Home Breaking Entertainment News Kannada ಕನ್ನಡದ ಖ್ಯಾತ ನಟನ ಪಾಲಿಗೆ ಯುಎಇ ಗೋಲ್ಡನ್ ವೀಸಾ!! 40 ಮಂದಿ ಸೆಲೆಬ್ರೆಟಿಗಳು-ಕನ್ನಡಕ್ಕೆ ಇದೇ ಮೊದಲು!!

ಕನ್ನಡದ ಖ್ಯಾತ ನಟನ ಪಾಲಿಗೆ ಯುಎಇ ಗೋಲ್ಡನ್ ವೀಸಾ!! 40 ಮಂದಿ ಸೆಲೆಬ್ರೆಟಿಗಳು-ಕನ್ನಡಕ್ಕೆ ಇದೇ ಮೊದಲು!!

Hindu neighbor gifts plot of land

Hindu neighbour gifts land to Muslim journalist

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಗೋಲ್ಡನ್ ವೀಸಾ ಪಡೆದ ಮೊದಲ ಚಿತ್ರನಟ ಎನ್ನುವ ಹೆಗ್ಗಳಿಕೆಗೆ ಹೆಬ್ಬುಲಿ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.ಈ ಮೂಲಕ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ರಣವೀರ್ ಸಿಂಗ್, ಸಂಜಯ್ ದತ್ ಸಾಲಿಗೆ ಸುದೀಪ್ ಕೂಡಾ ಸೇರಿದ್ದಾರೆ.

ಇದು ಹತ್ತು ವರ್ಷಗಳ ದೀರ್ಘವಧಿ ಗೋಲ್ಡನ್ ವೀಸಾ ಇದಾಗಿದ್ದು, ಯುಎಇಯ ಇತರ ಎಮಿರೇಟ್ ಗಳಿಗೆ ಬಯಸಿದಾಗ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ. ಗೋಲ್ಡನ್ ವೀಸಾ ಯುಎಇ ಯ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡಬಲ್ಲ ವ್ಯಕ್ತಿಗಳು, ಉದ್ಯಮಿಗಳು ಹಾಗೂ ವಿದೇಶಿ ನಾಗರಿಕರಿಗೆ ಒದಗಿಸಲಾಗುತ್ತದೆ.

ಕಳೆದ 2019 ರಿಂದ ಇಂತಹ ಗೋಲ್ಡನ್ ವೀಸಾ ನೀಡುತ್ತಾ ಬರಲಾಗಿದ್ದು, ಈ ವೀಸಾದಡಿಯಲ್ಲಿ ಯಾವುದೇ ಹೂಡಿಕೆದಾರರ ಸಮಕ್ಷಮದಲ್ಲಿ ಉದ್ಯಮ ನಡೆಸಲು,ಅನುಮತಿ ಇಲ್ಲದೆ ವಿದ್ಯಾಭ್ಯಾಸ ನಡೆಸಲು ಅವಕಾಶವಿದೆ.

ಯುಎಇ ಗೋಲ್ಡನ್ ವೀಸಾ ಹೊಂದಿರುವ ಇತರ ಭಾರತೀಯ ಸೆಲೆಬ್ರಿಟಿಗಳಲ್ಲಿ ಸೋನು ನಿಗಮ್, ಮೋಹನ್ ಲಾಲ್, ಮಮ್ಮುಟ್ಟಿ, ಸುನಿಲ್ ಶೆಟ್ಟಿ ಅಲ್ಲದೇ ಇಡೀ ವಿಶ್ವದಲ್ಲೇ 40 ಸೆಲೆಬ್ರಿಟಿಗಳಿಗೆ ಯುಎಇ ತನ್ನ ಗೋಲ್ಡನ್ ವೀಸಾ ನೀಡಿದೆ.