Home Interesting ಶಾಲಾ ಬಸ್ ಚಾಲಕನಿಗೆ ಹೃದಯಾಘಾತ | ಸಮಯಪ್ರಜ್ಞೆ ಮೆರೆದು ಭಾರೀ ಅನಾಹುತ ತಪ್ಪಿಸಿದ ವಿದ್ಯಾರ್ಥಿನಿ |...

ಶಾಲಾ ಬಸ್ ಚಾಲಕನಿಗೆ ಹೃದಯಾಘಾತ | ಸಮಯಪ್ರಜ್ಞೆ ಮೆರೆದು ಭಾರೀ ಅನಾಹುತ ತಪ್ಪಿಸಿದ ವಿದ್ಯಾರ್ಥಿನಿ | ಶ್ಲಾಘನೆ ವ್ಯಕ್ತ!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಹೃದಯಾಘಾತದ ಸಂಖ್ಯೆ ಹೆಚ್ಚಾಗಿದೆ. ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಈ ಹೃದಯಾಘಾತಕ್ಕೆ ಶಾಲಾ ಬಸ್ ಚಾಲಕನೊಬ್ಬ ಒಳಗಾಗಿದ್ದು, ಈ ವೇಳೆ ಬಸ್ ನಲ್ಲಿದ್ದ ವಿದ್ಯಾರ್ಥಿನಿ ದಿಟ್ಟತನ ಮೆರೆದಿದ್ದಾಳೆ. ವಿದ್ಯಾರ್ಥಿನಿಯ ಸಮಯಪ್ರಜ್ಞೆಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿದ್ದ ಬಸ್ ಚಾಲಕನಿಗೆ ಹೃದಯಾಘಾತವಾಗಿದ್ದು, ನೋವಿನಿಂದ ಆತ ಸ್ಟೀರಿಂಗ್ ಚಕ್ರದ ಮೇಲೆ ಕುಸಿದು ಬಿದ್ದಂತಹ ಘಟನೆ ರಾಜ್ಕೋಟ್ನಲ್ಲಿ ನಡೆದಿದೆ. ಘಟನೆ ಪರಿಣಾಮ ಬಸ್ ಎರಡು ವಾಹನಗಳಿಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್ ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಅಂಜದೆ, ದೈರ್ಯದಿಂದ ಬಸ್ಸಿನ ಸ್ಟೀರಿಂಗ್ ಅನ್ನು ತಿರುಗಿಸಿ, ಬಸ್ ಅನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾಳೆ.

ರಾಜ್ಕೋಟ್ನಲ್ಲಿನ ಗೊಂಡಲ್ ರಸ್ತೆಯ ಮೂಲಕ ಬಸ್ ಸಾಗುತ್ತಿತ್ತು.
ಈ ವೇಳೆ ಬಸ್ ಚಾಲಕನಿಗೆ ಏಕಾಏಕಿ ಹೃದಯಾಘಾತವಾಗಿದ್ದು, ಚಾಲಕನಿಗೆ ಸ್ಟೀರಿಂಗ್ ನಿಂದ ನಿಯಂತ್ರಣ ತಪ್ಪಿ ಹೋಗಿದೆ. ನೋವಿನಿಂದ ಆತ ಸ್ಟೀರಿಂಗ್ ಬಿದ್ದಿದ್ದಾನೆ. ಇದನ್ನು ಕಂಡು ಬಸ್ ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದು, ಎಲ್ಲರೂ ಭಯಭೀತರಾಗಿದ್ದಾರೆ. ಅಲ್ಲದೆ, ಬಸ್ ಚಾಲಕನ ನಿಯಂತ್ರಣವಿಲ್ಲದೆ ಎರಡು ವಾಹನಗಳಿಗೆ ಡಿಕ್ಕಿಯಾಗಿದೆ. ಇದರಿಂದ ವಿದ್ಯಾರ್ಥಿಗಳು ಚಿರಾಡಲು ಪ್ರಾರಂಭಿಸಿದ್ದಾರೆ. ಆದರೆ ಈ ವೇಳೆ ಬಸ್ ನಲ್ಲಿದ್ದ
17 ವರ್ಷದ ವಿದ್ಯಾರ್ಥಿನಿ ಭಾರ್ಗವಿ ವ್ಯಾಸ್ ಹೆದರದೆ, ಸಮಯಪ್ರಜ್ಞೆಯಿಂದ ಎಲ್ಲರ ಪ್ರಾಣ ಉಳಿಸಿದ್ದಾಳೆ.

ವಿದ್ಯಾರ್ಥಿನಿ ತಕ್ಷಣವೇ ಬಸ್ನ ಸ್ಟೀರಿಂಗ್ ಅನ್ನು ಇನ್ನೊಂದು ಕಡೆಗೆ ತಿರುಗಿಸಿದ್ದು, ಇದರಿಂದ ಭಾರೀ ಅನಾಹುತ ತಪ್ಪಿದೆ. ವಿದ್ಯಾರ್ಥಿನಿ ತೋರಿದ ಸಮಯಪ್ರಜ್ಞೆಯಿಂದ ಶಾಲಾ ಬಸ್ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರಿಂದ ಆಗಬೇಕಿದ್ದ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿದೆ. ಆ ಕೂಡಲೇ ಸ್ಥಳಕ್ಕೆ ಸ್ಥಳೀಯರು ಜಮಾಯಿಸಿದ್ದಾರೆ. ತಕ್ಷಣವೇ ಆಂಬುಲೆನ್ಸ್ ಗೆ ಕರೆ ಮಾಡಿ, ಚಾಲಕನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕಿಯ ದಿಟ್ಟತನಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಯಿತು.