Home latest ಕೊಲ್ಲುವುದು ಹೇಗೆಂದು ಗೂಗಲ್ ಮಾಡಿ, ತನ್ನ 3 ತಿಂಗಳ ಕಂದಮ್ಮನನ್ನೇ ನಿರ್ದಯಿಯಾಗಿ ಕೊಂದ ಪಾಪಿ ತಾಯಿ!!

ಕೊಲ್ಲುವುದು ಹೇಗೆಂದು ಗೂಗಲ್ ಮಾಡಿ, ತನ್ನ 3 ತಿಂಗಳ ಕಂದಮ್ಮನನ್ನೇ ನಿರ್ದಯಿಯಾಗಿ ಕೊಂದ ಪಾಪಿ ತಾಯಿ!!

Hindu neighbor gifts plot of land

Hindu neighbour gifts land to Muslim journalist

ಇಂದಿನ ಡಿಜಿಟಲ್ ಯುಗ ಕೆಲವರಿಗೆ ಒಳಿತನ್ನು ಮಾಡಿದರೆ ಇನ್ನೂ ಕೆಲವರಿಗೆ ಕೆಡುಕು ನೀಡುತ್ತದೆ. ಆದರೆ ಇವೆಲ್ಲವೂ ವ್ಯಕ್ತಿಯ ಗುಣ-ನಡತೆಯ ಮೇಲೆ ಅವಲಂಬಿಸಿರುತ್ತದೆ. ಆದ್ರೆ ಇಲ್ಲೊಂದು ಕಡೆ ಈ ಟೆಕ್ನಾಲಜಿಯನ್ನು ಮಹಿಳೆ ಹೇಗೆ ಬಳಸಿಕೊಂಡಿದ್ದಾಳೆ ನೀವೇ ನೋಡಿ.

ಹೌದು.ಮಹಿಳೆಯೊಬ್ಬಳು,ಒಬ್ಬ ವ್ಯಕ್ತಿಯನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವುದು ಹೇಗೆ ಎಂದು ಆನ್​ಲೈನ್​​ನಲ್ಲಿ ನೋಡಿದ ಬಳಿಕ ತನ್ನ ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ್ದಾಳೆ.ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಕಚ್ರೋಡ್​ ಎಂಬಲ್ಲಿ ಘಟನೆ ನಡೆದಿದ್ದು,ಅಕ್ಟೋಬರ್​ 12ರಂದು ಘಟನೆ ನಡೆದಿದ್ದರೂ ಶುಕ್ರವಾರವಷ್ಟೇ ಆಕೆಯ ಬಂಧನವಾಗಿದೆ. ಈ ಘಟನೆ ಬಗ್ಗೆ ಪೊಲೀಸರು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 12ರಂದು ಈ ಮಹಿಳೆ ತನ್ನ ಹೆಣ್ಣು ಮಗು ಕಾಣುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ. ಗಾಬರಿಗೊಂಡ ಕುಟುಂಬದವರು ಮಗುವನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ. ಎಲ್ಲ ಕಡೆ ಹುಡುಕಿದ ಬಳಿಕ ಅವರ ಮನೆಯ ಮೇಲಿದ್ದ ನೀರಿನ ಟ್ಯಾಂಕ್​​ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರು ಅಕ್ಟೋಬರ್​ 21ರಂದು ಮಹಿಳೆ ಮತ್ತಾಕೆಯ ಪತಿಯನ್ನು ಬಂಧಿಸಿದ್ದಾರೆ. ಅಂದಹಾಗೆ ಮಹಿಳೆ ತನ್ನ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವ ಸಂದರ್ಭದಲ್ಲಿ ಆಕೆಯ ಪತಿ ಮನೆಯಲ್ಲಿಯೇ ಆನ್​​ಲೈನ್​ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಎಂಬುದು ಗೊತ್ತಾಗಿದೆ.

2018ರಿಂದಲೂ ಈ ಮಹಿಳೆ ತಾವು ಪ್ರತ್ಯೇಕವಾಗಿ ವಾಸಿಸೋಣ ಎಂದು ಪತಿಯನ್ನು ಒತ್ತಾಯಿಸುತ್ತಲೇ ಇದ್ದಳು. ಆದರೆ ಆಗಿರಲಿಲ್ಲ. ಈಗ ಅದೇ ಸಿಟ್ಟಿಗೆ ಮೂರು ತಿಂಗಳ ಮಗುವನ್ನು ಕೊಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಆಕೆ ಮಗುವನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರೂ ಅದರ ಹಿಂದಿನ ಕಾರಣವನ್ನು ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ವಿಚಾರಣೆ ಮುಂದುವರಿಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.