Home Jobs ಪಿಯುಸಿ ವಿದ್ಯಾರ್ಹತೆ ಇದ್ದೂ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ!!

ಪಿಯುಸಿ ವಿದ್ಯಾರ್ಹತೆ ಇದ್ದೂ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉದ್ಯೋಗರಹಿತ ಪುರುಷ ಅಭ್ಯರ್ಥಿಗಳಿಗಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ವತಿಯಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಸುಮಾರು 18ಸಾವಿರಕ್ಕೂ ಮಿಕ್ಕ ವೇತನಗಳನ್ನು ಒಳಗೊಂಡಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಜಿಯೋ ಫೈಬರ್ ಇಂಜಿನಿಯರ್, ಪಾಯಿಂಟ್ ಅಸಿಸ್ಟೆಂಟ್ ಮ್ಯಾನೇಜರ್, ಪೈಬರ್ ಅಸೋಸಿಯೇಟ್ಸ್ ಸಹಿತ ಮೂವತ್ತು ಹುದ್ದೆಗಳು ಖಾಲಿ ಇದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಅಭ್ಯರ್ಥಿಗಳು 32 ವರ್ಷ ವಯಸ್ಸಿಗಿಂತ ಕೆಳಗಿನವರಾಗಿದ್ದು, ಸ್ವ-ವಿವರ ಸಹಿತ ಸೆ.14 ರ ಮುಂಜಾನೆ 10 ರಿಂದ 1:30 ರ ವರೆಗೆ ನೇರ ಸಂದರ್ಶನಕ್ಕಾಗಿ ಮಂಗಳೂರಿನ ಬಲ್ಲಾಳ್ ಬಾಗ್ ಸಮೀಪವಿರುವ ಮಹಾನಗರ ಪಾಲಿಕೆಯ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಹಾಜರಾಗಲು ಕೋರಲಾಗಿದೆ.