Home latest Heart attack: ಆಟವಾಡಿ ಬಂದು ಮಲಗಿದ ಬಾಲಕಿ ಹೃದಯಾಘಾತಕ್ಕೆ ಬಲಿ!

Heart attack: ಆಟವಾಡಿ ಬಂದು ಮಲಗಿದ ಬಾಲಕಿ ಹೃದಯಾಘಾತಕ್ಕೆ ಬಲಿ!

Heart attack

Hindu neighbor gifts plot of land

Hindu neighbour gifts land to Muslim journalist

Girl dies of heart attack : ಹೃದಯದ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಸುಳ್ಳಲ್ಲ. ಇತ್ತೀಚಿನ ದಿನಗಳಲ್ಲಿ ಹೃದಯಘಾತವಾಗಿ ಸಾವನ್ನಪ್ಪಿದ ಅದೆಷ್ಟೋ ದಾರುಣ ಘಟನೆಗಳ ಬಗ್ಗೆ ಕೇಳೋದು ಸಾಮಾನ್ಯ ವಿಚಾರ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ತೆಲಂಗಾಣದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಹಠಾತ್ ಹೃದಯಾಘಾತಕ್ಕೆ (Girl dies of heart attack) ಬಲಿಯಾಗುತ್ತಿರುವ ಪ್ರಕರಣ ವರದಿಯಾಗುತ್ತಿದೆ. ಇದೀಗ, ನಿನ್ನೆ ಬೆಳಿಗ್ಗೆ 13ರ ಹರೆಯದ ಬಾಲಕಿಯೊಬ್ಬಳು ಮಹಬೂಬಾಬಾದ್‌ನ ಮಾರಿಪೇಡಾ ಮಂಡಲದ ಅಬ್ಬೈಪಾಲೆಂ ಗ್ರಾಮದಲ್ಲಿ ಹೃದಯಾಘಾತದಿಂದ ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ.

ಮಹಬೂಬಾಬಾದ್‌ನ ಮಾರಿಪೇಡಾ ಮಂಡಲದ ಅಬ್ಬೈಪಾಲೆಂ ಗ್ರಾಮದಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ ಶ್ರವಂತಿ ಗುರುವಾರ ರಾತ್ರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಮನೆ ಮಂದಿಗೆ ವಿಚಾರ ತಿಳಿದು ತಕ್ಷಣವೇ ಆಸ್ಪತ್ರೆಗೆ ಕರೆ ದೊಯ್ಯಲು ಮುಂದಾದ ಸಂದರ್ಭವೇ ವಿದ್ಯಾರ್ಥಿನಿ (Student)ಕುಸಿದು ಬಿದ್ದು ಮೃತಪಟ್ಟಿದ್ದಾಳೆ(Death) ಎಂಬ ವಿಚಾರ ತಿಳಿದುಬಂದಿದೆ.

ಗುರುವಾರ ಶ್ರೀರಾಮ ನವಮಿಯ ಹಿನ್ನೆಲೆ ಶಾಲೆಗಳಿಗೆ ರಜೆಯಿದ್ದುದರಿಂದ ಬಾಲಕಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ಅಜ್ಜಿಯ ಮನೆಯಲ್ಲಿ ಮಲಗಿದ್ದಳು ಎನ್ನಲಾಗಿದೆ. ಈಕೆ ಮಾರಿಪೇಡಾದ ಖಾಸಗಿ ಶಾಲೆಯಲ್ಲಿ 6 ನೆ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಾಲಕಿಯ ಪೋಷಕರು (Parents) ಕೃಷಿಕರಾಗಿದ್ದು, ಈ ದಂಪತಿಗೆ ಈಕೆ ಎರಡನೇ ಮಗಳು ಎಂದು ತಿಳಿದು ಬಂದಿದೆ. ಇನ್ನು, ಗುರುವಾರ ರಾತ್ರಿ ಮಲಗಿದ ಕೆಲವು ಗಂಟೆಗಳ ಬಳಿಕ, 12.30 ರ ಸುಮಾರಿಗೆ ಬಾಲಕಿಗೆ (Girl) ಎಚ್ಚರವಾಗಿ ಉಸಿರಾಟದ ಸಮಸ್ಯೆ ಕಂಡುಬಂದಿದೆ ಎನ್ನಲಾಗಿದೆ.

ಈ ಸಂದರ್ಭ ಬಾಲಕಿಗೆ ಎದೆಯಲ್ಲಿ ನೋವು (Chest pain) ಕಾಣಿಸಿಕೊಂಡಿದ್ದು ಇದನ್ನು ತನ್ನ ಅಜ್ಜಿಗೆ ತಿಳಿಸಿದ್ದಾಳೆ. ಕೂಡಲೇ ಕುಟುಂಬದ ಸದಸ್ಯರು ಅವಳನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಆಟೋವನ್ನು ಕರೆತರುವ ವೇಳೆಗೆ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದ್ದು ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ನಡುವೆ ಹುಡುಗಿಯ ಚಿಕ್ಕಪ್ಪ ಅವಳಿಗೆ ಸಿಪಿಆರ್ ನೀಡಲು ಪ್ರಯತ್ನ ಪಟ್ಟಿದ್ದು ಅದು ಯಶಸ್ಸು ಕಂಡಿಲ್ಲ ಎನ್ನಲಾಗಿದೆ. ಏನೇ ಆದರೂ ಬಾಳಿ ಬದುಕಬೇಕಿದ್ದ ಕುಸುಮ ಅರಳುವ ಮುನ್ನವೇ ಯಾತ್ರೆ ಮುಗಿಸಿದ್ದು ವಿಪರ್ಯಾಸ. ಈ ನಡುವೆ ಬಾಲಕಿಯ ಮನೆಯವರ(Family) ಆಕ್ರಂದನ ಮುಗಿಲು ಮುಟ್ಟಿದೆ.