Home Interesting ಬ್ರೇಕಪ್ ಅಂದಿದ್ದೇ ತಡ, ಯುವಕನ ಬಿರಿಯಾನಿ ಮಾಡಿಯೇ ಬಿಟ್ಟಳು ಯುವತಿ, ಅಷ್ಟಕ್ಕೂ ಇದನ್ನು ಹಂಚಿದ್ದಾದರೂ ಯಾರಿಗೆ...

ಬ್ರೇಕಪ್ ಅಂದಿದ್ದೇ ತಡ, ಯುವಕನ ಬಿರಿಯಾನಿ ಮಾಡಿಯೇ ಬಿಟ್ಟಳು ಯುವತಿ, ಅಷ್ಟಕ್ಕೂ ಇದನ್ನು ಹಂಚಿದ್ದಾದರೂ ಯಾರಿಗೆ ಗೊತ್ತೇ? ಇದು ಚಿಕನ್ ಬಿರಿಯಾನಿ ಅಲ್ಲ, ಲವರ್ ಬಿರಿಯಾನಿ !!!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಎಷ್ಟೇ ನವಿರಾದ ಭಾವನೆಯನ್ನು ನೀಡುತ್ತದೆಯೋ ಹಾಗೆಯೇ, ಅಷ್ಟೇ ಕ್ರೂರತೆಯನ್ನು ಹೊಂದಿದೆ ಎಂದು ಈ ಘಟನೆಯಿಂದ ಗೊತ್ತಾಗುತ್ತೆ. ಪ್ರೀತಿಯಲ್ಲಿ ಕೊಂಚ ಬಿರುಕು ಮೂಡಿದರೂ ಜನ ಯಾವ ಮಟ್ಟಕ್ಕೆ ತಲುಪುತ್ತಾರೆ ಎಂಬುದಕ್ಕೆ ನಾವಿವತ್ತು ತಿಳಿಸ ಹೊರಟಿರುವ ಘಟನೆಯೇ ಸಾಕ್ಷಿ.

ಪ್ರಿಯತಮನೋರ್ವ ಬ್ರೇಕ್ ಅಪ್ ಮಾಡಿದ್ದ ಎಂದು ಹೇಳಿದ್ದಕ್ಕೆ, ಆತನನ್ನೇ ಕತ್ತರಿಸಿ ಬಿರಿಯಾನಿ ಮಾಡಿದ ಘಟನೆಯೊಂದು ದೂರದ ಮೊರಕ್ಕೋದಲ್ಲಿ ನಡೆದಿದೆ. ಉತ್ತರ ಆಫ್ರಿಕಾದ ಮೋರಕ್ಕೋ ದೇಶದಲ್ಲಿ ನಡೆದಿರುವಂತಹ ಈ ಒಂದು ಘಟನೆ ನಿಜಕ್ಕೂ ಎಂತಹ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದೆ ಎಂದರೆ ತಪ್ಪಾಗಲಾರದು.

ದೂರದ ಊರಲ್ಲಿ ಒಂದು ಕೆಲಸ ದೊರಕಿತು ಎಂದು ಬೇರೆ ಕಡೆ ಬಂದು ಸೆಟ್ಲ್ ಆದ ಒಬ್ಬ ಯುವಕ ಮತ್ತು ಯುವತಿ, ಕೆಲಸ ಮಾಡುತ್ತಲೇ ಸುಮಾರು 8 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಇಷ್ಟು ವರ್ಷಗಳ ಕಾಲ ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದ ಯುವಕ ಆಕೆಯ ಜೊತೆ ಎಲ್ಲಾ ಮಾಡಿ ಮುಗಿಸಿದ ನಂತರ, ಎಲ್ಲವನ್ನು ಅನುಭವಿಸಿದ ನಂತರ ಬಹುಶಃ ಆಕೆ ಬೇಡವಾದಳೇನೋ. ಹಾಗಾಗಿ ಒಂದು ದಿನ ಯುವಕ ನಾನು ಈ ಪ್ರೀತಿಯನ್ನು ಅಂತ್ಯ ಮಾಡಬೇಕೆಂದುಕೊಂಡಿದ್ದೇನೆ. ಎಲ್ಲವನ್ನು ಇಲ್ಲಿಗೆ ಬಿಡೋಣ ಇನ್ನು ಮುಂದೆ ನಮ್ಮ ದಾರಿ ನಮಗೆ. ಮನೆಯವರು ತೋರಿಸಿದ ಹುಡುಗಿಯೊಂದಿಗೆ ಮದುವೆಯಾಗುತ್ತಿದ್ದೇನೆ ಎಂಬಿತ್ಯಾದಿ ಮಾತನ್ನು ಯುವತಿಗೆ ತಿಳಿಸುತ್ತಾನೆ. ಈ ಮಾತಿನಿಂದ ಯುವತಿ ಕೊಂಚ ವಿಚಲಿತಳಾಗಿದ್ದಾಳೆ. ಯುವತಿ ತಾನು ಏನು ಮಾಡಬೇಕೆಂಬುದನ್ನು ಅರಿಯದೆ ಅಳುತ್ತ ಕೂತಾಗ, ಒಂದು ವಿಕೃತಿ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾಳೆ.

ಈಕೆ ಮಾಡಿದ ಕೆಲಸ ನಿಜಕ್ಕೂ ಎಂತವರನ್ನೂ ಬೆಚ್ಚಿಬೀಳಿಸಿವಂತದ್ದು. ಹೌದು, ಕುಪಿತಳಾದ ಪ್ರೇಯಸಿ, ಪ್ರಿಯಕರ ಮನೆಗೆ ಬರುತ್ತಿದ್ದಂತೆ ಆತನ ತಲೆ ಬುರುಡೆಗೆ ಹೊಡೆದು ಅವನನ್ನು ಸ್ಥಳದಲ್ಲೇ ಸಾಯಿಸಿ ನಂತರ ಅವನ ಶವವನ್ನು ಹೊರಸಾಗಿಸಲು ಕಷ್ಟವಾದಾಗ ದೇಹ”ವನ್ನು ತುಂಡು ತುಂಡಾಗಿ ಕತ್ತರಿಸಿ ಬಿರಿಯಾನಿ ಮಾಡಿ ತಾನು ತಿಂದು ಪಕ್ಕದ ಪಾಕಿಸ್ತಾನಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಂತಹ ನೂರಾರು ಜನ ಮಂದಿಗೆ ಹಂಚಿದ್ದಂತಹ ಘಟನೆ ನಡೆದಿದೆ.

ಆ ಪ್ರಾಂತ್ಯದಲ್ಲಿ ಒಂಟೆ ಮತ್ತು ಕುದುರೆಗಳ ಮಾಂಸದ ಬಿರಿಯಾನಿಗಳು ಇದೇ ರೀತಿ ರುಚಿಸುವುದರಿಂದ ಕೆಲಸಗಾರರು ಯಾವುದೇ ಸಂಶಯವಿಲ್ಲದೆ ಬಿರಿಯಾನಿಯನ್ನು ತಿಂದಿದ್ದಾರೆ. ಆದರೆ ಅನಂತರ ನಡೆದದ್ದು ಟ್ವಿಸ್ಟ್ . ಏನೆಂದರೆ ತನ್ನ ಅಣ್ಣ ಸುಮಾರು ದಿನದಿಂದ ಕಾಲ್ ಮಾಡಿಲ್ಲ ಎಂದು ಆತನನ್ನು ಹುಡುಕಿಕೊಂಡು ಬಂದಂತಹ ಸಹೋದರ ಅನುಮಾನಗೊಂಡು, ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರ ತನಿಖೆಯ ನಂತರ ಯುವತಿಯ ಮನೆಯ ಮಿಕ್ಸಿ ಜಾರಿನಲ್ಲಿ ಎರಡು ದವಡೆ ಹಲ್ಲುಗಳು ಪತ್ತೆಯಾಗಿದ್ದವು ಹೀಗೆ ಸಿಸಿ ಟಿವಿ ಕ್ಯಾಮೆರಾದಲ್ಲೂ ಪರಿಶೀಲಿಸಿದಾಗ ಯುವಕ ಮನೆಯ ಒಳಗೆ ಬಂದಿದಂತಹ ರೆಕಾರ್ಡ್ ಇತ್ತೇ ಹೊರತು ಹೊರ ಹೋಗಿದ್ದು ಇರಲಿಲ್ಲ. ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡ ಯುವತಿ ಸದ್ಯ ಈಗ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾಳೆ.