Home Interesting ಭಜನೆಗೂ ಕಾಲಿಟ್ಟ ‘ಪುಷ್ಪಾ’ ಸಿನಿಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ : ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ...

ಭಜನೆಗೂ ಕಾಲಿಟ್ಟ ‘ಪುಷ್ಪಾ’ ಸಿನಿಮಾದ ಶ್ರೀವಲ್ಲಿ ಹಾಡಿನ ಸ್ಟೆಪ್ : ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ‘ಪುಷ್ಪ’ ಮಾಡಿದ ಕ್ರೇಜ್ ಇಲ್ಲಿಯವರೆಗೂ ಕಮ್ಮಿ ಆಗಿಲ್ಲ.

ವಿಶ್ವದಾದ್ಯಂತ 300 ಕೋಟಿ
ರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದ ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ’ ಸಿನಿಮಾದಿಂದ ದೇಶಾದ್ಯಂತ ಜನಪ್ರಿಯತೆ ಹೆಚ್ಚಿದಂತೂ ಸುಳ್ಳಲ್ಲ.

ಅದರಲ್ಲೂ ಶ್ರೀವಲ್ಲಿ ಹಾಡಂತೂ ಸದ್ಯ ಟಾಪ್ ಟ್ರೆಂಡಿಂಗ್ ಹಾಡುಗಳ ಲಿಸ್ಟ್ ನಲ್ಲಿದೆ.

ಈ ಹಾಡಿನಲ್ಲಿರುವ ಸ್ಟೆಪ್ಪು ಯುವ ಜನತೆಯನ್ನು ಮಾತ್ರವಲ್ಲದೇ ಮಕ್ಕಳನ್ನು ಕೂಡಾ ತುಂಬಾ ಆಕರ್ಷಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡಿನದ್ದೆ ಕ್ರೇಜ್ ಹೆಚ್ಚಾಗಿದೆ.

ಆದರೆ ಇದೀಗ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಶ್ರೀವಲ್ಲಿ ಹಾಡಿನ ಸ್ಟೆಪ್ಪು ಒಂದು ಕಾಣಲು ಸಿಕ್ಕಿದೆ.

ಭಜನಾ ತಂಡದ ಸದಸ್ಯರು ಭಜನೆ ಹಾಡುತ್ತಲೇ ಈ ಹಾಡಿಗೆ ಸಿನೆಮಾದಲ್ಲಿ ಅಲ್ಲು ಅರ್ಜುನ್ ಮಾಡಿರುವ ನೃತ್ಯದಂತೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡು ಫುಲ್ ವೈರಲ್ ಆಗಿದ್ದು, ಎಲ್ಲಿ ನಡೆದಿರೋದು ಅನ್ನೋದು ಇನ್ನೂ ತಿಳಿದು ಬಂದಿಲ್ಲ.