Home Interesting ಓಡಿ ಹೋದ ಪತ್ನಿಯ ಪತಿ ಸೇಡು ತೀರಿಸಿಕೊಂಡಿದ್ಹೇಗೆ ಗೊತ್ತಾ? ಪ್ರಿಯಕರನ ಪತ್ನಿಯೊಂದಿಗೆ ಮದುವೆಯಾದ ಭೂಪ..!

ಓಡಿ ಹೋದ ಪತ್ನಿಯ ಪತಿ ಸೇಡು ತೀರಿಸಿಕೊಂಡಿದ್ಹೇಗೆ ಗೊತ್ತಾ? ಪ್ರಿಯಕರನ ಪತ್ನಿಯೊಂದಿಗೆ ಮದುವೆಯಾದ ಭೂಪ..!

Hindu neighbor gifts plot of land

Hindu neighbour gifts land to Muslim journalist

Marriage :ವಿವಾಹಿತ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಓಡಿಹೋದದನ್ನು ಮನಗಂಡು ಸಿಟ್ಟುಗೊಂಡ ಪತಿರಾಯ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ಪ್ರೀತಿ ಅನ್ನುವ ಎರಡಕ್ಷರಕ್ಕೆ ಮಹತ್ವವಾದ ಅರ್ಥಗಳನ್ನು ಪಡೆದುಕೊಂಡಿದೆ. ಪ್ರೀತಿ ಅನ್ನೋದು ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಬಂಧಗಳನ್ನು ಒಳಗೊಂಡಿರುತ್ತದೆ.ನಾವು ಯಾವ ರೀತಿಯ ಪ್ರೀತಿಯ ಹುಡುಕಾಟದಲ್ಲಿ ನಾವಿದ್ದೇವೆ ಎಂದು ಅರ್ಥ ಮಾಡಿಕೊಂಡು ಅಂತಹ ಪ್ರೀತಿ ಬೆಳೆಸಿಕೊಳ್ಳುವುದು ಉತ್ತಮ ಅನಿಸುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರಣಯ ಪಕ್ಷಿಗಳ ಕಥೆಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಒಂದು ಘಟನೆ ಬಹಿರಂಗವಾಗಿದ್ದು, ವಿಚಿತ್ರ ಘಟನೆ ಕಂಡರೆ ಪ್ರೀತಿಗೆ ಕಣ್ಣಿಲ್ಲ ಅನ್ನುವ ಮಾತು ಸುಳ್ಳಲ್ಲ ಎನ್ನುವಂತಿದೆ.

ಬಿಹಾರ ಮೂಲಕ ರೂಬಿ ದೇವಿ ಎಂಬ ಮಹಿಳೆ 2009 ರಲ್ಲಿ ನೀರಜ್ ಅವರನ್ನು ವಿವಾಹವಾದರು(Marriage). ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ ನೀರಜ್ ಪತ್ನಿ ರೂಬಿ ದೇವಿ ಅವರು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಬಳಿಕ ಪತಿಗೆ ತಿಳಿಯದಂತೆ ಮುಖೇಶ್ ಎಂಬ ಪ್ರಿಯಕರನೊಂದಿಗೆ ಫೆಬ್ರವರಿ 2022ರಲ್ಲಿಓಡಿಹೋಗಿದ್ದಾಳೆ.

ಇದಕ್ಕೆ ಸಿಟ್ಟುಗೊಂಡು ನೀರಜ್ ಈಕೆಗೆ ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿದ್ದರೂ ಮುಖೇಶ್ ಪ್ರೀತಿ ಮಾಡಿ ಅಪರಿಸಿದ್ದಾರೆಂದು ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಮುಖೇಶ್ ವಿರುದ್ಧ ನೀರಜ್‌ ದೂರು ನೀಡಿದ್ದನು. ಈ ಘಟನೆಯ ಬಗ್ಗೆ ಗ್ರಾಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು,ಮುಖೇಶ್ ರೂಬಿ ದೇವಿಯನ್ನು ಬಿಡಲು ಒಪ್ಪಲಿಲ್ಲ, ಈಗಾಗಲೇ ಮುಖೇಶ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಹೊಂದಿದ್ದರು.

ಕಳೆದ ತಿಂಗಳು ಮುಖೇಶ್ ಎಂಬಾತ ನೀರಜ್‌ ಅವರ ಎರಡು ಮಕ್ಕಳ ಪತ್ನಿಯನ್ನು ಮದುವೆಯಾಗಿ ವಿಚಿತ್ರವಾಗಿ ಸೇಡು ತೀರಿಸಿಕೊಂಡಿದ್ದಾನೆ. ಈ ಘಟನೆ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಮಾಡುತ್ತಿದ್ದು ನೆಟ್ಟಿಗರು ಇಲ್ಲಸಲ್ಲದ ಕಾಮೆಂಟ್ಸ್‌ ಹಾಕುತ್ತ ಗೇಲಿ ಮಾಡುತ್ತಿದ್ದಾರೆ.