Home latest ಚಾನೆಲ್​ನಲ್ಲಿ ಒಂದರಲ್ಲಿ ಪದೇ ಪದೇ ಪ್ರಸಾರವಾಯ್ತು ಈ ಸಿನಿಮಾ! ನೋಡಿ ನೋಡಿ ಬೇಸತ್ತ ವ್ಯಕ್ತಿ ಕೊನೆಗೆ...

ಚಾನೆಲ್​ನಲ್ಲಿ ಒಂದರಲ್ಲಿ ಪದೇ ಪದೇ ಪ್ರಸಾರವಾಯ್ತು ಈ ಸಿನಿಮಾ! ನೋಡಿ ನೋಡಿ ಬೇಸತ್ತ ವ್ಯಕ್ತಿ ಕೊನೆಗೆ ಮಾಡಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಒಂದು ಸಿನಿಮಾವನ್ನು ಎಷ್ಟು ಸಲ ನೋಡಬಹುದು? ಅದು ಸೂಪರ್ ಹಿಟ್ ಕಂಡಿರುವ ಚಿತ್ರವಾಗಲಿ ಇಲ್ಲ ಫ್ಲಾಪ್ ಆದ ಚಿತ್ರವೇ ಆಗಿರಲಿ. ಸಾಮಾನ್ಯವಾಗಿ ಬೇಸರ ಬರುವ ತನಕ ನೋಡಿ ಮತ್ತೆ ಸುಮ್ಮನಾಗಬಹುದು. ಆದರೆ ನಂತರವೂ ಪದೇ ಪದೇ ಅದೇ ಸಿನಿಮಾವನ್ನು ಹಾಕಿದರೆ ನೋಡಿ ನೋಡಿ ನಮಗೆ ಏನನಿಸಬೇಡ ಹೇಳಿ! ಸಿನಿಮಾ ಕುರಿತು ಜಿಗುಪ್ಸೆಯೇ ಬರಬಹುದು. ಇದೇ ರೀತಿ ಸಿನಿಮಾ ಒಂದನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್ ಹೆಸರಲ್ಲಿ ಪತ್ರ ಬರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಹೌದು, ಬಾಲಿವುಡ್ ನ ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರ ಸೂರ್ಯವಂಶಂ ಚಿತ್ರವನ್ನು ಟಿವಿ ಚಾನೆಲ್ ವೊಂದರಲ್ಲಿ ಪದೇ ಪದೇ ಪ್ರಸಾರ ಮಾಡಿದ್ದಕ್ಕೆ ಬೇಸರಗೊಂಡ ಅಭಿಮಾನಿ ಟಿವಿ ಚಾನೆಲ್ ಹೆಸರಲ್ಲಿ ಪತ್ರ ಬರೆದಿರುವ ಘಟನೆ ನಡೆದಿದೆ. ಸೂರ್ಯವಂಶಂ ಸಿನಿಮಾ ಪ್ರಸಾರ ಹಕ್ಕು ಸದ್ಯ ಸೋನಿ ಮ್ಯಾಕ್ಸ್ ಬಳಿ ಇದೆ. ಈ ಕಾರಣಕ್ಕೆ ಹಲವು ಬಾರಿ ಈ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಈ ಸಿನಿಮಾವನ್ನು ಈಗಲೂ ನೋಡುವ ಅಭಿಮಾನಿಗಳಿದ್ದಾರೆ.

ನೋಡಿ ನೋಡಿ ಬೇಸತ್ತ ವ್ಯಕ್ತಿಯೊಬ್ಬ ಚಾನೆಲ್ಗೆ ಪತ್ರ ಬರೆದಿದ್ದು ‘ಸೂರ್ಯವಂಶಂ ಚಿತ್ರದ ಪ್ರಸಾರ ಹಕ್ಕು ನಿಮ್ಮ ಬಳಿ ಇದೆ. ನಿಮ್ಮ ಕೃಪೆಯಿಂದ ಹೀರಾ ಸಿಂಗ್ ಕುಟುಂಬದ ಬಗ್ಗೆ ತಿಳಿದುಕೊಂಡಿದ್ದೇವೆ. ನೀವು ಎಷ್ಟು ಬಾರಿ ಈ ಚಿತ್ರವನ್ನು ಟೆಲಿಕಾಸ್ಟ್ ಮಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಸೂರ್ಯವಂಶಂ ಸಿನಿಮಾವನ್ನು ಭವಿಷ್ಯದಲ್ಲಿ ಎಷ್ಟು ಬಾರಿ ಪ್ರಸಾರ ಮಾಡಬೇಕು ಎಂದುಕೊಂಡಿದ್ದೀರಿ ಎಂಬುದು ನನಗೆ ಗೊತ್ತಾಗಬೇಕಿದೆ’ ಎಂದು ಉಲ್ಲೇಖಿಸಿದ್ದಾನೆ.

ಈ ಸಿನಿಮಾ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದರೆ ಇದಕ್ಕೆ ಯಾರು ಹೊಣೆ. ದಯವಿಟ್ಟು ತಿಳಿಸಿ ಎಂದು ವೀಕ್ಷಕನೋರ್ವ ಪ್ರಶ್ನೆ ಮಾಡಿದ್ದಾನೆ. ಅಂದಹಾಗೆ ಮೇ 21, 1999 ರಂದು ಅಮಿತಾಭ್ ಬಚ್ಚನ್ ಅವರ ಸೂಪರ್ ಹಿಟ್ ಚಿತ್ರ ಸೂರ್ಯವಂಶಂ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಸುಮಾರು 7 ಕೋಟಿಯಲ್ಲಿ ತಯಾರಾದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸುಮಾರು 12.64 ಕೋಟಿ ರೂಪಾಯಿ ಗಳಿಸಿ ಆ ಕಾಲದಲ್ಲೇ ದಾಖಲೆ ಬರೆದಿತ್ತು.