Home Interesting Different Village: ಈ ಗ್ರಾಮದಲ್ಲಿ ಕಳ್ಳತನವೇ ಆಗಲ್ವಂತೆ! ಅಂಗಡಿ ಬ್ಯಾಂಕ್ಗಳಿಗೆ ಬೀಗವೇ ಹಾಕದ ಗ್ರಾಮ ಭಾರತದಲ್ಲೇ...

Different Village: ಈ ಗ್ರಾಮದಲ್ಲಿ ಕಳ್ಳತನವೇ ಆಗಲ್ವಂತೆ! ಅಂಗಡಿ ಬ್ಯಾಂಕ್ಗಳಿಗೆ ಬೀಗವೇ ಹಾಕದ ಗ್ರಾಮ ಭಾರತದಲ್ಲೇ ಇದೆ!

Strange village

Hindu neighbor gifts plot of land

Hindu neighbour gifts land to Muslim journalist

Strange village : ದಿನಂಪ್ರತಿ ಕೊಲೆ, ದರೋಡೆ, ಕಳ್ಳತನ ಹೀಗೆ ನಾನಾ ರೀತಿಯ ಅಪರಾಧ ಪ್ರಕರಣಗಳನ್ನೂ ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಕಳ್ಳತನವೇ ಆಗದ(Strange village )ಊರಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅರೇ, ಕಳ್ಳತನವೇ ಆಗದ ಊರಾ? ಎಂಬ ಕುತೂಹಲ ಹಾಗೂ ಅಚ್ಚರಿ ಎಲ್ಲರಿಗೂ ಮೂಡಬಹುದು.

ಕಾಲ ಎಷ್ಟೇ ಬದಲಾದರೂ ಕೂಡ ನಡೆಯುತ್ತಿರುವ ಅಕ್ರಮಗಳು ಅಪರಾಧಗಳು ಕಡಿಮೆ ಆಗಿಲ್ಲ. ಅಷ್ಟೇ ಸಾಲದು ಎಂಬಂತೆ ಕಳ್ಳರು(Robber) ಅಪ್ಗ್ರೇಡ್ ಆಗಿ ತಮ್ಮ ಬತ್ತಳಿಕೆಯಿಂದ ವಿಭಿನ್ನ ತಂತ್ರಗಳನ್ನು ಪ್ರಯೋಗಿಸಿ ಆನ್ಲೈನ್ (Online)ಅಲ್ಲಿ ಕೂಡ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸುವುದನ್ನು ಕಾಣಬಹುದು.ಆದ್ರೆ ಇಲ್ಲೊಂದು ಗ್ರಾಮದಲ್ಲಿ( Different Village)ಯಾವ ಮನೆಗಳಿಗೂ ಬಾಗಿಲುಗಳೇ(No Door)ಇಲ್ಲವಂತೆ. ಅದೆಲ್ಲ ಬಿಡಿ!! ಬ್ಯಾಂಕ್​ ಗಳಿಗೆ(Bank) ಬೀಗ ಕೂಡ ಹಾಕಲ್ವಂತೆ!! ಎಲ್ಲಕ್ಕಿಂತ ಮಿಗಿಲಾಗಿ ಕಳ್ಳತನವೇ ಆಗಲ್ವಂತೆ!! ಅರೇ ಇದೇನಿದು?? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿ ಕಾಡದಿರದು.

ಮಹಾರಾಷ್ಟ್ರ (Maharashtra) ರಾಜ್ಯದಲ್ಲಿರುವ ಭಾರತದ ಈ ವಿಶಿಷ್ಟ ಹಳ್ಳಿಯ ಹೆಸರು ಶನಿ ಶಿಂಗ್ನಾಪುರ ಎಂದಾಗಿದ್ದು, ಶನಿದೇವನೇ ಈ ಗ್ರಾಮವನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ(Trust) ಗ್ರಾಮಸ್ಥರಲ್ಲಿದೆ. ಈ ಕಾರಣಕ್ಕಾಗಿ, ಈ ಗ್ರಾಮದ ಯಾವುದೇ ಮನೆಗಳಲ್ಲಿ ನೀವು ಬಾಗಿಲುಗಳನ್ನ ಕಾಣಲು ಸಾಧ್ಯವಿಲ್ಲ. ಗ್ರಾಮದಲ್ಲಿ ಬಾಗಿಲು ಹಾಕುವುದಿಲ್ಲ ಎನ್ನುವುದರ ಜೊತೆಗೆ ಅಂಗಡಿಗಳಲ್ಲಿ ಜೊತೆಗೆ ಬ್ಯಾಂಕ್ಗಳಿಗೆ ಕೂಡ ಬೀಗ ಹಾಕಲ್ಲ ಎಂದರೆ ಅಚ್ಚರಿಯಾಗಬಹುದು.

ಹಿಂದೂ ಧರ್ಮಗ್ರಂಥಗಳ(Hindu) ಜನರ ನಂಬಿಕೆಗಳ ಅನುಸಾರ, ಶನಿ ದೇವರು ಸೂರ್ಯ (Lord Surya)ದೇವರ ಮಗ. ಇದಲ್ಲದೆ, ಆತನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಈ ಜಗತ್ತಿನಲ್ಲಿ ಶನಿ ದೇವರು ಜನರನ್ನು ಅವರ ಕೆಟ್ಟ ಕೆಲಸಗಳಿಗಾಗಿ ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿಂದ ಈ ಗ್ರಾಮದ ಜನರು ಜೀವಿಸುತ್ತಿದ್ದಾರೆ. ಶನಿಯು ಸದಾ ತಮ್ಮ ಕುಟುಂಬದ ಜನರನ್ನು ಮನೆಯನ್ನು ರಕ್ಷಿಸುತ್ತಾನೆ ಎಂದು ಜನರು ದೃಢವಾಗಿ ನಂಬಿದ್ದು, ಈ ನಂಬಿಕೆಯಿಂದಾಗಿ ಇಂದಿಗೂ ಗ್ರಾಮದ ಕೆಲವರು ಮನೆಗಳಿಗೆ ಬೀಗ ಹಾಕುವುದಿಲ್ಲ.

ಅಂಗಡಿ, ಬ್ಯಾಂಕ್‌ಗಳಿಗೆ ಬೀಗ ಹಾಕುವುದಿಲ್ಲ. ಹಾಗೆಯೇ ಬಾಗಿಲುಗಳು ಕೂಡ ಇರಿಸಿಲ್ಲ. ಶನಿ ಶಿಂಗ್ನಾಪುರದ ಜನರು ಶನಿ ದೇವರನ್ನು ಗ್ರಾಮಸ್ಥರನ್ನು ರಕ್ಷಿಸುವ ಗ್ರಾಮದ ಮುಖ್ಯಸ್ಥ ಎಂದು ಅಚಲವಾಗಿ ನಂಬುವ ಹಿನ್ನೆಲೆ ಇಲ್ಲಿನ ಬ್ಯಾಂಕುಗಳ ಪ್ರವೇಶ ದ್ವಾರವನ್ನು ಗಾಜಿನಿಂದ ಮಾಡಲಾಗಿದ್ದು, UCO ಬ್ಯಾಂಕ್ ಈ ಗ್ರಾಮದ ಮೊದಲ ಬೀಗರಹಿತ ಬ್ಯಾಂಕ್ ಆಗಿದೆ. ಜನರ ನಂಬಿಕೆಯ ಅನುಸಾರ ಗ್ರಾಮವನ್ನು ಶನಿ ಕಾಪಾಡುವ ಹಿನ್ನೆಲೆ ಜನರು ನಿಶ್ಚಿಂತೆಯಿಂದ ಇದ್ದಾರೆ.