Home Interesting Viral Video: ತೋಳವೋ? ನರಿಯೋ? ವಿಶ್ವವನ್ನೇ ಗೊಂದಲಕ್ಕೀಡು ಮಾಡಿದ ಪ್ರಾಣಿ | ನಿಜಕ್ಕೂ ಏನಿದು?

Viral Video: ತೋಳವೋ? ನರಿಯೋ? ವಿಶ್ವವನ್ನೇ ಗೊಂದಲಕ್ಕೀಡು ಮಾಡಿದ ಪ್ರಾಣಿ | ನಿಜಕ್ಕೂ ಏನಿದು?

Hindu neighbor gifts plot of land

Hindu neighbour gifts land to Muslim journalist

ಪ್ರಾಣಿ ಪಕ್ಷಿಗಳು ಒಂದಕ್ಕೊಂದು ವಿಭಿನ್ನ ಆಗಿವೆ. ಅದಲ್ಲದೆ ಅವುಗಳ ಪರಿಪೂರ್ಣ ಆಗುಹೋಗುಗಳನ್ನು ತಿಳಿಯಲು ನಮಗೆ ಸಾಧ್ಯವಿಲ್ಲ. ಮತ್ತು ಸುತ್ತ ಮುತ್ತಲು ಎಷ್ಟೋ ಬಗೆಯ ಪ್ರಾಣಿ ಪಕ್ಷಿಗಳಿವೆ ಅಂತ ನಿಖರವಾಗಿ ಲೆಕ್ಕವಿಡಲು ಸಹ ಸಾಧ್ಯವೇ ಆಗುವುದಿಲ್ಲ. ಎಷ್ಟೋ ಪ್ರಾಣಿಗಳನ್ನು ನಾವು ನಮ್ಮ ಸುತ್ತಮುತ್ತಲೂ ಪರಿಸರದಲ್ಲಿ ನೋಡಿರುತ್ತೇವೆ. ಎಷ್ಟೋ ಬಾರಿ ಸುಮಾರು ವರ್ಷಗಳ ಹಿಂದೆ ಕಾಣಿಸಿಕೊಂಡ ಪ್ರಾಣಿ ಪ್ರಭೇದಗಳು ನಮಗೆ ಅಪರೂಪಕ್ಕೆ ಎಂಬಂತೆ ಮತ್ತೆ ನೋಡಲು ಸಿಗುತ್ತವೆ . ಹೌದು ಇಲ್ಲೊಂದು ಪ್ರಾಣಿಯೂ ಯಾವ ಜಾತಿಗೆ ಸೇರಿದೆ ಎಂಬ ಗೊಂದಲ ಉಂಟಾಗಿದೆ.

ಸದ್ಯ ಈ ಅಪರೂಪದ ಪ್ರಾಣಿಯನ್ನು ಕೆಲವರು ತೋಳ ಎಂದರೆ, ಇನ್ನೂ ಕೆಲವರು ಇದು ನರಿಯ ಒಂದು ಜಾತಿ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉದ್ದವಾದ ಕೆಂಪು-ಕಂದು ಬಣ್ಣದ ತುಪ್ಪಳ, ಅತ್ಯಂತ ಉದ್ದವಾದ ಕಪ್ಪು ಕಾಲುಗಳು ಮತ್ತು ನರಿಯಂತಹ ತಲೆಯನ್ನು ಹೊಂದಿರುವ ಮ್ಯಾನ್ಡ್ ತೋಳ ಆಗಿರಬಹುದು ಎಂದು ಹೇಳುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ನರಿಯೂ ಅಲ್ಲದ ತೋಳವೂ ಅಲ್ಲದ ಪ್ರಾಣಿಯೊಂದು . ತೀರಾ ವಿಚಿತ್ರವಾಗಿರುವ ಈ ಪ್ರಾಣಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ.

ದಕ್ಷಿಣ ಅಮೆರಿಕಾದಲ್ಲಿ ಈ ಅಸಾಮಾನ್ಯ ಪ್ರಾಣಿ ಆಕಸ್ಮಿಕವಾಗಿ ರಸ್ತೆ ದಾಟುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಸದ್ಯ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವ್ಯಕ್ತಿ, “ಯಾರಿಗಾದರೂ ಗೊತ್ತಾ ಇದು ಏನು ಅಂತಾ?!” ಎಂದು ಟ್ವಿಟ್ಟರ್ ಬಳಕೆದಾರರಿಗೆ ಪ್ರಶ್ನೆ ಮಾಡಿ, ಶೀರ್ಷಿಕೆ ಬರೆದಿದ್ದಾರೆ.

