Home Entertainment ಅಮ್ಮನಾಗುವ ಸುಳಿವು ನೀಡಿದ ಸ್ಟಾರ್ ನಟಿ ನಯನತಾರಾ | ಅನುಮಾನಕ್ಕೆಡೆ ಮಾಡಿತು ವಿಘ್ನೇಶ್ ಶಿವನ್ ಪೋಸ್ಟ್...

ಅಮ್ಮನಾಗುವ ಸುಳಿವು ನೀಡಿದ ಸ್ಟಾರ್ ನಟಿ ನಯನತಾರಾ | ಅನುಮಾನಕ್ಕೆಡೆ ಮಾಡಿತು ವಿಘ್ನೇಶ್ ಶಿವನ್ ಪೋಸ್ಟ್ !!!

Hindu neighbor gifts plot of land

Hindu neighbour gifts land to Muslim journalist

ಸೌತ್ ಸ್ಟಾರ್ , ಯಾವ ನಟರಿಗೂ ಕಮ್ಮಿ ಇಲ್ಲದಂತೆ ಖ್ಯಾತಿ ಪಡೆದ ನಟಿ ನಯನತಾರಾ, ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಿದ ಬಳಿಕ ಸಿಕ್ಕಾಪಟ್ಟೆ ಪ್ರವಾಸ ಮಾಡುವ ಉತ್ಸಾಹದಲ್ಲಿದ್ದಾರೆ. ನಯನತಾರಾ ದಂಪತಿ ಮದುವೆ ಆದದ್ದೇ ತಡ ಸದಾ ವಿದೇಶಿ ಟ್ರಿಪ್ ನಲ್ಲೇ ಮುಳುಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರು ದುಬೈಗೆ ಹಾರಿದ್ದರು. ದುಬೈನಲ್ಲಿ ಮಸ್ತ್ ಮಜಾ ಮಾಡಿದ ಒಂದಿಷ್ಟು ಸುಂದರ ಫೋಟೋಗಳನ್ನು ಇವರು ಶೇರ್ ಮಾಡಿದ್ದಾರೆ.

ಹಾಗಾಗಿ ವಿಘ್ನೇಶ್ ಶಿವನ್ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಈ ಮಧ್ಯೆನೂ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ನಯನತಾರಾ ಬಗ್ಗೆ ಮತ್ತೊಂದು ಸುದ್ದಿಯೊಂದು ವೈರಲ್ ಆಗಿದೆ. ಹೌದು ನಯನತಾರಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ವಿಘ್ನೇಶ್ ಶಿವನ್ ಶೇರ್ ಮಾಡಿರುವ ಫೋಟೋ.

ಹೌದು, ಇತ್ತೀಚಿಗಷ್ಟೆ ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಈ ಫೋಟೋದಲ್ಲಿ ಪತ್ನಿ ನಯನಾತಾ ಮತ್ತು ಮೂವರು ಮಕ್ಕಳು ಪೋಸ್ ನೀಡಿದ್ದಾರೆ. ದಂಪತಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರೆ ಈ ಅನುಮಾನ ಬರ್ತಿರಲಿಲ್ಲ. ಆದರೆ ವಿಘ್ನೇಶ್ ನೀಡಿರುವ ಕ್ಯಾಪ್ಶನ್ ನಾಯನತಾರಾ ಗರ್ಭಿಣಿನಾ ಎನ್ನುವ ಅನುಮಾನ ಮೂಡಿಸಿದೆ. ಅಷ್ಟಕ್ಕೂ ವಿಘ್ನೇಶ್ ಏನ್ ಹೇಳಿದ್ದಾರೆ ಅಂತೀರಾ, ಫೋಟೋ ಹಾಕಿ, ‘ಮಕ್ಕಳ ಸಮಯ. ಮುಂದಿನ ದಿನಗಳಿಗೆ ಅಭ್ಯಾಸ ಮಾಡುತ್ತಿರುವುದು’ ಎಂದು ಹೇಳಿದ್ದಾರೆ.

ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಈ ಸ್ಟಾರ್ ಜೋಡಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ನಯನತಾರಾ ಮದುವೆ ಸಮಾರಂಭವನ್ನು ನೆಟ್‌ಫ್ಲಿಕ್ಸ್ ಸೆರೆಹಿಡಿದಿದ್ದು, ಸದ್ಯದಲ್ಲೇ ಸ್ಟ್ರೀಮಿಂಗ್ ಮಾಡಲಿದೆ. ಈಗಾಗಲೇ ಟೀಸರ್ ರಿಲೀಸ್ ಮಾಡಲಾಗಿದ್ದು ನಾಯನತಾರಾ ಅಭಿಮಾನಿಗಳಂತೂ ನಿಜಕ್ಕೂ ಕಾತುರದಿಂದ ಕಾಯುತ್ತಿದ್ದಾರೆ.