Home Interesting ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ !! | ಕಣ್ಣು, ಮೂಗು, ಬಾಯಿ ದಿಟ್ಟೋ...

ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ !! | ಕಣ್ಣು, ಮೂಗು, ಬಾಯಿ ದಿಟ್ಟೋ ಮನುಷ್ಯನಂತಿರುವ ಮೇಕೆ ಮರಿಯನ್ನು ನೋಡಲು ಹರಿದುಬರುತ್ತಿದೆ ಜನಸಾಗರ

Hindu neighbor gifts plot of land

Hindu neighbour gifts land to Muslim journalist

ಪ್ರಾಣಿಗಳು ಅದರದ್ದೇ ರೂಪ ಹೋಲುವಂತಹ ಮರಿಗಳಿಗೆ ಜನ್ಮ ನೀಡುವುದು ಸಹಜ. ಆದರೆ ಇಲ್ಲಿ ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಲಕ್ಷಣವಾದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ.

ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೇಕೆ ಮರಿ ಇನ್ನೂ ಬದುಕಿದೆ. ಮನುಷ್ಯನ ಹೋಲಿಕೆ ಹೊಂದಿರುವ ಮೇಕೆಯನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ. ಆ
ಮೇಕೆ ಮರಿಯ ಕಣ್ಣು, ಮೂಗು ಮತ್ತು ಬಾಯಿ ಮನುಷ್ಯನಂತೆ ಇದ್ದು, ಅದರ ಕಿವಿಗಳು ಮಾತ್ರ ಮೇಕೆಯಂತಿದೆ. ಇನ್ನೂ ಈ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಅಪರೂಪದ ಮೇಕೆ ಮರಿಯನ್ನು ನೋಡಲು ಜಮಾಯಿಸಿದ್ದಾರೆ.

ಈ ಹಿಂದೆ ಗುಜರಾತ್‍ನ ಸಾಂಗ್ದ್ ತಾಲೂಕಿನ ಟ್ಯಾಪಿ ನದಿಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ಇದೇ ರೀತಿ ಮನುಷ್ಯನ ಹೋಲಿಕೆ ಹೊಂದಿದ್ದ ಮರಿಗೆ ಮೇಕೆಯೊಂದು ಜನ್ಮ ನೀಡಿತ್ತು. ವಿಚಿತ್ರ ಎಂದರೆ ಈ ಮೇಕೆ ಮರಿಗೆ ನಾಲ್ಕು ಕಾಲು ಹಾಗೂ ಕಿವಿಗಳಿತ್ತು ಮತ್ತು ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯನಂತ್ತಿತ್ತು. ಆದರೆ ಆ ಮೇಕೆ ಮರಿ ಜನಿಸಿದ ಹತ್ತು ನಿಮಿಷದ ನಂತರ ಸಾವನ್ನಪ್ಪಿತ್ತು.