Home International ಕಚೇರಿಯಲ್ಲಿ ಹಸ್ತ ಮೈಥುನದ ಬ್ರೇಕ್ ನೀಡುತ್ತಿದ್ದಾಳೆ ಈ ಲೇಡಿ ಬಾಸ್ !

ಕಚೇರಿಯಲ್ಲಿ ಹಸ್ತ ಮೈಥುನದ ಬ್ರೇಕ್ ನೀಡುತ್ತಿದ್ದಾಳೆ ಈ ಲೇಡಿ ಬಾಸ್ !

Hindu neighbor gifts plot of land

Hindu neighbour gifts land to Muslim journalist

ಇದೀಗ ಇಲ್ಲೊಂದು ಕಚೇರಿಯಲ್ಲಿ ನೀವು ಕಂಡು ಕೇಳರಿಯದ ರೀತಿಯ ಆಫೀಸ್ ಬ್ರೇಕ್ ಕೊಡಲಾಗುತ್ತಿದೆ.
ಆಫೀಸುಗಳಲ್ಲಿ ಯಾವಾಗೆಲ್ಲ ವಿರಾಮ ಸಿಗುತ್ತೆ ಅಂತ ಎಲ್ಲರಿಗೂ ಗೊತ್ತು. ಬೆಳಗ್ಗೆ ಹತ್ತು ಹನ್ನೊಂದರ ಮಧ್ಯೆ ಟೀ ಬ್ರೇಕ್, ಮಧ್ಯಾಹ್ನ ಲಂಚ್ ಬ್ರೇಕ್, ಸಂಜೆ ಮತ್ತೊಮ್ಮೆ ಟೀ- ಕಾಫಿ ಬ್ರೇಕ್, ಇವು ಸಾಮಾನ್ಯವಾಗಿ ಕಂಡುಬರುವ ಆಫೀಸಿನ ಕೆಲಸದ ಸಮಯದ ಮಧ್ಯದ ವಿರಾಮಗಳು. ಕೆಲವೊಂದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಿಮ್ ಮಾಡೋದಕ್ಕೂ ವಿರಾಮ ಇರುತ್ತದೆ. ನಮ್ಮಲ್ಲಿ ಕೂಡಾ ಹಲವು ಕಡೆ ಆಟ ಆಡಲು ವಾರಕ್ಕೊಮ್ಮೆ ಅಥವಾ ಎರಡು ಸಲ (ಪ್ಲೇ ಬ್ರೇಕ್) ಕೂಡ ಲಭ್ಯವಿದೆ.

ಆದರೆ ಇಲ್ಲೊಬ್ಬರು ಬಾಸ್ ಹೊಸ ಬ್ರೇಕ್ ಘೋಷಿಸಿದ್ದಾರೆ. ಆದೊಂದು ಥರ ಪ್ಲೇ ಬ್ರೇಕ್ ಥರಾನೇ. ಈ ಹೊಸ ಆಟದ ವಿರಾಮ ಬೇರೇನೂ ಅಲ್ಲ, ಮಾಸ್ಟರ್ಬೇಶನ್ ಬ್ರೇಕ್ ,ಅರ್ಥಾತ್ ಹಸ್ತ ಮೈಥುನದ ಬಿಡುವು !!

ಇಂತಹ ಹೊಸ ಆಫೀಸ್ ಬ್ರೇಕ್ ಕೊಟ್ಟು ಬ್ರೇಕಿಂಗ್ ನ್ಯೂಸ್ ಆದ ಬಾಸ್ ಒಬ್ಬಾಕೆ ಹೆಂಗಸು ! ಈ ಲೇಡಿ ಬಾಸ್ ಗೆ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಬಗ್ಗೆ ವಿಪರೀತ ಕಾಳಜಿ. ಅದೇ ವಿಪರೀತ ಕಾಳಜಿ ಆಕೆಗೆ ಇಂತದ್ದೊಂದು ವಿಶೇಷವಾದ ಆಫೀಸ್ ಪರ್ಕ್ ನೀಡುವಂತೆ ಮಾಡಿದೆ. ಆಕೆ ಬೇರೆ ಯಾರೂ ಅಲ್ಲ, ನೀಲಿ ಚಿತ್ರಗಳ ನಿರ್ದೇಶಕಿಯಾಗಿರುವ ಎರಿಕಾ ಲಸ್ಟ್ ! ಆಕೆ ತನ್ನ ಸಿಬ್ಬಂದಿಗೆ ಕೆಲಸದ ಮಧ್ಯೆ ಮೂಡುವ ಲಸ್ಟ್ ಅನ್ನು ಲಾಸ್ಟ್ ಮಾಡಿಕೊಳ್ಳಲು ಹಸ್ತ ಮೈಥುನ ಮಾಡಿಕೊಳ್ಳಲು ಸಲಹೆ ನೀಡಿದ್ದಾಳೆ

