Home Interesting Water Tank: ವಾಟರ್ ಟ್ಯಾಂಕ್ ಒಳಗೆ ಇದೊಂದು ವಸ್ತು ಹಾಕಿ ಸಾಕು – ವರ್ಷಾನುಗಟ್ಟಲೆ...

Water Tank: ವಾಟರ್ ಟ್ಯಾಂಕ್ ಒಳಗೆ ಇದೊಂದು ವಸ್ತು ಹಾಕಿ ಸಾಕು – ವರ್ಷಾನುಗಟ್ಟಲೆ ಕ್ಲೀನ್ ಮಾಡೋ ಅವಶ್ಯಕತೆಯೇ ಇರಲ್ಲ, ಅಷ್ಟು ಸ್ವಚ್ಚವಾಗಿರುತ್ತೆ ನೀರು

Hindu neighbor gifts plot of land

Hindu neighbour gifts land to Muslim journalist

Water Tank: ಹೆಚ್ಚಿನ ಮನೆಗಳಲ್ಲಿ ನೀರಿನ ಸಿಂಟ್ಯಾಕ್ಸ್ ಅಥವಾ ಟ್ಯಾಂಕ್(Water Tank) ಕ್ಲೀನ್ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಕಣ್ಣಿಗೆ ಕಾಣದಿದ್ದರೂ ತಿಂಗಳುಗಳೊಳಗೆ ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ ಆ ರೋಸು, ಕೊಳೆ, ಮಣ್ಣು ಟ್ಯಾಂಕಿನ ಅಡಿಯಲ್ಲಿ ಕರ್ರಗೆ ಕುಳಿತುಬಿಡುತ್ತದೆ. ಜೊತೆಗೆ ಪಾಚಿಯನ್ನೂ ಕರೆದುಕೊಂಡುಬಂದಿರುತ್ತದೆ. ಇದರಿಂದ ನೀರು ಕೂಡ ಗಲೀಜಾಗಿಬಿಡುತ್ತದೆ. ಹೀಗಾಗಿ ಪ್ರತೀ ಸಲವೂ ಈ ನೀರಿನ ಟ್ಯಾಂಕ್ ಕ್ಲೀನ್ ಮಾಡೋದು ದೊಡ್ಡ ರಗಳೆ.

ಆದರೀಗ ನಾವು ಹೋಳೋ ಪ್ಲಾನ್ ಯೂಸ್ ಮಾಡಿದರೆ ನಿಮ್ಮ ಮನೆಯ ಟ್ಯಾಂಕಿನ ನೀರು ಎಷ್ಟು ವರ್ಷವಾದರೂ ಹಾಳಾಗಲ್ಲ. ಟ್ಯಾಂಕ್ ಕೂಡ ಸದಾ ಕ್ಲೀನ್ ಆಗಿರುತ್ತೆ. ಇದಕ್ಕೆ ಬೇರೇನೂ ಬೇಡ. ಇದೊಂದು ವಸ್ತು ಹಾಕಿದರೆ ಸಾಕು. ನೀರು ಸ್ಪಟಿಕದಂತೆ ಸದಾ ಹೊಳೆಯುತ್ತಾ ಶುದ್ಧವಾಗಿರುತ್ತೆ. ಹಾಗಿದ್ರೆ ಆ ವಸ್ತು ಏನು ಗೊತ್ತಾ?

ಅದೇನೆಂದರೆ ನೇರಳೆ ಮರದ ಸಣ್ಣ ತುಂಡೊಂದನ್ನು ಟ್ಯಾಂಕಿನ ನೀರಿನೊಳಗೆ ಹಾಕಿಟ್ಟರೆ ಸಾಕು. ಸುಮಾರು 100 ವರ್ಷಗಳವರೆಗೆ ಟ್ಯಾಂಕ್ ನೀರನ್ನು ಸ್ವಚ್ಛಗೊಳಿಸುವ ಅವಶ್ಯಕತೆ ಇಲ್ಲ ಎಂದೇ ಹೇಳಬಹುದು. ಒಂದು ಅಥವಾ ಎರಡು ವರ್ಷಗಳವರೆಗೆ ನೀರು ಸ್ಫಟಿಕ ಸ್ಪಷ್ಟವಾಗಿರುತ್ತದೆ. ಯಾವುದೇ ಕೀಟಗಳು ಇದರಲ್ಲಿ ಬೆಳೆಯುವುದಿಲ್ಲ ಮತ್ತು ಪಾಚಿಯ ಯಾವುದೇ ಕುರುಹು ಕಾಣುವುದಿಲ್ಲ.

ಹೌದು, ನೇರಳೆ ಮರದ ತುಂಡು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಅಲ್ಲದೇ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಆದ್ದರಿಂದ ನೀರಿನ ಟ್ಯಾಂಕ್ನಲ್ಲಿ ನೇರಳೆ ಮರದ ಸಣ್ಣ ತುಂಡನ್ನು ಹಾಕುವುದರಿಂದ ಕೀಟಗಳು ಅಥವಾ ಹಸಿರು ಪಾಚಿ ಸಂಗ್ರಹವಾಗುವುದನ್ನು ತಡೆಯುತ್ತದೆ. ಈ ಕೆಲಸ ಮಾಡುವ ಮೂಲಕ ಟ್ಯಾಂಕ್ ಸ್ವಚ್ಛಗೊಳಿಸುವ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿ.