Home latest BPL, APL ಹಾಗೂ ಎಲ್ಲಾ ಪಡಿತರ ಚೀಟಿದಾರರೇ ನಿಮಗೊಂದು ಮಹತ್ವದ ಮಾಹಿತಿ

BPL, APL ಹಾಗೂ ಎಲ್ಲಾ ಪಡಿತರ ಚೀಟಿದಾರರೇ ನಿಮಗೊಂದು ಮಹತ್ವದ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಬಿಪಿಎಲ್ , ಎಪಿಎಲ್ ಹಾಗೂ ಎಲ್ಲಾ ಪಡಿತರ ಚೀಟಿದಾರರೇ ಪಡಿತರ ಆಹಾರ ಧಾನ್ಯಗಳನ್ನು ವಿತರಣೆಯ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಮುಖ ಮಾಹಿತಿಯನ್ನು ನೀಡಿದ್ದಾರೆ.

ಅಂತ್ಯೋದಯ (ಎಎವೈ), ಪಿ.ಎಚ್.ಎಚ್. (ಬಿ.ಪಿ.ಎಲ್.) ಆದ್ಯತಾ ಹಾಗೂ ಎನ್‌ಪಿಹೆಚ್‌ಹೆಚ್ (ಎಪಿಎಲ್) (ಆದ್ಯತೇತರ) (ಒಪ್ಪಿತ ಪಡಿತರ ಚೀಟಿ) ಪಡಿತರ ಕಾರ್ಡುದಾರರಿಗೆ 2022ರ ಮೇ ತಿಂಗಳಲ್ಲಿ ಕೆಳಗಿನಂತೆ ಪಡಿತರ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಅಂತ್ಯೋದಯ (ಎಎವೈ): ಎನ್.ಎಫ್.ಎಸ್.ಎ. ಪ್ರತಿ ಪಡಿತರ ಚೀಟಿಗೆ 20 ಕೆ.ಜಿ. ಅಕ್ಕಿ ಮತ್ತು 15 ಕೆ.ಜಿ. ಜೋಳ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಪಿ.ಎಚ್.ಎಚ್. (ಬಿಪಿಎಲ್) (ಆದ್ಯತಾ):ಎನ್.ಎಫ್.ಎಸ್.ಎ. ಪ್ರತಿ ಸದಸ್ಯರಿಗೆ 3 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಜೋಳ ಹಾಗೂ ಪಿ.ಎಂ.ಜಿ.ಕೆ.ಎ.ವೈ. ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ.

ಎನ್‌ಪಿಹೆಚ್‌ಹೆಚ್ (ಎಪಿಎಲ್) (ಆದ್ಯತೇತರ) (ಒಪ್ಪಿತ ಪಡಿತರ ಚೀಟಿ): ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ. ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 15 ರೂ. ನಂತೆ ವಿತರಿಸಲಾಗುತ್ತದೆ.

ಪೋರ್ಟೆಬಿಲಿಟಿ: ಅಂತರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದ ಪಡಿತರ ವಿತರಣಾ ಪ್ರಮಾಣ (5 ಕೆ.ಜಿ ಪ್ರತಿ ಸದಸ್ಯರಿಗೆ) ಮತ್ತು ದರ (ಪ್ರತಿ ಕೆ.ಜಿ.ಗೆ ರೂ.3 ರಂತೆ) ಅನ್ವಯಿಸುತ್ತದೆ.