Home Interesting ಮದುವೆ ಮನೆಯಲ್ಲಿ ತಂದೆಯೊಂದಿಗೆ ಕುಣಿದು ಕುಪ್ಪಳಿಸಿದ ಮದುಮಗಳು | ತಂದೆ-ಮಗಳ ಬಾಂಧವ್ಯ ಸಾರುವ ನೃತ್ಯದ ತುಣುಕು...

ಮದುವೆ ಮನೆಯಲ್ಲಿ ತಂದೆಯೊಂದಿಗೆ ಕುಣಿದು ಕುಪ್ಪಳಿಸಿದ ಮದುಮಗಳು | ತಂದೆ-ಮಗಳ ಬಾಂಧವ್ಯ ಸಾರುವ ನೃತ್ಯದ ತುಣುಕು ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ. ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ. ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ.ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನು ಹಚ್ಕೊಳ್ಳೋದೇ ಜಾಸ್ತಿ. ಇದಕ್ಕೆ ಉದಾಹರಣೆ ನೀಡುವ ದೃಶ್ಯ ಬಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ವೈರಲ್ ಆದ ವಿಡಿಯೋದಲ್ಲಿ ವಧು ತನ್ನ ಮದುವೆಯ ದಿನ ತನ್ನ ತಂದೆಯೊಂದಿಗೆ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಳೆ. ತಂದೆ ಮಗಳ ಬಾಂಧವ್ಯ ಸಾರುವ ದೃಶ್ಯ ಇದೀಗ ಸಖತ್​ ವೈರಲ್ ಆಗಿದೆ. ಮಗಳೊಂಂದಿಗೆ ಅಪ್ಪ ನೃತ್ಯ ಮಾಡುತ್ತಿರುವ ದೃಶ್ಯ ಸುಮಾರು 2,400 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ವಿವಾಹ ಅಂದಾಕ್ಷಣ ಮೋಜು, ಮಸ್ತಿ ಎಲ್ಲವೂ ಇರುತ್ತದೆ. ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿ ಮದುವೆ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೊಂದು ಮನೆಗೆ ಸೊಸೆಯಾಗಿ ಹೋಗುವ ವಧು ಅಪ್ಪನ ಜೊತೆಗೆ ನೃತ್ಯ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಧು ತನ್ನ ತಂದೆಯೊಂದಿಗೆ ಅದ್ಭುತವಾಗಿ ನೃತ್ಯ ಮಾಡುತ್ತಿದ್ದಾಳೆ. ತಂದೆ ಮಗಳ ಸುಂದರವಾದ ಭಾಂದವ್ಯ ಈ ವಿಡಿಯೋದ ಮೂಲಕ ವ್ಯಕ್ತವಾಗಿದೆ. ಈ ದೃಶ್ಯವನ್ನು ನೆಟ್ಟಿಗರು ಇಷ್ಟಪಟ್ಟಿದ್ದು, ಫುಲ್ ವೈರಲ್ ಆಗಿದೆ.

ವಿಡಿಯೊವನ್ನು ಇನ್ಸ್ಟಾಗ್ರಾಮ್​ನಲ್ಲಿ ಇದೀಗ ಹಂಚಿಕೊಳ್ಳಲಾಗಿದೆ. ವೆಡ್ಡಿಂಗ್ ಕೊರಿಯಾಗ್ರಫರ್ಸ್ ಎಂಬ ಪುಟದಿಂದ ವಿಡಿಯೊ ಹಂಚಿಕೊಳ್ಳಲಾಗಿದೆ. ವಧು ಸುಂದರವಾದ ಲೆಹೆಂಗಾ ತೊಟ್ಟು ನೃತ್ಯ ಮಾಡಿದ್ದಾಳೆ.  ನೆಟ್ಟಿಗರು ವಿಡಿಯೊವನ್ನು ಹೆಚ್ಚಿ ಇಷ್ಟಪಟ್ಟಿದ್ದು ಇಮೋಜಿಗಳನ್ನು ಕಳುಹಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಂತೂ ಇಂತೂ ಮದುವೆಯಲ್ಲಿ ವಧು-ವರರು ಈ ರೀತಿ ವೈರಲ್ ಆಗಿದ್ದಾರೋ ಗೊತ್ತಿಲ್ಲ, ಆದರೆ ವಧು ಮತ್ತು ಆಕೆಯ ತಂದೆಯ ನೃತ್ಯ ಮಾತ್ರ ಸಖತ್ ವೈರಲ್ ಆಗಿದೆ.