ಪ್ರತಿ ದಿನ ಅರ್ಧ ಗಂಟೆ ಆಕೆ ವಿರಾಮವನ್ನು ನೀಡುತ್ತಾರಂತೆ. ಈ  ರೀತಿ ಅರ್ಧಗಂಟೆ ಕೊಟ್ಟ ಬಿಡುವಿನಲ್ಲಿ ಆಫೀಸು ಸ್ಟಾಫ್ ಗಳು ಸೂಕ್ತ ಬಂದೋಬಸ್ತ್ ಮಾಡಿಕೊಂಡು ಸ್ವ ಸುಖಿಸಿಕೊಂಡಿ ಮತ್ತೆ ಕೆಲಸಕ್ಕೆ ಹಾಜರಾಗಬಹುದಂತೆ.
ಹೀಗೆ ಮಾಡುವುದರಿಂದ ತನ್ನ ಸಿಬ್ಬಂದಿಗೆ ಕೆಲ ಕಾಲ ನಿರಾಳ ಉಂಟಾಗುತ್ತದೆ ಎನ್ನುವುದು ಎರಿಕಾ ಲಸ್ಟ್ ನ ಉದ್ದೇಶವಾಗಿದೆ. ಕಳೆದೊಂದು ವರ್ಷದಿಂದ ಎರಿಕಾ ಲಸ್ಟ್ ತನ್ನ ಸಿಬ್ಬಂದಿಗೆ ಇಂತಹದ್ದೊಂದು ವಿರಾಮವನ್ನು ನೀಡುತ್ತಿದ್ದಾರೆ.

ಎರಿಕಾ ಲಸ್ಟ್ ಕಳೆದೊಂದು ವರ್ಷದಿಂದ ಇಂತಹ ಕಂಪನಿ ಪಾಲಿಸಿಯನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರಿದು ಹಸ್ತ ಮೈಥುನದ ಜೊತೆಯಲ್ಲಿ ತನ್ನ ಸಿಬ್ಬಂದಿಗೆ ಸೆಕ್ಸ್ ಟಾಯ್‌ಗಳನ್ನು ಕೊಡಿಸುವುದಾಗಿಯೂ ಘೋಷಣೆ ಮಾಡಿದ್ದಾರೆ. ಸಿಬ್ಬಂದಿಗೆ ಈ ರೀತಿಯಾಗಿ ವಿರಾಮ ಮತ್ತು ಬೆನಿಫಿಟ್ಸ್ ನೀಡುವ ಬಗ್ಗೆ ಮಾಹಿತಿ ಹಂಚಿಕೊಂಡ ಎರಿಕಾ ಲಸ್ಟ್ , ‘ ನಾನು ನನ್ನ ಸಿಬ್ಬಂದಿಯನ್ನು ಗೌರವಿಸುತ್ತೇನೆ. ಹೀಗಾಗಿ ನಾನು ಕೆಲಸದ ಸ್ಥಳದಲ್ಲಿ ಹೆಚ್ಚಿನ ಚಟುವಟಿಕೆ ಇರಬೇಕು. ನನ್ನ ಸಿಬ್ಬಂದಿ ಯಾವುದೇ ಒತ್ತಡದಿಂದ ಇರಬಾರದು ಎಂದು ಈ ರೀತಿ ನಿರ್ಧಾರ ಕೈಗೊಂಡಿದ್ದೇನೆ ‘ ಎಂದು ಹೇಳಿದ್ದಾಳೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎರಿಕಾ ಲಸ್ಟ್ ಬರೆದುಕೊಂಡಿದ್ದಾರೆ.