Home latest 8 ವರ್ಷಗಳ ಪ್ರೀತಿಗೆ ಕೊಳ್ಳಿ ಇಟ್ಟ ಪ್ರೇಯಸಿ, ಲಗ್ನ ಪತ್ರಿಕೆ ನೋಡಿ ದಂಗಾದ ಪ್ರಿಯಕರ! ನಂತರ...

8 ವರ್ಷಗಳ ಪ್ರೀತಿಗೆ ಕೊಳ್ಳಿ ಇಟ್ಟ ಪ್ರೇಯಸಿ, ಲಗ್ನ ಪತ್ರಿಕೆ ನೋಡಿ ದಂಗಾದ ಪ್ರಿಯಕರ! ನಂತರ ಆದದ್ದೇನು?

suicide attempt

Hindu neighbor gifts plot of land

Hindu neighbour gifts land to Muslim journalist

suicide attempt: ಪ್ರೀತಿ-ಪ್ರೇಮದ ವಿಚಾರದಲ್ಲಿ ನಡೆಯುವ ಘಟನೆಗಳು ಸಾಕಷ್ಟು. ಕೆಲವೊಮ್ಮೆ ಈ ಪ್ರೀತಿ (love) ಕೊಲೆ (murder)ಗೂ ಕಾರಣವಾಗುತ್ತದೆ. ಅಲ್ಲದೆ, ಪ್ರೀತಿಯ ಕಾರಣ ಸಾವಿನ ಬಾಗಿಲು ತಟ್ಟುವವರು ಅದೆಷ್ಟೋ ಜನ. ತಮ್ಮದೇ ಲೋಕವನ್ನು ಸೃಷ್ಟಿಸಿ, ಅಲ್ಲಿ ಜೀವಿಸುವ ಕನಸು ಹೊತ್ತಿರುವ ಪ್ರೇಮಿಗಳು ಕೊನೆಗೆ ಹೆತ್ತವರ ಕಟ್ಟುಪಾಡಿಗೆ ಬಿದ್ದು ದೂರಾಗಿ, ಅನಾಹುತಗಳನ್ನು ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಇದೀಗ ಅಂತಹದೇ ಘಟನೆಯೊಂದು ಬೆಳಕಿಗೆ ಬಂದಿದೆ.

ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆ ಎಂದು ತಿಳಿದು, ಮನನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿರುವ (suicide attempt) ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್​ನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನ ಹೆಸರು ಅರುಣ್ (35) ಎಂದು ಹೇಳಲಾಗಿದ್ದು, ಈತ ಕಳೆದ ಎಂಟು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಯುವತಿ(girl) ಕೂಡ ಅರುಣ್​(Arun)ನನ್ನು ಪ್ರೀತಿಸುತ್ತಿದ್ದಳು. ಎಂಟು ವರ್ಷಗಳ ಕಾಲ ಅಡೆತಡೆ ಬಾರದ ಪ್ರೀತಿಗೆ, ಇದೀಗ ದಿಡೀರ್ ಶಾಕ್ ಬಂದೊದಗಿದೆ. ಹೌದು, ಇವರ ಪ್ರೀತಿಗೆ ಹೆತ್ತವರು ತಡೆಯಾಗಿದ್ದಾರೆ.

ಯುವತಿಗೆ ಆಕೆಯ ಮನೆಯವರು ಬೇರೆ ಹುಡುಗನ ಜೊತೆ ಮದುವೆ (marriage) ಫಿಕ್ಸ್​ ಮಾಡಿದ್ದಾರೆ. ಈ ವಿಚಾರ ತಿಳಿದು ಅರುಣ್​ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ (hospital)ಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಇವರಿಬ್ಬರು ಪೊಷಕರಿಗೆ ತಿಳಿಸದೇ ಮೂರು ವರ್ಷಗಳ ಹಿಂದೆ ಚಾಮುಂಡಿಬೆಟ್ಟ ದೇವಸ್ಥಾನದಲ್ಲಿ ಮದುವೆಯಾಗಿದ್ದರಂತೆ. ಬಳಿಕ ಎರಡು ಮನೆಯವರನ್ನು ಒಪ್ಪಿಸಿ ಅಧಿಕೃತವಾಗಿ ಮದುವೆಯಾಗುವ ಪ್ಲಾನ್​ನಲ್ಲಿದ್ದರಂತೆ. ಆದ್ರೆ ಯುವತಿಯ ಪೋಷಕರು ಆಕೆಗೆ ಬೇರೆ ಗಂಡು ಹುಡುಕಿದ್ದರು. ಹಾಗೂ ಮದುವೆ ಫಿಕ್ಸ್ ಮಾಡಿ, ಆಹ್ವಾನ ಪತ್ರಿಕೆಯೂ(marriage invitation card) ಹಂಚಿದ್ದಾರೆ.

ಪ್ರೇಯಸಿಯ ಮದುವೆ ಕಾರ್ಡ್ ಅರುಣ್ ಗೂ ಸಿಕ್ಕಿದ್ದು, ಅದನ್ನು
ಕಂಡ ಅರುಣ್ ಬೆಚ್ಚಿಬಿದ್ದಿದ್ದಾನೆ. ಕೂಡಲೇ ಯುವತಿಯ ಸಂಪರ್ಕಕ್ಕೆ ಯತ್ನಿಸಿದ್ದಾನೆ. ಆದ್ರೆ, ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಇದರಿಂದ
ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.