Home Jobs 14 ದಿನದಲ್ಲಿಯೇ ನೀವು ಗಳಿಸಬಹುದು ಬರೋಬ್ಬರಿ 9 ಲಕ್ಷ !! | ಹೀಗಿದೆ ನೋಡಿ ಈ...

14 ದಿನದಲ್ಲಿಯೇ ನೀವು ಗಳಿಸಬಹುದು ಬರೋಬ್ಬರಿ 9 ಲಕ್ಷ !! | ಹೀಗಿದೆ ನೋಡಿ ಈ ಉದ್ಯೋಗದ ವಿವರ

Hindu neighbor gifts plot of land

Hindu neighbour gifts land to Muslim journalist

ಕೆಲಸ ಒಂದು ವ್ಯಕ್ತಿಯ ಮುಖ್ಯವಾದ ಅಂಗವೆಂದೇ ಹೇಳಬಹುದು. ಇವಾಗ ಅಂತೂ ಒಂದು ಒಳ್ಳೆಯ ಕೆಲಸಕ್ಕೆ ಎಷ್ಟು ಹುಡುಕಿದರೂ ಸಿಗುವುದಿಲ್ಲ.ಕೆಲವರು ಒಂದು ಕೆಲಸ ಸಾಕು ಎಂದರೆ ಇನ್ನೂ ಕೆಲವರು ಆರಾಮವಾಗಿ ಕುಳಿತು, ಕೈ ತುಂಬಾ ಸಂಬಳ ಬಯಸುವ ಕೆಲಸದ ಹುಡುಕಾಟದಲ್ಲಿರುತ್ತಾರೆ.

ಇಂತಹ ಸುಲಭ ಕೆಲಸ ಹುಡುಕೋರಿಗೆ ಇಲ್ಲೊಂದು ಕೆಲಸಗಾರ ಬೇಕಾಗಿದ್ದಾರೆ. ಹೌದು. ಈ ಕೆಲಸದಲ್ಲಂತೂ ಹಣವೇ ಹಣ.ಈ ಕೆಲಸ ಕಷ್ಟಪಟ್ಟು 5-6 ವರ್ಷ ದುಡಿದು ಸಂಪಾದಿಸುವ ಹಣವನ್ನು ಕೇವಲ 14 ದಿನದಲ್ಲೇ ದುಡಿಯಬಹುದಾದಾ ವರ್ಕ್.ಮಾತ್ರವಲ್ಲದೆ 14 ದಿನ ದುಡಿದರೆ ಸಾಕು 9 ಲಕ್ಷ ರೂಪಾಯಿ ಗಳಿಸಬಹುದು.

ಅಷ್ಟಕ್ಕೂ ಯಾವ ರೀತಿಯ ಕೆಲಸ ಇದೆಂದು ಯೋಚಿಸುತಿದ್ದೀರೆ? ಇಲ್ಲಿದೆ ನೋಡಿ.ನೀವು ಈ ಕೆಲಸದ ಕುರಿತು ಕೇಳಿದಾಗ ಒಮ್ಮೆಗೆ ಸುಳ್ಳು ಮಾಹಿತಿ ಎನ್ನಬಹುದು. ಆದ್ರೆ ಇದರ ನಿಯಮಿತ ಜಾಹೀರಾತನ್ನು ಸಹ ಪ್ರಕಟಿಸಲಾಗಿದೆ.ಈ ಉದ್ಯೋಗವು ಯುಕೆಯ ಎಡಿನ್‌ಬರ್ಗ್‌ನಲ್ಲಿದ್ದು,ಕೆಲಸವು ಡಿಸೆಂಬರ್ 22 ರಿಂದ ಜನವರಿ 5 ರ ಅವಧಿಯವರೆ ಇದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಉದ್ಯೋಗ ದಾದಿ ಹುದ್ದೆ. ಮಕ್ಕಳನ್ನು ನೋಡಿಕೊಳ್ಳಲು ದಾದಿ ಬೇಕು ಎಂದು ಕುಟುಂಬ ಘೋಷಿಸಿದೆ. ಆದರೆ ಕ್ರಿಸ್‌ಮಸ್ ಸಮಯವಾದ್ದರಿಂದ ದಾದಿ ಹುಡುಕುವುದೇ ಕಷ್ಟವಾದ್ದರಿಂದ, ಈ ದೊಡ್ಡ ಸಂಬಳವನ್ನು ನೀಡಲಾಗಿದೆ.ಕುಟುಂಬವೊಂದಕ್ಕೆ ಅವಳಿ ಮಕ್ಕಳಿದ್ದು, ಆ ಮಕ್ಕಳನ್ನು 14 ದಿನಗಳ ಕಾಲ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಅವಳು ಮನೆಯಿಂದ ಹೊರ ಹೋಗಲು ಸಾಧ್ಯವಿಲ್ಲ. ಕ್ರಿಸ್‌ಮಸ್ ದಿನದಂದು ಸಹ, ಅವಳು ಕೆಲಸದಲ್ಲಿರುತ್ತಾರೆ ಮತ್ತು ಮಕ್ಕಳನ್ನು ನೋಡಿಕೊಳ್ಳಬೇಕು. ದಾದಿ ಮಕ್ಕಳಿಗೆ ಸ್ನಾನ ಮಾಡಿಸಬೇಕು, ತಿನ್ನಿಸಬೇಕು, ಆಟವಾಡಬೇಕು.

ಈ ಕೆಲಸಕ್ಕಾಗಿ ಕುಟುಂಬವು ದಿನಕ್ಕೆ 600 ಯುರೋಗಳನ್ನು ಅಂದರೆ 59,000 ರೂಪಾಯಿ ಪಾವತಿಸಲು ಸಿದ್ಧವಾಗಿದೆ. ಅಂದರೆ 14 ದಿನಗಳ ಸೇವೆಯ ನಂತರ ವ್ಯಕ್ತಿಗೆ 9 ಲಕ್ಷ ರೂ. ಇದಲ್ಲದೇ ದಾದಿಯ ಪ್ರಯಾಣ ವೆಚ್ಚವನ್ನೂ ಕುಟುಂಬವೇ ಭರಿಸಲಿದೆ.ಇಷ್ಟು ಒಳ್ಳೆ ಆರಾಮದಾಯಕ ಕೆಲಸ ಎಲ್ಲಿ ಸಿಗುತ್ತೆ ಹೇಳಿ? ನಿಮಗೂ 14 ದಿನದಲ್ಲಿ 9 ಲಕ್ಷ ಬೇಕಿದ್ರೆ ಈ ಕೆಲಸದಲ್ಲಿ ತೊಡಗಿಕೊಳ್ಳಿ!.