

Biggest Banana :ಬಾಳೆಹಣ್ಣು(Banana) ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೆ. ಸಾಕ್ಷಾತ್ ಪರಮಾತ್ಮನನ್ನೂ ಸೇರಿ. ಯಾಕೆಂದ್ರೆ ದೇವರಿಗೆ ನೈವೇದ್ಯದಲ್ಲಿ ಹೆಚ್ಚಾಗಿ ಬಳಕೆಯಾಗೋ ಹಣ್ಣೆಂದರೆ ಬಾಳೆಹಣ್ಣೇ. ನಾವಾದರೆ ಊಟವಾದ ಬಳಿಕ ಒಂದು ಬಾಳೆ ಹಣ್ಣು ತಿಂದರೆನೇ ನೆಮ್ಮದಿ. ಜೊತೆಗೆ ಪೌಷ್ಟಿಕವಾಗಿದ್ದು, ಅಗ್ಗದ ದರದಲ್ಲಿ ಕೈಗೆಟುಕೋದು ಕೂಡ ಇದೇ ಹಣ್ಣು. ಬಾಳೆ ಹಣ್ಣುಗಳಲ್ಲೂ ಹಲವಾರು ವಿಧಗಳವೆ. ಪಚ್ಚ ಬಾಳೆ, ಪುಟ್ಟ ಬಾಳೆ, ಕದಳಿ, ಭೂದು ಬಾಳೆ ಹೀಗೆ. ಒಂದೊಂದು ಕೂಡ ಬೇರೆ ಬೇರೆ ಗಾತ್ರಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಅಂಗೈಯಲ್ಲಿ ನಿಲ್ಲುವಷ್ಟು ಪುಟ್ಟದಾಗಿರುತ್ತದೆ. ಆದ್ರೆ ಇಲ್ಲೊಂದು ಬಾಳೆಹಣ್ಣು ಅದೆಷ್ಟು ದೊಡ್ಡದು (Biggest Banana) ಅಂದ್ರೆ ಬರೋಬ್ಬರಿ 3 ಕೆಜಿ ತೂಗುತ್ತೆ.
ಹೌದು, ಆಸ್ಟ್ರೇಲಿಯನ್(Australian)ದ್ವೀಪವಾದ ಪಪುವಾ(Papuva) ನ್ಯೂಗಿನಿಯಾದಲ್ಲಿ ಈ ಜಾತಿಯ ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತದಂತೆ. ಇದರ ಗಾತ್ರ ಎಷ್ಟಿದೆ ಎಂಎಂಬುದನ್ನು ನೀವು ಇಲ್ಲಿರುವ ಪೋಟೋದಲ್ಲಿ ಕಾಣಬಹುದು. ಯಾಕೆಂದರೆ ಒಂದು ಬಾಳೆಹಣ್ಣು ಒಬ್ಬ ಮನುಷ್ಯನ ಕೈನಷ್ಟು ಉದ್ದವಿದೆ! ಆಶ್ಚರ್ಯ ಏನಂದ್ರೆ ಈ ಬಾಳೆಕಾಯಿ ಹಣ್ಣಾಗಲು ಐದು ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದಂತೆ.
ಅಂದಹಾಗೆ ಈ ಬಾಳೆಹಣ್ಣು ಮೂರು ಕೆಜಿ ವರೆಗೆ ತೂಗತ್ತದೆ. ಇದರ ತೂಕ ಒಂದು ನವಜಾತ ಶಿಶುವಿನ ತೂಕಕ್ಕೆ ಸಮನಾಗಿರುತ್ತದೆ. ಈ ಹಣ್ಣು ಹಣ್ಣಾಗಲು 5 ವರ್ಷ ತೆಗೆದುಕೊಳ್ಳುವುದರಿಂದ ಇವುಗಳಿಗೆ ಹೆಚ್ಚಿನ ವ್ಯಾಪಾರ ಇಲ್ಲ. ಈ ಗಿಡದ ಕಾಂಡವು 15 ಮೀಟರ್ ಎತ್ತರವಿದ್ದು, ಎಲೆಗಳು ಸಹ ನೆಲದಿಂದ 20 ಮೀಟರ್ ಎತ್ತರದಲ್ಲಿರುತ್ತವೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ನ್ಯೂ ಪಪುವಾ ಗಿನಿಯಾದಿಂದ ಬರುವ ಈ ಬಾಳೆಹಣ್ಣಿನ ಗಿಡಗಳನ್ನು ವಿಶ್ವದ ಅತಿ ದೊಡ್ಡ ಬಾಳೆ ಗಿಡ ಎಂದು ಗುರುತಿಸಲಾಗಿದೆ.
ಅನಂತ್ ರೂಪನಗುಡಿ ಎಂಬ ಟ್ವಿಟರ್ ಬಳಕೆದಾರರು ತಮ್ಮ ಖಾತೆಯಲ್ಲಿ ಈ ಅತಿದೊಡ್ಡ ಬಾಳೆಹಣ್ಣಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿ ತನ್ನ ಕೈಯಲ್ಲಿ ಈ ಬಾಳೆಹಣ್ಣನ್ನು ಹಿಡಿದುಕೊಂಡು ಅದನ್ನು ತಿನ್ನಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ ಅದನ್ನು ಸಂಪೂರ್ಣವಾಗಿ ತಿನ್ನುವುದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂಬುದು ಅರ್ಥವಾಗುತ್ತದೆ.
ಟ್ವಿಟರ್‌ನಲ್ಲಿ ವೈರಲ್ ಆಗಿರುವ 38 ಸೆಕೆಂಡುಗಳ ಈ ವೀಡಿಯೊವನ್ನು 88 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ (View). ಹಲವರು ಬೃಹತ್ ಬಾಳೆಹಣ್ಣನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಬ್ಬರು ಇಷ್ಟು ದೊಡ್ಡ ಬಾಳೆಹಣ್ಣು ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾ ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಒಳ್ಳೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರರು 5 ವರ್ಷಗಳಲ್ಲಿ ಹಣ್ಣಾಗುವ ಈ ಬಾಳೆಹಣ್ಣು ತಿನ್ನಲು ಕನಿಷ್ಠ 5 ದಿನಗಳು ಬೇಕು ಎಂದು ಕಮೆಂಟಿಸಿದ್ದಾರೆ.
https://twitter.com/Ananth_IRAS/status/1638348986905133057?t=fae8npBdnJnP3FMGUylXFQ&s=08













