Home Interesting Penis Size: ತಮ್ಮ ‘ಪೆನ್ನಿಸ್’ ಸೈಝ್ ಕೇಳಿದಕ್ಕೆ ವಿಜ್ಞಾನಿಗಳೂ ಊಹಿಸದಂತ ಸುಳ್ಳಾಡಿದ ಪುರುಷರು! ಅಬ್ಬಬ್ಬಾ...

Penis Size: ತಮ್ಮ ‘ಪೆನ್ನಿಸ್’ ಸೈಝ್ ಕೇಳಿದಕ್ಕೆ ವಿಜ್ಞಾನಿಗಳೂ ಊಹಿಸದಂತ ಸುಳ್ಳಾಡಿದ ಪುರುಷರು! ಅಬ್ಬಬ್ಬಾ ಅವರು ಹೇಳಿದ್ದೆಷ್ಟು ಗೊತ್ತಾ?

Penis Size

Hindu neighbor gifts plot of land

Hindu neighbour gifts land to Muslim journalist

Penis Size : ಮನುಷ್ಯರೆಂದಮೇಲೆ ಸುಳ್ಳಾಡುವುದು ಸಾಮಾನ್ಯ. ಅದರಲ್ಲೂ ಕೂಡ ತಮ್ಮ ಮರ್ಯಾದೆ ಹೋಗುತ್ತದೆ ಅಂದ್ರೆ ಆ ಬಗ್ಗೆ ಎಲ್ಲರೂ ಸುಳ್ಳಾಡುತ್ತಾರೆ. ಅದು ಹೆಂಗಸರಾಗಲಿ, ಗಂಡಸರಾಗಲಿ. ಅಂದಹಾಗೆ ಪುರುಷರು ಹೆಚ್ಚಾಗಿ ಸುಳ್ಳು ಹೇಳುವುದು ಯಾದುವರ ಬಗ್ಗೆ? ಸಿಗರೇಟ್‌ ಸೇದಲ್ಲ, ತಾವು ಕುಡಿಯೋದಿಲ್ಲ, ತಮಗೆ ಹೊರಗಡೆ ಯಾರೊಂದಿಗೂ ಸಂಬಂಧ ಇಲ್ಲ, ಯಾರನ್ನೂ ಲವ್ ಮಾಡ್ತಿಲ್ಲ. ಹೀಗೆ ಇಂಥ ವಿಷಯಗಳಲ್ಲೆಲ್ಲಾ ಸುಳ್ಳಾಡೋದ್ರಲ್ಲಿ ಪುರುಷರು ನಿಸ್ಸೀಮರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಪುರುಷರು ಇನ್ನೊಂದು ವಿಷಯದಲ್ಲೂ ಮಹಾ ಸುಳ್ಳು ಹೇಳೋದ್ರಲ್ಲಿ ಪ್ರವೀಣರು. ಅದು ಅತೀ ಉದ್ದದ ‘ಪೆನ್ನಿಸ್’ (Penis Size) ನಮ್ಮದು ಎಂಬುದು. ನಿಜ, ಈ ಸುಳ್ಳಿನಿಂದಾಗಿ ವಿಜ್ಞಾನಿಗಳಿಗೆ ತಲೆಬಿಸಿ ಆಗಿದೆ ಅಂತೆ.

ಹೌದು, ಇಂದಿನ ದಿನಗಳಲ್ಲಿ ಪುರುಷರು ಹೇಳೋ ಅತಿ ದೊಡ್ಡ ಸುಳ್ಳುಗಳಲ್ಲಿ ಇದು ಒಂದಂತೆ. ಅವರು ತಮ್ಮ ಮದನಾಯುಧದ ಉದ್ದದ ಬಗ್ಗೆ ಸಿಕ್ಕಾಪಟ್ಟೆ ಉತ್ಪ್ರೇಕ್ಷೆ ಹೊಸೆದು ಹೇಳುತ್ತಾರಂತೆ. ಅಂತೆಯೇ ಇಲ್ಲೊಂದೆಡೆ ಹಾಗೇ ಆಗಿದ್ದು, ಇದು ಎಷ್ಟು ಸಮಸ್ಯೆ ಹುಟ್ಟುಹಾಕಿತ್ತು ಅಂದ್ರೆ ವಿಜ್ಞಾನಿಗಳಿಗೆ ಅತೀ ಉದ್ದದ ʼಅದರʼ ಗಾತ್ರ (penis size) ನಿಜಕ್ಕೂ ಎಷ್ಟಿತ್ತು, ಎಷ್ಟಿದೆ ಎಂಬುದನ್ನು ಹುಡುಕಿ ದಾಖಲಿಸೋಕೇ ಇನ್ನೂ ಆಗಿಲ್ಲವಂತೆ!

ಅಂದಹಾಗೆ ಯೂನಿವರ್ಸಿಟಿ ಆಪ್‌ ಅಡ್ಗರ್‌ ಹಾಗೂ ಸ್ವೀಡಿಶ್‌ ಯೂನಿವರ್ಸಿಟಿ ಆಫ್‌ ಅಗ್ರಿಕಲ್ಚರಲ್‌ ಸೈನ್ಸಸ್‌ ಈಗ ಈ ವಿಷಯದಲ್ಲೇ ಅಧ್ಯಯನ ಮಾಡಿದೆ. ಈ ಸ್ಟಡಿಯಲ್ಲಿ ಪುರುಷರಿಗೆ ತಮ್ಮ ನಿಗುರಿದ ಶಿಶ್ನ ಎಷ್ಟು ಉದ್ದವಿರುತ್ತದೆ ಎಂದು ತಿಳಿಸಲು ಕೋರಲಾಯಿತು. ಜತೆಗೆ ಅವರ ಎತ್ತರ ಮತ್ತು ಫಿಟ್‌ನೆಸ್‌ ವಿವರವನ್ನೂ ತಿಳಿಸುವಂತೆ ಹೇಳಿತು.

ಯೂನಿವರ್ಸಿಟಿ ಹೇಳಿದಂತೆ ಹೆಚ್ಚಿನವರು ತಮ್ಮ ಶಿಶ್ನದ ಗಾತ್ರ, ಎತ್ತರ ಎಲ್ಲವನ್ನೂ ತಿಳಿಸಿದರು. ಆದರೆ ಇಲ್ಲಿ ಒಂದು ಶಿಶ್ನದ ಗಾತ್ರ ವಿಜ್ಞಾನಿಗಳಿಗೇ ಗಾಬರಿಯಾಗುವಂತೆ ಮಾಡಿದೆ. ಯಾಕೆಂದರೆ ಸ್ವ- ಘೋಷಿತ ಆ ಶಿಶ್ನದ ಉದ್ದ 9000 ಮಿ.ಮೀ ಇತ್ತಂತೆ! ಇದು ಯಾವುದೇ ಆನೆಯ ನಿಮಿರಿದ ಶಿಶ್ನದ ಉದ್ದಕ್ಕಿಂತ 50 ಪಟ್ಟು ಅಧಿಕ! ಅಂದರೆ ಯಾವೊಬ್ಬ ವ್ಯಕ್ತಿ ಇಷ್ಟುದ್ದದ ಶಿಶ್ನ ಹೊಂದುವುದು ಅಸಾಧ್ಯ. ಇನ್ನೊಬ್ಬ ಪ್ರಸ್ತುತ ವಿಶ್ವ ದಾಖಲೆ ಹೊಂದಿರುವ ಶಿಶ್ನಕ್ಕಿಂತ ಉದ್ದದ್ದನ್ನು ತಾನು ಹೊಂದಿದೇನೆ ಎಂದು ರೀಲು ಬಿಟ್ಟ. ಅದೂ ನಿಜವಿರಲಿಲ್ಲ.

ಆದರೆ ಇಂಥ ʼಅತಿʼಗಳನ್ನು ಆಚೆಗಿಟ್ಟು ವಿಜ್ಞಾನಿಗಳು ಒಂದು ನಿರ್ಣಯಕ್ಕೆ ಬಂದಿದ್ದಾರೆ. ಅದೇನೆಂದರೆ ಪುರುಷನ ನಿಗುರಿದ ಶಿಶ್ನದ ಸರಾಸರಿ ಉದ್ದ 5.8 ಇಂಚಿಗಿಂತ ಸ್ವಲ್ಪ ಉದ್ದವಿರುತ್ತದೆ ಅಷ್ಟೆ ಎಂಬುದು. ಅಂದಹಾಗೆ ಇದು ಡ್ಯಾನಿಶ್‌ ಪುರುಷರ ಅಳತೆ. ಯಾಕೆಂದರೆ ಸ್ಟಡಿ ನಡೆದುದು ಅಲ್ಲಿಯೇ. ಒಟ್ಟಿನಲ್ಲಿ ಇದರಿಂದ ವಿಜ್ಞಾನಿಗಳು ಕಲಿತ ಪಾಠ ಏನೆಂದರೆ, ಪುರುಷತ್ವದ ಬಗ್ಗೆ ಸ್ವಯಂ ರೀಲುಗಳನ್ನು ಸಂಗ್ರಹಿಸಲು ಹೋಗಬಾರದು. ಏನಿದ್ದರೂ ಲ್ಯಾಬ್‌ನಲ್ಲಿಯೇ ಪರಿಶೀಲಿಸಬೇಕು.

ಇನ್ನು ತಮ್ಮ ಶಿಶ್ನದ ಬಗ್ಗೆ ಕೀಳರಿಮೆ ಹೊಂದಿದವರು ಇಲ್ಲವೆ? ಅಥವಾ ತಮ್ಮ ಸಂಗಾತಿಯ ಶಿಶ್ನದ ಬಗ್ಗೆ ಬೇಸರ ಹೊಂದಿದ ಸ್ತ್ರೀಯರಿಲ್ಲವೆ? ಇಬ್ಬರೂ ಇದ್ದಾರೆ. ಆದರೆ ಪುರುಷ ಸಂಖ್ಯೆ ಅಧಿಕ, ಸ್ತ್ರೀಯರು ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಅಂದಹಾಗೆ ಸುಮಾರು 85% ಪುರುಷರು ತಮ್ಮ ಆಯುಧದ ಉದ್ದ ಸಾಲದು ಎಂದು ಬೇಜಾರು ಮಾಡಿಕೊಂಡಿದ್ದಾರೆ. ಆದರೆ ಅವರ ಸಂಗಾತಿಗಳಲ್ಲಿ ಶೇ.55 ಮಂದಿಗೆ ಮಾತ್ರ ಆ ಬೇಸರ ತುಸು ಇದೆ ಅಷ್ಟೇ. ಯಾಕೆಂದರೆ ಸ್ತ್ರೀಯರಿಗೆ ಉದ್ದ ಮುಖ್ಯವಲ್ಲ. ತನ್ನ ಸಂಗಾತಿ ತನ್ನನ್ನು ಎಷ್ಟರಮಟ್ಟಿಗೆ ಭೋಗಿಸಿ ತೃಪ್ತಿಪಡಿಸುತ್ತಾನೆ, ಸುಖ ನೀಡುತ್ತಾನೆ ಎಂಬುದು ಮಾತ್ರ ಮುಖ್ಯ.

ಒಟ್ನಲ್ಲಿ ಇದರ ಪಾಠ ಏನು? ಪುರುಷರು ಶಿಶ್ನದ ಗಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಬದಲಾಗಿ ಭೋಗಿಸುವ ಕಲೆಯ ಬಗ್ಗೆ, ಸಂಗಾತಿ ಹೆಚ್ಚಿಗೆ ಸುಖಿಸುವ ಬಗ್ಗೆ, ಪೂರ್ಣವಾಗಿ ತೃಪ್ತಿ ಹೊಂದುವ ಕುರಿತು ಹೆಚ್ಚು ಗಮನ ಹರಿಸಬೇಕು. ಜೊತೆಗೆ ತಮ್ಮ ಸಾಮಾನು ಉದ್ದವಿಲ್ಲ ಎಂದು ಕೊರಗಬಾರದು. ಹಾಗೇ ತಮ್ಮ ಶಿಶ್ನವೊಂದು ಗದೆಯೋ ಎಂಬಂತೆ ಅದರ ಬಗ್ಗೆ ಸುಳ್ಳುಗಳನ್ನು ಪುಂಗುವುದನ್ನೂ ಬಿಡಬೇಕು. ಯಾಕೆಂದರೆ ಯಾರದೇ ಶಿಶ್ನ ಆರಿಂಚಿಗಿಂತಲೂ ಹೆಚ್ಚು ಇರುವುದಿಲ್ಲ.

ಹಾಗಾದರೆ ಶಿಶ್ನದ ಗಾತ್ರ ಕೌಂಟ್‌ ಆಗುವುದೇ ಇಲ್ಲವೆ? ಈ ಬಗ್ಗೆ ಸಂಶೋಧನೆ, ಸಮೀಕ್ಷೆಗಳು ನಡೆದಿವೆ, ಇಲ್ಲವೆಂದಲ್ಲ. ವಿದೇಶಗಳಲ್ಲಿ ಈ ಬಗೆಯ ಸಮೀಕ್ಷೆಗಳು ಆಗಿವೆ. ಸುಮಾರು ಎಪ್ಪತ್ತು ಶೇಕಡ ಹೆಣ್ಣುಮಕ್ಕಳು, ತಾವು ಶಿಶ್ನದ ಗಾತ್ರಕ್ಕಿಂತಲೂ ಆ ಹುಡುಗನ ಆತ್ಮೀಯತೆ, ಪ್ರೀತಿ, ರಸಿಕತೆ, ಫೋರ್‌ಪ್ಲೇ ಕೌಶಲಗಳನ್ನೇ ಹೆಚ್ಚು ಮೆಚ್ಚುತ್ತೇವೆ ಎಂದು ಹೇಳಿದ್ದಾರೆ. ಶೇಕಡ ಮೂವತ್ತು ಹೆಣ್ಣುಮಕ್ಕಳು ಮಾತ್ರ, ತಮಗೆ ಶಿಶ್ನದ ಗಾತ್ರವೂ ಮುಖ್ಯ, ಅದು ತೀರಾ ಚಿಕ್ಕದಾಗಿದ್ದರೆ ನಿರಾಸೆಯಾಗುತ್ತದೆ ಅಂದಿದ್ದಾರೆ. ಆದರೆ ಇವರೂ ಕೂಡ, ಶಿಶ್ನದ ಗಾತ್ರ ಹಾಗೂ ಓರಲ್ ಸೆಕ್ಸ್ (ಮುಖಮೈಥುನ)ಗಳನ್ನು ಮುಂದಿಟ್ಟರೆ, ಅದರ ಗಾತ್ರಕ್ಕಿಂತಲೂ ತಮ್ಮ ಸಂಗಾತಿ ತಮಗೆ ಓರಲ್ ಸೆಕ್ಸ್ ನೆರವೇರಿಸುವುದನ್ನೇ ಹೆಚ್ಚು ಇಷ್ಟಡುತ್ತೇವೆ ಎಂದಿದ್ದಾರೆ. ಸಂತೃಪ್ತಿ ಎಂಬುದು ಶಿಶ್ನದಿಂದಲೇ ಬರಬೇಕೆಂದಿಲ್ಲ.

ಆದರೆ ಶಿಶ್ನದ ಗಾತ್ರ ತೀರಾ ದೊಡ್ಡದಾದರೂ ಸಮಸ್ಯೆ ಕಾದಿದೆ. ವಿದೇಶಗಳಲ್ಲಿ ಇಂಥ ಘಟನೆಗಳೂ ನಡೆದಿವೆ. ಏಳಿಂಚು, ಎಂಟಿಂಚು ಗಾತ್ರದ ಶಿಶ್ನ ಹೊಂದಿರುವ ಅನೇಕ ಪುರುಷರು ವೈದ್ಯರ ಬಳಿಗೆ ಬಂದು, ಈ ಶಿಶ್ನದ ಗಾತ್ರದಿಂದಾಗಿ ಒಮ್ಮೆ ತಮ್ಮ ಜೊತೆ ಸೆಕ್ಸ್ ಹಂಚಿಕೊಂಡ ನಾರಿಯರು ಇನ್ನೊಮ್ಮೆ ಬರುವುದಿಲ್ಲ, ಇದಕ್ಕೆ ಪರಿಹಾರ ಬೇಕು ಎಂದು ಅಂಗಲಾಚಿದ್ದಾರಂತೆ. ಅಂದರೆ ದೊಡ್ಡ ಗಾತ್ರದ ಮದನಾಯುಧವೂ ಸ್ತ್ರೀಯ ಪಾಲಿಗೆ ಸರಿಯಾದ ಕಾಮಕೌಶಲ್ಯವಿಲ್ಲದ ಸಂದರ್ಭದಲ್ಲಿ ಕಠೋರ ಅನಿಸಬಲ್ಲದು. ಅಂಥ ಸಂದರ್ಭದಲ್ಲಿ ಸ್ತ್ರೀ ಮೇಲಿರುವ ಸಂಭೋಗಾಸನ ಹೆಚ್ಚು ನೆರವಾಗಬಹುದು.

ಹಾಗಿದ್ದರೆ ಸಣ್ಣ ಶಿಶ್ನ ಹೊಂದಿರುವವರಿಗೆ ಸೂಕ್ತ ಆಸನ ಯಾವುದು? ಅವರಿಗೂ ಸ್ತ್ರೀ ಮೇಲಿರುವ ಆಸನವೇ ಸೂಕ್ತ. ಯಾಕೆಂದರೆ ಸ್ತ್ರೀ ತನ್ನ ಭಗಾಂಕುರ ಅಥವಾ ಜಿ ಸ್ಪಾಟ್‌ ಅನ್ನು ಶಿಶ್ನವು ಸರಿಯಾಗಿ ಘರ್ಷಿಸುವಂತೆ ಕುಳಿತುಕೊಂಡು ತನಗೆ ಬೇಕಾದ ಸುಖವನ್ನು ಪಡೆಯಬಲ್ಲಳು- ನಿಮಗೂ ಕೊಡಬಲ್ಲಳು. ಬೇಕಿದ್ದರೆ ಪ್ರಯತ್ನಿಸಿ ನೋಡಿ.