Home Jobs KPSC ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ 229...

KPSC ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ 229 ಹುದ್ದೆಗಳು,ಇಂದೇ ಅರ್ಜಿ ಸಲ್ಲಿಸಿ ಅವಕಾಶ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಲೋಕಸೇವಾ ಆಯೋಗ (KPSC) ವು ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಗ್ರೂಪ್ ಬಿ ವೃಂದದ 229 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗ್ರೂಪ್ ಬಿ ವೃಂದದಲ್ಲಿನ ಉಳಿಕೆ ಮೂಲ ವೃಂದದ ಸಹಾಯಕ ಅಭಿಯಂತರರು 129 ಹುದ್ದೆಗಳು ಮತ್ತು ಹೈದರಾಬಾದ್ ಕರ್ನಾಟಕ 59 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಸ್ತುತ ಇಲಾಖೆಯವರು ಸದರಿ ಹುದ್ದೆಗಳಿಗೆ ಉಳಿಕೆ ಮೂಲ ವೃಂದದಲ್ಲಿ ಮತ್ತೆ 100 ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 21-02- 2022 ರಂದು ಅಧಿಸೂಚಿಸಿರುವ ಹುದ್ದೆಗಳಿಗೆ ಇದುವರೆಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿರುವುದಿಲ್ಲ. ಆದ್ದರಿಂದ ಪ್ರಸ್ತುತ ಸ್ವೀಕೃತವಾಗಿರುವ 100 ಹುದ್ದೆಗಳ ಪ್ರಸ್ತಾವನೆಯನ್ನು ಈ ಹಿಂದಿನ ದಿನಾಂಕ 21-02-2022 ರ ಅಧಿಸೂಚನೆಯಲ್ಲಿನ ಉಳಿಕೆ ಮೂಲ ವೃಂದದ 129 ಹುದ್ದೆಗಳೊಂದಿಗೆ ಸೇರ್ಪಡೆ ಮಾಡಲು ಆಯೋಗವು ನಿರ್ಣಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಒಟ್ಟು ಹುದ್ದೆಗಳನ್ನು ಪರಿಷ್ಕೃತ ವರ್ಗೀಕರಣವನ್ನು ಪ್ರಕಟಿಸಲಾಗಿದೆ.

ಉಳಿಕೆ ಮೂಲ ವೃಂದದ ಗ್ರೂಪ್ ಬಿ ಸಹಾಯಕ ಅಭಿಯಂತರರು ಹುದ್ದೆಗಳ ಸಂಖ್ಯೆ: 229 ಹೈದೆರಾಬಾದ್ ಕರ್ನಾಟಕದ ವೃಂದದ ಗ್ರೂಪ್ ಬಿ ಸಹಾಯಕ ಅಭಿಯಂತರರು ಹುದ್ದೆಗಳ ಸಂಖ್ಯೆ: 59

ಒಟ್ಟು ಹುದ್ದೆಗಳ ಸಂಖ್ಯೆ : 288

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-09-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2022
ರಾತ್ರಿ 11-45 ರವರೆಗೆ,
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ:01-10-2022

ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : Rs.600. EWS, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ :Rs.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : Rs.50.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ,
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ

ವಿದ್ಯಾರ್ಹತೆ : ಕರ್ನಾಟಕ ರಾಜ್ಯ ಸರ್ಕಾರದಿಂದ ಗುರುತಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಬಿಇ ಇನ್ ಸಿವಿಲ್ / ಪರಿಸರ ವಿಷಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ. EWS, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38
ವರ್ಷ ಗರಿಷ್ಠ.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