000 ರೂ. ರಿಂದ 60,000...

ಪ್ರೈಮರಿ ಟೀಚರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಾಸಿಕ ವೇತನ 30,000 ರೂ. ರಿಂದ 60,000 ದವರೆಗೆ | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.10, 2023

Hindu neighbor gifts plot of land

Hindu neighbour gifts land to Muslim journalist

ಮಿಲಿಟರಿ ಕಲ್ಯಾಣ ಶಿಕ್ಷಣ ಸೊಸೈಟಿ (AWES) ಪಿಜಿಟಿ, ಟಿಜಿಟಿ, ಪಿಆರ್‌ಟಿ, ಕೌನ್ಸಿಲರ್, ಸ್ಪೆಷಿಯಲ್ ಎಜುಕೇಟರ್ ಹುದ್ದೆಗಳನ್ನು (Regular Basis) ಭರ್ತಿ ಮಾಡಲು ಎಂಪ್ಲಾಯ್‌ಮೆಂಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಈ ಹುದ್ದೆಗಳಿಗೆ ಆಫ್‌ಲೈನ್ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳು (Regular Basis)
ಪ್ರೈಮರಿ ಟೀಚರ್‌ (ಪಿಆರ್‌ಟಿ
ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್ (ಟಿಜಿಟಿ)
ಪೋಸ್ಟ್‌ ಗ್ರಾಜುಯೇಟ್‌ ಟೀಚರ್‌ (ಪಿಜಿಟಿ)
ಕೌನ್ಸಿಲರ್
ಸ್ಪೆಷಿಯಲ್ ಎಜುಕೇಟರ್

ಪ್ರಕಟಣೆ ದಿನಾಂಕ : 15-12-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 10, 2023

ವಯೋಮಿತಿ : ಅರ್ಜಿ ಸಲ್ಲಿಸಲು 40 ವರ್ಷ ಮೀರಿರಬಾರದು, ಅನುಭವಿ ಶಿಕ್ಷಕರು ಅರ್ಜಿ ಸಲ್ಲಿಸಲು 57 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ವೇತನ ವಿವರ : ರೂ.30000 ರಿಂದ 60000 ರೂ. ತಿಂಗಳಿಗೆ

ಅಭ್ಯರ್ಥಿಗಳು ಆರ್ಮಿ ಪಬ್ಲಿಕ್ ಸ್ಕೂಲ್, ಅಹ್ಮೆದಾನಗರ್ ಹೆಸರಲ್ಲಿ ರೂ.100 ಡಿಡಿ ತೆಗೆದು, ಶುಲ್ಕ ರಶೀದಿ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ವಿದ್ಯಾರ್ಹತೆ : ಪೋಸ್ಟ್‌ ಗ್ರಾಜುಯೇಟ್‌ ಟೀಚರ್‌ : ಪೋಸ್ಟ್‌ ಗ್ರಾಜುಯೇಟ್‌ ವಿದ್ಯಾರ್ಹತೆಯನ್ನು ಸಂಬಂಧಪಟ್ಟ ಸಬ್ಜೆಕ್ಟ್‌ನಲ್ಲಿ ತೇರ್ಗಡೆ ಹೊಂದಿರಬೇಕು. ಯಾವ ಸಬ್ಜೆಕ್ಟ್‌ ಟೀಚರ್‌ಗಾಗಿ ಅಪ್ಲಿಕೇಶನ್‌ ಸಲ್ಲಿಸಬೇಕೋ ಆ ಸಬ್ಜೆಕ್ಟ್‌ನಲ್ಲಿ ಪದವಿಯಲ್ಲಿ ಶೇಕಡ 50 ಅಂಕಗಳೊಂದಿಗೆ, ಪೋಸ್ಟ್‌ ಗ್ರಾಜುಯೇಟ್ ಅನ್ನು ಶೇಕಡ 50 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು.
ಟಿಜಿಟಿ / ಪಿಆರ್‌ಟಿ ಹುದ್ದೆ : ಸಂಬಂಧಿಸಿದ ಸಬ್ಜೆಕ್ಟ್‌ನಲ್ಲಿ ಪದವಿ ಪಾಸ್ ಮಾಡಿರಬೇಕು.
ಕೌನ್ಸಿಲರ್ : ಸೈಕಾಲಜಿ ಪದವಿ / ಡಿಪ್ಲೊಮ (ಕೌನ್ಸಿಲಿಂಗ್).
ಸ್ಪೆಷಿಯಲ್ ಎಜುಕೇಟರ್ : ಡಿಪ್ಲೊಮ / ಬಿ.ಇಡಿ (ಸ್ಪೆಷಿಯಲ್ ಎಜುಕೇಷನ್, ಜೆನೆರಲ್ )/ ಗ್ರಾಜುಯೇಷನ್

ಅರ್ಜಿ ಸಲ್ಲಿಸುವುದು ಹೇಗೆ?
ಮೇಲಿನ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಡೀಟೇಲ್ಡ್‌ ಬಯೋಡಾಟಾ, ಪ್ರಮಾಣ ಪತ್ರಗಳು, ಸ್ಕೋರ್ ಕಾರ್ಡ್‌ / ಅಂಕಪಟ್ಟಿಗಳ ಜೆರಾಕ್ಸ್‌ ಪ್ರತಿಗಳನ್ನು ಒಂದು ಕವರ್‌ ಲೆಟರ್‌ನಲ್ಲಿ ಹಾಕಿ, ಅದರ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಬರೆದು ಕೆಳಗಿನ ವಿಳಾಸಕ್ಕೆ ಅಂಚೆ ಅಥವಾ ನೇರವಾಗಿ ತಲುಪಿಸಬೇಕು.

ಅರ್ಜಿ ತಲುಪಿಸಬೇಕಾದ ಸ್ಥಳ : ಪ್ರಾಂಶುಪಾಲರು, ಆರ್ಮಿ ಪಬ್ಲಿಕ್ ಸ್ಕೂಲ್, ಅಹ್ಮೆದ್‌ನಗರ, C/O ಎಸಿ ಸೆಂಟರ್ ಅಂಡ್ ಸ್ಕೂಲ್ ಅಹ್ಮೆದಾನಗರ್ -414002.

ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸದವರ ಅರ್ಜಿಗಳು ಸಹ ರಿಜೆಕ್ಟ್‌ ಮಾಡಲಾಗುವುದು.

ಅರ್ಜಿಗಳನ್ನು ವೆಬ್‌ಸೈಟ್‌ www.apsahmednagar.com / www.awesindia.com ನಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದು.