Home latest ಎರಡು ವರ್ಷದ ಪುಟ್ಟ ಕಂದನ ಮೇಲೆ ಸ್ವಂತ ದೊಡ್ಡಪ್ಪನಿಂದಲೇ ಅತ್ಯಾಚಾರ| ವಿಕೃತ ಕಾಮಿಯ ಚಟಕ್ಕೆ ಹಾಲುಗಲ್ಲದ...

ಎರಡು ವರ್ಷದ ಪುಟ್ಟ ಕಂದನ ಮೇಲೆ ಸ್ವಂತ ದೊಡ್ಡಪ್ಪನಿಂದಲೇ ಅತ್ಯಾಚಾರ| ವಿಕೃತ ಕಾಮಿಯ ಚಟಕ್ಕೆ ಹಾಲುಗಲ್ಲದ ಕಂದನ ಉಸಿರು ಸ್ತಬ್ಧ|

Hindu neighbor gifts plot of land

Hindu neighbour gifts land to Muslim journalist

ವಿಕೃತ ಕಾಮುಕನೊಬ್ಬ ತನ್ನ ತಮ್ಮನ ಎರಡು ವರ್ಷದ ಪುಟ್ಟ ಕಂದನ ಮೇಲೆ ಅತ್ಯಾಚಾರ ನಡೆಸಿದ್ದರಿಂದಾಗಿ ಮಗುವಿಗೆ ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟ ಅಮಾನುಷ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ.

ಈ ಪೈಶಾಚಿಕ ಕೃತ್ಯ ಮಾಡಿದ ಆರೋಪಿ ದೀಪು. ಅತ್ತಿಬೆಲೆ ಸಮೀಪದ ನೆರಳೂರಲ್ಲಿ ವಾಸವಿದ್ದ ದೀಪು, ಮಾ.20 ರಂದು ಮಗುವನ್ನು ತನ್ನ ಸಹೋದರನಿದ್ದ ಊರಿಗೆ ಕಾರಿನಲ್ಲಿ ತನ್ನ ಸ್ನೇಹಿತನ ಜೊತೆ ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸ್ನೇಹಿತನನ್ನು ಕೆಳಗಿಳಿಸಿ ಮದ್ಯ ತರುವಂತೆ ಹೇಳಿದ್ದ, ಆತ ಅತ್ತ ಹೋಗುತ್ತಲೇ, ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಕಾಮುಕ ದೊಡ್ಡಪ್ಪನ ಈ ಕೃತ್ಯಕ್ಕೆ ಮಗುವಿನ ಉಸಿರು ಸ್ತಬ್ಧವಾಗಿದೆ. ಇದರಿಂದ ಹೆದರಿದ ಕಾಮುಕ ದೀಪು ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಗುವಿನ ತಲೆಗೆ ಗಾಯ ಆಗಿದೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಅತ್ತಿಬೆಲೆ ಪೊಲೀಸ್ ಸ್ಟೇಷನ್ ಗೆ ಹೋಗಿ ಹಠಾತ್ತನೆ ಕಾರಿನ ಬ್ರೇಕ್ ಹಾಕಿದ್ದರಿಂದ ಬಿದ್ದು ತಲೆಗೆ ಗಾಯವಾಗಿ ಮಗು ಮೃತಪಟ್ಟಿದ್ದಾಗಿ ದೂರು ದಾಖಲಿಸಿದ್ದ. ಆದರೆ ಆತನ ನಡವಳಿಕೆ ಬಗ್ಗೆ ಪೊಲೀಸರು ಅನುಮಾನಗೊಂಡು ಮಗುವಿನ ಮರಣೋತ್ತರ ಪರೀಕ್ಷೆಗೆ ಶಿಫಾರಸು ಮಾಡಿದ್ದರು.

ಈಗ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಕಾಮುಕ ನೀಚ ದೊಡ್ಡಪ್ಪ ದೀಪು ಎಂಬಾತನನ್ನು ಪೋಕ್ಸೋ ಅಡಿ ಪೊಲೀಸರು ಬಂಧಿಸಿದ್ದಾರೆ.