ಈ ಪೋಸ್ಟ್ ಅನ್ನು ಈಗಾಗಲೇ ಎರಡು ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅನೇಕ ಟ್ವಿಟರ್ ಬಳಕೆದಾರರು ಇಂತಹ ಪ್ರಾಣಿಯನ್ನು ವೀಕ್ಷಿಸಿ ದಿಗ್ಭ್ರಮೆಗೊಂಡಿದ್ದಾರೆ. ಕೆಲವರು ಇದು ಕತ್ತೆಕಿರುಬ ಎಂದು ಭಾವಿಸಿದರೆ, ಇತರರು ವೀಡಿಯೊವನ್ನು ನಕಲಿ ಎಂದು ಕರೆದಿದ್ದಾರೆ.

ಮಾಹಿತಿ ಪ್ರಕಾರ ಇದು ರಾತ್ರಿಯ ಸಮಯದಲ್ಲಿ ಓಡಾಡುವ ಜೀವಿ. ಅಷ್ಟೇ ಅಲ್ಲದೆ, ಇದು ಒಂಟಿಯಾಗಿ ಓಡಾಡುವ ಪ್ರಾಣಿಯಾಗಿದ್ದು, ಸಣ್ಣ ಪ್ರಾಣಿಗಳು, ಕೀಟ ಮತ್ತು ಸಸ್ಯ ಪದಾರ್ಥಗಳನ್ನು ತಿಂದು ಬದುಕುತ್ತವೆ ಎಂದು ಹೇಳಲಾಗುತ್ತಿದೆ.

‘ಮೇನ್ಡ್ ವುಲ್ಫ್’ ವಿಡಿಯೋವೊಂದು ಸದ್ಯ ವೈರಲ್ ಆಗಿದ್ದು, ಇಂಟರ್ನೆಟ್ ತುಂಬಾ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ ಇಂಟರ್ನೆಟ್ ಬಳಕೆದಾರ ರೆಗ್ ಸ್ಯಾಡ್ಲರ್ ಎಂಬವರು ಹಂಚಿಕೊಂಡ ವೀಡಿಯೊದಲ್ಲಿ, ಪ್ರಾಣಿ ಶಾಂತವಾಗಿ ರಸ್ತೆ ದಾಟುತ್ತಿರುವುದನ್ನು ಕಾಣಬಹುದು. ವಿಚಿತ್ರವೆಂದರೆ ಪ್ರಾಣಿಯು ಮೊದಲ ನೋಟದಲ್ಲಿ ತೋಳದಂತೆ ಕಂಡರೂ ಸಹ, ಬಳಿಕ ಹತ್ತಿರದಿಂದ ನೋಡಿದರೆ ಅದು ನರಿ ಥರ ಕಾಣಿಸುತ್ತದೆ. ಇದು ಯಾವ ವರ್ಗಕ್ಕೆ ಸೇರಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ವೀಡಿಯೋವನ್ನು ಟ್ವಿಟರ್ ಪೇಜ್ ಫೇಸಿನೇಟಿಂಗ್ ರಿಟ್ವೀಟ್ ಮಾಡಿದೆ. ಅಲ್ಲಿ ಈ ಪ್ರಾಣಿಯನ್ನು ‘ಮೇನ್ಡ್ ವುಲ್ಫ್’ ಎಂದು ಹೇಳಿದ್ದಾರೆ. ಬ್ರಿಟಾನಿಕಾ ಪ್ರಕಾರ, ಈ ಜಾತಿಯು ಮಧ್ಯ ದಕ್ಷಿಣ ಅಮೆರಿಕಾದ ದೂರದ ಬಯಲು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಈ ಪ್ರಾಣಿಯು ನಾಯಿ ಕುಟುಂಬಕ್ಕೆ ಸೇರಿದ ಅಪರೂಪದ ದೊಡ್ಡ-ಇಯರ್ಡ್ ಪ್ರಾಣಿಯಾಗಿದೆ.

ಒಟ್ಟಿನಲ್ಲಿ ಈ ಅಪರೂಪದ ಪ್ರಾಣಿಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ.