Home Interesting ಬಾಹ್ಯಾಕಾಶದಲ್ಲಿ ಸಂಭವಿಸಲಿದೆ ಅಪರೂಪದ ದೃಶ್ಯ!!!

ಬಾಹ್ಯಾಕಾಶದಲ್ಲಿ ಸಂಭವಿಸಲಿದೆ ಅಪರೂಪದ ದೃಶ್ಯ!!!

Hindu neighbor gifts plot of land

Hindu neighbour gifts land to Muslim journalist

ಬಾಹ್ಯಾಕಾಶ ಎನ್ನುವುದು ಆಶ್ಚರ್ಯದ ಗಣಿ ಇಲ್ಲಿ ಅಪರೂಪದ ವಿಸ್ಮಯಗಳು ನಡೆಯುತ್ತಿರುತ್ತದೆ. ಈಗ ಮತ್ತೊಂದು ಅದ್ಭುತ ಜರುಗಲಿದೆ. ನಾಲ್ಕು ಗ್ರಹಗಳು ಒಂದೇ ಸಾಲಿನಲ್ಲಿ ಬಂದು ನಿಲ್ಲುವ ಅಪರೂಪದ ದೃಶ್ಯವೊಂದು ಬಾಹ್ಯಾಕಾಶದಲ್ಲಿ ಸಂಭವಿಸಿದೆ.  ಈ ತಿಂಗಳ ಮುಂಜಾನೆಯ ಆಕಾಶ, ಖಗೋಳಾಸಕ್ತರಿಗೆ ಅಕ್ಷಯಪಾತ್ರೆ ಇದ್ದಂತೆ.

ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಒಂದೇ ಸಾಲಿನಲ್ಲಿ ನಿಂತಿವೆ. ಈ ಸುಂದರ ದೃಶ್ಯ ಬರಿಗಣ್ಣಿಗೆ ಕಾಣಲಿದೆ ಅಂತ ಲೈವ್‌ ಸೈನ್ಸ್‌ ತಿಳಿಸಿದೆ. ಈ ಆಕಾಶಕಾಯಗಳ ಸುಂದರ ದೃಶ್ಯ ಏಪ್ರಿಲ್ 17 ರಿಂದ ಆರಂಭವಾಗಿದ್ದು, ಜುಲೈವರೆಗೂ ಇದೇ ರೀತಿ ಇರಲಿವೆ ಎಂಬ ವರದಿಯಿದೆ. ಗ್ರಹಗಳು ತಮ್ಮದೇ ಆದ ವೇಗದಲ್ಲಿ ಸೂರ್ಯನ ಸುತ್ತ ಚಲಿಸುವುದರಿಂದ ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ.

ಈ ಸುಂದರ ಸಾಲನ್ನು ಚಂದ್ರ ಏಪ್ರಿಲ್‌‌ ಅಂತಿಮ ವಾರದಲ್ಲಿ 23 ರಿಂದ 29 ರವರೆಗೆ ಸೇರಲಿದ್ದಾನೆ. ಹಾಗೂ ಬುಧ ಗ್ರಹ ಜೂನ್‌ ತಿಂಗಳಲ್ಲಿ ಸೇರಲಿದ್ದಾನೆ.