Home Interesting Tirumala : ತಿರುಪತಿಗೆ ಹೋಗ್ತಾ ಇದ್ದೀರಾ? ಹಾಗಾದರೆ ಈ ಸುದ್ದಿ ಖಂಡಿತ ಓದಿ!

Tirumala : ತಿರುಪತಿಗೆ ಹೋಗ್ತಾ ಇದ್ದೀರಾ? ಹಾಗಾದರೆ ಈ ಸುದ್ದಿ ಖಂಡಿತ ಓದಿ!

Tirupati temple

Hindu neighbor gifts plot of land

Hindu neighbour gifts land to Muslim journalist

Tirupati temple: ತಿರುಪತಿ ತಿಮ್ಮಪ್ಪನ ದೇವಾಲಯವು (tirupati temple) ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಈ ದೇವಾಲಯಕ್ಕೆ ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯ ಹೆಚ್ಚಿನ ಪ್ರಮಾಣದ ದಾನಗಳನ್ನು ಪಡೆದುಕೊಳ್ಳುವ ದೇವಾಲಯಗಳಲ್ಲಿ ಒಂದಾಗಿದೆ. ಭಕ್ತರು ತಮ್ಮೆಲ್ಲಾ ಇಚ್ಛೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಮತ್ತು ಇಚ್ಛೆ ಫಲಿಸಿದ ನಂತರ ದೇವಾಲಯದ (tirupati temple) ಹುಂಡಿಯಲ್ಲಿ ತಮ್ಮ ದಾನವನ್ನು ನೀಡುವುದು ವಾಡಿಕೆ. ನೀವು ತಿರುಪತಿಗೆ ಹೋಗ್ತಾ ಇದ್ದೀರಾ ಎಂದಾದರೆ, ಈ ಸುದ್ದಿ ಖಂಡಿತ ಓದಿ!

ಭಾನುವಾರ (ನಿನ್ನೆ) ತಿರುಮಲ ತಿರುಮಲದಲ್ಲಿ (Tirumala) ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ವಾರಾಂತ್ಯವಾಗಿದ್ದ ಕಾರಣ ಎಣಿಕೆಗೂ ಮೀರಿದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ದೇಶದ ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದು, 21 ಕಂಪಾರ್ಟ್​​ಮೆಂಟ್​​ಗಳು (Compartments) ತುಂಬಿದ್ದವು. ತಿಮ್ಮಪ್ಪನ ದರ್ಶನಕ್ಕೆ ಟೋಕನ್ (Token) ಇಲ್ಲದ ಭಕ್ತರಿಗೆ 30 ಗಂಟೆಯೊಳಗೆ ಸರ್ವದರ್ಶನ (Sarvadarsan) ದೊರೆಯಲಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದರು.

ಕೋವಿಡ್ (covid) ಹಿನ್ನೆಲೆಯಲ್ಲಿ ಟಿಟಿಡಿ (TTD) ಮೂರು ವರ್ಷಗಳಿಂದ ದಿವ್ಯದರ್ಶನ ಟೋಕನ್ ನಿಲ್ಲಿಸಲಾಗಿದ್ದು, ಮತ್ತೆ ಶನಿವಾರದಿಂದ ತಿರುಮಲಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರಿಗೆ ದಾರಿಯಲ್ಲಿಯೇ ದಿವ್ಯದರ್ಶನ ಟೋಕನ್‌ಗಳ ವಿತರಣೆಯನ್ನು ಪುನರಾರಂಭಿಸಿದೆ.

ಭಕ್ತರು ದಿವ್ಯದರ್ಶನ ಟೋಕನ್ ಬಗ್ಗೆ ಮನವಿ ಮಾಡಿದ್ದು, ಅವರ ಮನವಿ ಮೇರೆಗೆ ಇದೀಗ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಗಾಳಿಗೋಪುರದ ಹಾಗೂ ಶ್ರೀವಾರಿ ಮೆಟ್ಟಿಲು ಮಾರ್ಗದ 1250ನೇ ಮೆಟ್ಟಿಲ ಬಳಿ ದಿವ್ಯದರ್ಶನ ಟೋಕನ್ ನೀಡಲಾಗುತ್ತಿದೆ. ಅಲಿಪಿರಿ ಮಾರ್ಗದಲ್ಲಿ ಬರುವ ಭಕ್ತರಿಗೆ ಪ್ರತಿದಿನ 10 ಸಾವಿರ ಟಿಕೆಟ್​​ ಮತ್ತು ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಬರುವ ಭಕ್ತರಿಗೆ ಪ್ರಾಯೋಗಿಕವಾಗಿ ಪ್ರತಿದಿನ 5 ಸಾವಿರ ಟೋಕನ್ ನೀಡಲಾಗುತ್ತಿದೆ.

ಆದರೆ, ಟೋಕನ್ ಪಡೆಯಲು ಭಕ್ತರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ನೇರವಾಗಿ ಹಾಜರಾಗಬೇಕು. ಆಗ ಮಾತ್ರ ಟೋಕನ್ ನೀಡಲಾಗುವುದು ಎಂದು ಹೇಳಲಾಗಿದೆ. ಹಾಗೇ 300 ರೂಪಾಯಿ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳು ಮತ್ತು ಸೇವಾ ಟಿಕೆಟ್‌ಗಳನ್ನು ಪಡೆದ ಭಕ್ತರಿಗೆ ಕಾಲ್ನಡಿಗೆ ಮಾರ್ಗದ ದರ್ಶನದ ಟೋಕನ್‌ಗಳನ್ನು ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿವ್ಯದರ್ಶನ ಟೋಕನ್‌ಗಳ ವಿತರಣೆಯನ್ನು ಕೆಲವು ದಿನಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸುವುದಾಗಿ ಟಿಟಿಡಿ ಸ್ಪಷ್ಟಪಡಿಸಿದೆ.

ಸದ್ಯ ಶನಿವಾರದಂದು 75,510 ಮಂದಿ ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದರು. 36,272 ಮಂದಿ ಮುಡಿ ಸಮರ್ಪಿಸಿದ್ದಾರೆ. ಭಕ್ತರು ಹುಂಡಿಯಲ್ಲಿ ಅರ್ಪಿಸುವ ಕಾಣಿಕೆಯ ಆದಾಯ 3.69 ಕೋಟಿ ರೂಪಾಯಿ ದೊರೆತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.