Home latest Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಗುಡ್ ನ್ಯೂಸ್- ನವೀಕರಣ ಮಾಡಲು ಗಡುವು...

Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಗುಡ್ ನ್ಯೂಸ್- ನವೀಕರಣ ಮಾಡಲು ಗಡುವು ವಿಸ್ತರಣೆ – ಎಲ್ಲಿವರೆಗೆ ಗೊತ್ತಾ?

Image source: India Today.in

Hindu neighbor gifts plot of land

Hindu neighbour gifts land to Muslim journalist

Aadhaar Update : ಆಧಾರ್ ಕಾರ್ಡ್(Aadhaar Card) ಹೊಂದಿರುವವರಿಗೆ ಭರ್ಜರಿ ಶುಭ ಸುದ್ದಿಯೊಂದು ಹೊರಬಿದ್ದಿದೆ. ಉಚಿತ ಆಧಾರ್ ಕಾರ್ಡ್ ನವೀಕರಣ ಸೇವೆಗಳ ಗಡುವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದೇ ಇದ್ದಲ್ಲಿ ಈ ಉಚಿತ ನವೀಕರಣ ಯೋಜನೆಯಡಿಯಲ್ಲಿ ತಮ್ಮ ಆಧಾರ್ ವಿವರಗಳನ್ನು ಬದಲಾಯಿಸಬಹುದು ಎಂದು UIDAI ಸೂಚಿಸಿದೆ. ಯುಐಡಿಎಐ ಇದೀಗ ಉಚಿತ ಆಧಾರ್ ನವೀಕರಣದ ಗಡುವನ್ನು ಸೆಪ್ಟೆಂಬರ್ 15 ರಿಂದ ಡಿಸೆಂಬರ್ 14 ರವರೆಗೆ ವಿಸ್ತರಿಸಿದ್ದು, ಜನರು ತಮ್ಮ ಆಧಾರ್ ದಾಖಲೆಯಲ್ಲಿನ ವಿವರಗಳನ್ನು ಮೈ ಆಧಾರ್ ಪೋರ್ಟಲ್ (My Aadhar Portal)ಮುಖಾಂತರ ಉಚಿತವಾಗಿ ನವೀಕರಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆಧಾರ್ ಕಾರ್ಡ್ ಉಚಿತ ಅಪ್‌ಡೇಟ್ (Aadhar Update) ಅವಧಿ ಸೆಪ್ಟೆಂಬರ್ 14 ರಂದು ಮುಗಿಯಬೇಕಿತ್ತು. ಆದಾಗ್ಯೂ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ಇತ್ತೀಚೆಗೆ ಈ ಗಡುವನ್ನು ಡಿಸೆಂಬರ್ 14 ರವರೆಗೆ ವಿಸ್ತರಿಸಿದ್ದು, ಅಂದರೆ ಇನ್ನೂ ಮೂರು ತಿಂಗಳು ಗಡುವು ನೀಡಲಾಗಿದೆ. ಈ ಕುರಿತು ಯುಐಡಿಎಐ ಕಚೇರಿ ಪತ್ರವನ್ನು ನೀಡಿದ್ದು, ಇದರ ಅನುಸಾರ, ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ನವೀಕರಿಸಲು ಈ ಉಚಿತ ನವೀಕರಣ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಘೋಷಿಸಲಾಗಿದೆ.

ಆಧಾರ್ ವಿವರಗಳನ್ನು ನವೀಕರಿಸಲು ಐಡಿ ಪ್ರೂಫ್, ವಿಳಾಸ ಪುರಾವೆಯಂತಹ ದಾಖಲೆಗಳು ಬೇಕಾಗುತ್ತವೆ. ನೀವು ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ವಿವರಗಳನ್ನು ನವೀಕರಿಸಲು ಬಯಸಿದಲ್ಲಿ, ನೀವು 25 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆಧಾರ್ ನೋಂದಣಿ ಅಥವಾ ನವೀಕರಣ ಸ್ಥಿತಿಯನ್ನು ಪರಿಶೀಲಿಸಲು 1947 ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಇದರಿಂದ ನಿಮ್ಮ ನವೀಕರಣದ ವಿವರಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.