Home Education KSOU: ಬಿ.ಎಡ್‌ ಪ್ರವೇಶಾತಿಗೆ ಕಾಯುವವರಿಗೆ ಮುಖ್ಯವಾದ ಮಾಹಿತಿ!

KSOU: ಬಿ.ಎಡ್‌ ಪ್ರವೇಶಾತಿಗೆ ಕಾಯುವವರಿಗೆ ಮುಖ್ಯವಾದ ಮಾಹಿತಿ!

Hindu neighbor gifts plot of land

Hindu neighbour gifts land to Muslim journalist

ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಬಿ-ಇಡ್ (B.Ed)​ ಪ್ರವೇಶಾತಿಗಾಗಿ ಎದುರು ನೋಡುತ್ತಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

ಬಿ-ಇಡ್ (B.Ed)​ ಪ್ರವೇಶಾತಿಗಾಗಿ, ಮೊದಲು CET ಪರೀಕ್ಷೆಯನ್ನ ಎದುರಿಸಬೇಕಾಗಿದ್ದು,ಆ ಬಳಿಕ ಪ್ರವಾಶಾತಿ ಶುರುವಾಗುತ್ತದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ-ಇಡ್ (Course) ಪ್ರವೇಶಕ್ಕೆ ಸಿಇಟಿ ಮೂಲಕ ಪ್ರವೇಶಾತಿ ನೀಡಲಾಗುತ್ತದೆ. ಹೀಗಾಗಿ, ಎರಡು (2 Years) ವರ್ಷದ ಬಿ.ಇಡ್ ಕೋರ್ಸ್‌ ಪ್ರವೇಶ ಪಡೆಯಲು ಬಯಸುವ ಆಕಾಂಕ್ಷಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್​ನಲ್ಲಿ (Website) ಬಿ.ಇಡಿ ಕೋರ್ಸ್‌ ಕುರಿತಂತೆ ಮಾಹಿತಿ ಬಿಡುಗಡೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬಿಎಡ್​ ಪ್ರವೇಶ ಪ್ರಕ್ರಿಯೆ ಕುರಿತಂತೆ ಅಭ್ಯರ್ಥಿಗಳು ಮಾಹಿತಿ ತಿಳಿದಿರುವುದು ಅವಶ್ಯಕ. ಇದರ ಜೊತೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಹಾಗೂ ಮಾನದಂಡ ಕುರಿತ ಮಾಹಿತಿ ಇಲ್ಲಿದೆ.

 

ಕರ್ನಾಟಕ ಬಿ.ಇಡಿ ಪ್ರವೇಶ 2022-23ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 19 ವರ್ಷಗಳು ಹಾಗೂ ಬಿ.ಇಡಿ ಪ್ರವೇಶಕ್ಕೆ ಯಾವುದೇ ಗರಿಷ್ಠ ವಯಸ್ಸಿನ ಮಿತಿ ಗರಿಷ್ಠ ಮಿತಿ ಇಲ್ಲ ಎಂಬುದನ್ನೂ ಗಮನಿಸಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 50 ರಷ್ಟು ಅಂಕ ಗಳಿಸಿರಬೇಕಾಗುತ್ತದೆ. ಕಾಯ್ದಿರಿಸದ ವರ್ಗದ ಅಭ್ಯರ್ಥಿಗಳು, ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 45 ರಷ್ಟು ಅಂಕ ಪಡೆದಿರಬೇಕು.

ಈ ಕೋರ್ಸ್ ಗಾಗಿ ಅರ್ಜಿ ಸಲ್ಲಿಸಲು 17-01-2023 ರಂದು ಆರಂಭಿಕ ದಿನವಾಗಿದ್ದು, 26-02-2023 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವಾಗಿದೆ. ಸಿಇಟಿ ಪ್ರವೇಶ ಪರೀಕ್ಷೆಯು ದಿನಾಂಕ 05-03-2023ರಂದು ನಡೆಯಲಿದೆ. ಇದರ ಜೊತೆಗೆ ಪ್ರವೇಶಾತಿ ಪಡೆಯಲು ಬಯಸುವ ಆಕಾಂಕ್ಷಿಗಳಿಗೆ 31-03-2023 ಅಂತಿಮ ದಿನವಾಗಿದೆ.

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಹೀಗಿವೆ:

ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಅಂಕಪಟ್ಟಿ, ಪಿಯುಸಿ ಅಥವಾ 12ನೇ ತರಗತಿ ಅಂಕಪಟ್ಟಿ, ಪದವಿ/ಸ್ನಾತಕೋತ್ತರ ಪದವಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಮತ್ತು ನಿವಾಸಿ ಪ್ರಮಾಣ ಪತ್ರ. ಈ ಎಲ್ಲ ದಾಖಲೆಗಳು ಅರ್ಜಿ ಸಲ್ಲಿಸಲು ಅವಶ್ಯಕವಾಗಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:

ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ಗೆ ಭೇಟಿ ನೀಡಬೇಕು. ಆ ಬಳಿಕ, B.Ed ಪ್ರವೇಶ ಪರೀಕ್ಷೆ 2022-23 ಜನವರಿ ಸೆಷನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅದನ್ನು ಸರಿಯಾಗಿ ಓದಿಕೊಳ್ಳಬೇಕು. ನಂತರ, ಆ ಪುಟದಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೇಳೆ, ಅವಶ್ಯಕ ದಾಖಲೆಗಳನ್ನು ನೀಡಬೇಕಾಗಿದ್ದು ಕೊನೆಗೆ ಸೇವ್ ಮಾಡಬೇಕಾಗುತ್ತದೆ.

ಅರ್ಹ ಅಭ್ಯರ್ಥಿಗಳು 26-02-2023 ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಿ. ಈ ಕುರಿತ ಹೆಚ್ಚಿನ ಮಾಹಿತಿ ಪಡೆಯಲು, ಸಹಾಯವಾಣಿ ಸಂಖ್ಯೆ 8690544544, 8800335638 ಗೆ ಸಂಪರ್ಕಿಸಬಹುದು. ಇ ಮೇಲ್ techsupport@ksouportal.com ಮೇಲ್ ಮಾಡಿ ಗೊಂದಲ ಬಗೆ ಹರಿಸಿಕೊಳ್ಳಬಹುದು. ಇಲ್ಲವೇ ಕೇಂದ್ರ ಕಚೇರಿ ಮೈಸೂರಿಗೆ ನೇರವಾಗಿ ಭೇಟಿ ನೀಡಬಹುದಾಗಿದೆ.