Home Interesting Great Escape: ಮನೆಯೊಳಗೆ ಬಂದ ಚಿರತೆಯನ್ನೇ ಹಿಡಿದ 12 ವರ್ಷದ ಧೀರ ಬಾಲಕ; ವೀಡಿಯೋ ವೈರಲ್

Great Escape: ಮನೆಯೊಳಗೆ ಬಂದ ಚಿರತೆಯನ್ನೇ ಹಿಡಿದ 12 ವರ್ಷದ ಧೀರ ಬಾಲಕ; ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Great Escape: ಆ ಬಾಲಕ ಮನೆಯೊಳಗೆ ಮೊಬೈಲ್‌ ಹಿಡಿದುಕೊಂಡು ಆಟವಾಡುತ್ತಿದ್ದ. ಏಕಾಏಕಿ ಮನೆಗೆ ಚಿರತೆ ನುಗ್ಗಿಬಿಟ್ಟಿದೆ. ಆದರೆ ಆ ಬಾಲಕ ಚೀರಾಡದೆ, ಬೊಬ್ಬಿಡದೆ, ಆ ಚಿರತೆ ಒಳಗಿನ ಕೋಣೆಯೊಳಗೆ ಹೋಗುವವರೆಗೆ ಕಾದು, ನಂತರ ಮನೆಯಿಂದ ಮೆಲ್ಲನೆ ಹೊರಗೆ ಬಂದು, ಮುಖ್ಯ ದ್ವಾರದ ಬಾಗಿಲು ಹಾಕಿ ಚಿರತೆಯನ್ನು ಲಾಕ್‌ ಮಾಡಿದ್ದಾನೆ.

ಹೌದು, ನಿಜ, ಇದು ಸತ್ಯ ಘಟನೆ. ಈ ಪ್ರಕರಣ ನಡೆದಿರುವುದು ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ. ತನ್ನ ಚಾಣಾಕ್ಷತನದಿಂದ ಚಿರತೆಯನ್ನು ಮನೆಯೊಳಗೆ ಬಂಧಿ ಮಾಡಿದ್ದಾನೆ ಈ ಬಾಲಕ.

ಮನೆಯೊಳಗೆ ಚಿರತೆ ಪ್ರವೇಶ ಮಾಡಿದರೂ ಬಾಲಕ ಒಂದು ಚೂರು ಸದ್ದು ಮಾಡದ ಕಾರಣ, ಚಿರತೆಗೆ ಗೊತ್ತಾಗಲಿಲ್ಲ. ಅಲ್ಲದೆ ಮನೆಯೊಳಗೆ ಬಂದ ಚಿರತೆ ಆಚೆ ಈಚೆ ಕೂಡಾ ನೋಡದೆ ನೇರವಾಗಿ ಮನೆಯ ಒಳಗೆ ಪ್ರವೇಶ ಮಾಡಿದೆ. ಬಾಲಕ ಇರುವುದು ಚಿರತೆಗೆ ಗೊತ್ತಾಗಲಿಲ್ಲ. ಹಾಗಾಗಿ ಬಾಗಿಲು ಹಾಕಿದ ಬಾಲಕನ ಜೀವ ಉಳಿದುಕೊಂಡಿದೆ.

ಮನೆಯಿಂದ ಹೊರಗೆ ಬಂದು ಚಿಲಕ ಹಾಕಿದ ಬಾಲಕ ಕೂಡಲೇ ಅಲ್ಲಿನ ನೆರೆಹೊರೆಯವರಲ್ಲಿ ವಿಚಾರ ತಿಳಿಸಿದ್ದಾನೆ. ಕೂಡಲೇ ಎಚ್ಚೆತ್ತ ಅಕ್ಕಪಕ್ಕದವರು ಮನೆಯ ಬಳಿ ಬಂದು ಬಾಗಿಲು ಭದ್ರಪಡಿಸಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಕಿಟಕಿಯ ಮೂಲಕ ಚಿರತೆಯನ್ನು ನೋಡಿ, ಮನೆಯೊಳಗೆ ಆಚೆ ಈಚೆ ಹೋಗುವುದು ಕಂಡು ನಂತರ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗೆ ಅರಿವಳಿಕೆ ಮದ್ದು ನೀಡಿದ್ದಾನೆ. ನಿದ್ರೆಗೆ ಜಾರಿದ ಚಿರತೆಯನ್ನು ಕೂಡಲೇ ರಕ್ಷಣೆ ಮಾಡಿ ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ.