Home Entertainment ಟ್ರಕ್ ನಿಂದ ರಸ್ತೆಗೆ ಚೆಲ್ಲಿದ ರಾಶಿ-ರಾಶಿ ಹಣದ ನೋಟುಗಳ ಸುರಿಮಳೆ|ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದ ಜನ ಸಮೂಹ|ಆದ್ರೆ...

ಟ್ರಕ್ ನಿಂದ ರಸ್ತೆಗೆ ಚೆಲ್ಲಿದ ರಾಶಿ-ರಾಶಿ ಹಣದ ನೋಟುಗಳ ಸುರಿಮಳೆ|ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದ ಜನ ಸಮೂಹ|ಆದ್ರೆ ಕೊನೆಗೆ ಆದದ್ದು ಮಾತ್ರ ಪಚೀತಿ!!

Hindu neighbor gifts plot of land

Hindu neighbour gifts land to Muslim journalist

ಇಂದು ಜೀವನ ನಡೆಸಬೇಕಾದರೆ ಹಣವೇ ಮುಖ್ಯ.ಎಲ್ಲಿ ಏನು ಮಾಡಬೇಕಾದರೂ ಅಲ್ಲಿ ‘ಹಣವೇ ದೊಡ್ಡಪ್ಪ’.ಹೀಗೆ ಹಣಕ್ಕಾಗಿ ಬೆವರು ಹರಿಸಿ ದಿನವಿಡೀ ದುಡಿದು ಬದುಕು ಸಾಗಿಸುತ್ತಾರೆ. ಇಂತದರಲ್ಲಿ ಹಣ ಬೇಕಾಬಿಟ್ಟಿಯಾಗಿ ಸಿಕ್ಕರೆ ಯಾರು ತಾನೇ ಬಿಡುತ್ತಾನೆ.ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಅನ್ನೋ ಮಾತಿದೆ.ಅದರಂತೆ ಹಣ ಬೀದಿಯಲ್ಲಿ ಹಾರಾಡಿದಾರೆ ಯಾರಾದರೂ ಬಿಡುತ್ತಾರಾ? ಖಂಡಿತ ಇಲ್ಲ.

ಯುನೈಟೆಡ್ ಸ್ಟೇಟ್ಸ್ನ ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಟ್ರಕ್ ಒಂದು ಶುಕ್ರವಾರ ಹಣ ಸಾಗಿಸುತ್ತಿತ್ತು. ಸ್ಯಾನ್ ಡಿಯಾಗೋದಲ್ಲಿರುವ ಫೆಡರಲ್ ಡೆಪಾಸಿಟ್ ಇನ್ಸುರೆನ್ಸ್ ಕಾರ್ಪ್ ಕಂಪನಿಗೆ ಟ್ರಕ್ ಹಣ ಹೊತ್ತು ಸಾಗಿತ್ತು. ಟ್ರಕ್ ಒಳಗೆ ಇದ್ದ ಅನೇಕ ಬ್ಯಾಗ್ ಓಪನ್ ಆಗಿ ಅದರಲ್ಲಿ ಹಣ ರಸ್ತೆಗೆ ಚೆಲ್ಲಿದವು. ಹಣ ನೋಡಿದ ಮೇಲೆ ಕೇಳಬೇಕೆ, ಅಲ್ಲಿದ್ದ ಜನರು ತಕ್ಷಣ ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದರು.ಆದ್ರೆ ಕೊನೆಗೆ ಹಣ ಹೆಕ್ಕಿಕೊಂಡ ಜನರಿಗೆ ಮಾತ್ರ ಕಾದಿತ್ತು ಬಿಗ್ ಶಾಕ್.

ಮಂಗಳೂರು : 8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ

ಹಣ ಬಾಚಿಕೊಂಡ ಜನರಿಗೆ ತಮ್ಮ ಬಳಿಯಿರುವ ಹಣವನ್ನು ಹಿಂದಿರುಗಿಸುವಂತೆ ಅಧಿಕಾರಿಗಳು ಆಗ್ರಹಿಸಿದ್ದಾರೆ. ಈ ಘಟನೆಯಲ್ಲಿ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟನೆ ನೀಡಿಲ್ಲ. ಆದರೆ, ಅನೇಕ ಮಂದಿ ಸಾಕಷ್ಟು ಹಣ ಬಾಚಿಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟ್ರಕ್​ನ ಒಂದು ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಳದಲ್ಲೇ ಇಬ್ಬರನ್ನು ಬಂಧಿಸಲಾಗಿದ್ದು, ಹಣ ಬಾಚಿರುವ ಇನ್ನಿತರು ಕೂಡ ಕ್ರಿಮನಲ್​ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಘಟನೆ ಸಂಬಂಧಿಸಿದ ವಿಡಿಯೋ ಆಧಾರದ ಮೇಲೆ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

ಡೆಮಿ ಬ್ಯಾಗ್ಬಿ ಎಂಬ ಬಾಡಿ ಬಿಲ್ಡರ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ನಾನು ನೋಡಿದ ಅತ್ಯಂತ ಹುಚ್ಚುತನದ ಸಂಗತಿಯಾಗಿದೆ. ಪ್ರತಿಯೊಬ್ಬರೂ ಮುಕ್ತಮಾರ್ಗದಿಂದ ಹಣವನ್ನು ಪಡೆಯಲು ಮುಕ್ತಮಾರ್ಗದಲ್ಲಿ ನಿಲ್ಲಿಸಿದ್ದಾರೆಂದು ಬರೆದುಕೊಂಡಿದ್ದಾರೆ.