Home Interesting ನಿಮ್ಮ ಮಗುವಿಗೆ ನಾಮಕರಣ ಮಾಡ್ತಾ ಇದ್ದೀರಾ? ಇಲ್ಲೊಬ್ರು ಹೆಲ್ಪ್​ ಮಾಡ್ತಾರೆ, ಆದರೆ ದುಡ್ಡು ಕೊಡಬೇಕು!

ನಿಮ್ಮ ಮಗುವಿಗೆ ನಾಮಕರಣ ಮಾಡ್ತಾ ಇದ್ದೀರಾ? ಇಲ್ಲೊಬ್ರು ಹೆಲ್ಪ್​ ಮಾಡ್ತಾರೆ, ಆದರೆ ದುಡ್ಡು ಕೊಡಬೇಕು!

Hindu neighbor gifts plot of land

Hindu neighbour gifts land to Muslim journalist

ಮಗು ಹುಟ್ಟಲಿದೆ ಅಂತ ತಿಳಿದರೆ ಸಾಕು ಗಂಡ-ಹೆಂಡತಿ ಗಂಡು ಮಗು ಹುಟ್ಟಿದರೆ ಈ ಹೆಸರು ಚೆನ್ನಾಗಿರುತ್ತದೆ ಮತ್ತು ಹೆಣ್ಣು ಮಗು ಹುಟ್ಟಿದರೆ ಆ ಮಗುವಿನ ಹೆಸರು ಹೀಗೆ ಇಡೋಣ ಅಂತೆಲ್ಲಾ ಮಾತಾಡುವುದನ್ನು ನಾವು ಒಮ್ಮೆಯಾದರೂ ನೋಡಿರುತ್ತೇವೆ. ಅದೇನೋ ಒಂದು ರೀತಿ ಸಂಭ್ರಮ ಮತ್ತು ಸಡಗರ ಅಂತಾನೇ ಹೇಳ್ಬೋದು. ಸಾಮಾಜಿಕ ಜಾಲತಾಣಗಳಲ್ಲಿ ಹುಡುಕುವುದು, ಇನ್ನೊಬ್ಬರಲ್ಲಿ ಕೇಳುವುದು ಹೀಗೆ ನಾನಾ ರೀತಿಯಾಗಿ ಸಂಭ್ರಮ ಇರುತ್ತದೆ. ‘ಪ್ರೊಫೆಷನಲ್ ಬೇಬಿ ನೇಮರ್’, ಅವರಿಗೆ ನೀವು ಹಣವನ್ನು ನೀಡಿದರೆ ನಾನಾರೀತಿಯ ಹೆಸರುಗಳನ್ನು ಸೂಚಿಸುತ್ತಾರೆ. ಇಷ್ಟರ ಮಟ್ಟಿಗೆ ಬೆಳೆದಿದೆ ಸಾಮಾಜಿಕ ಜಾಲತಾಣ ಮತ್ತು ಅಧುಕೃತ ವೆಬ್​ಸೈಟ್​ಗಳು.
ನ್ಯೂಯಾರ್ಕ್ ಮೂಲದ ‘ಪ್ರೊಫೆಷನಲ್ ಬೇಬಿ ನೇಮರ್’ ಟೇಲರ್ ಎ. ಹಂಫ್ರೆ ಅವರು, ತಮ್ಮ ಮಗುವಿಗೆ ಪರಿಪೂರ್ಣವಾದ ಹೆಸರನ್ನು ಆಯ್ಕೆ ಮಾಡುವ ಹಂತದಲ್ಲಿರುವ ಪೋಷಕರು 1,500 ಡಾಲರ್ ಎಂದರೆ 1.14 ಲಕ್ಷ ರೂಪಾಯಿ ಹಣ ನೀಡುತ್ತಾರಂತೆ ಎಂದು ಹೇಳಲಾಗುತ್ತಿದೆ.
ಕೆಲ ಪೋಷಕರು 10,000 ಡಾಲರ್ ಎಂದರೆ 7.6 ಲಕ್ಷ ರೂಪಾಯಿ ಸಹ ನೀಡುತ್ತಾರೆ. ಇಂತಹ ದೊಡ್ಡ ಮೊತ್ತವನ್ನು ನೀಡುತ್ತಾರೆಯೇ ಮಗುವಿಗೆ ಒಳ್ಳೆಯ ಹೆಸರು ಸೂಚಿಸುವುದಕ್ಕೆ ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಇಷ್ಟು ದೊಡ್ಡ ಮೊತ್ತವನ್ನು ಪಡೆದು ಹಂಫ್ರೆ ಅವರು ಪೋಷಕರು ತಮ್ಮ ಮಗುವಿಗೆ ಉತ್ತಮವಾದ ಹೆಸರು ನಿರ್ಧರಿಸಲು ಸಹಾಯ ಮಾಡುತ್ತಾರೆ

ಹಂಫ್ರೆ 2015 ರಲ್ಲಿ ತನ್ನ ನೆಚ್ಚಿನ ಮಗುವಿನ ಹೆಸರುಗಳು ಮತ್ತು ಅವುಗಳ ಅರ್ಥಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಈ ವೃತ್ತಿಪರ ಜೀವನವನ್ನು ಶುರು ಮಾಡಿದರು.
“ನಾನು ಎಷ್ಟು ಕಡಿಮೆ ಫಾಲೋವರ್ಸ್ ಗಳನ್ನು ಹೊಂದಿದ್ದರೂ ಸಹ ಎಷ್ಟೊಂದು ಜನರು ನನ್ನನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ ಅಂತ ನೋಡಿದರೆ ನನಗೆ ತುಂಬಾನೇ ಆಶ್ಚರ್ಯವಾಯಿತು. ನಾನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಾಗ, ಜನರು ಈ ಮುದ್ದಾದ ಹೆಸರುಗಳ ಮೇಲಿನ ತಮ್ಮ ಪ್ರೀತಿಯಿಂದ ನನ್ನ ಬಳಿಗೆ ಬರುತ್ತಿದ್ದರು. ನಾನು ಯಾವಾಗಲೂ ಒಳ್ಳೆಯ ಹೆಸರುಗಳನ್ನು ಹೊಂದಿದ್ದೆ, ಆದ್ದರಿಂದ ನಮ್ಮಲ್ಲಿ ಬಹಳಷ್ಟು ಜನರು ಬರುತ್ತಿದ್ದುದ್ದನ್ನು ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು” ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಕೆಲವು ಪೋಷಕರು ತಮ್ಮ ಮಗುವಿಗೆ ಒಂದೊಳ್ಳೆ ಹೆಸರು ಇಡುವುದಕ್ಕೆ ಹಣ ನೀಡುತ್ತಾರೆ ಎಂದು ಹಂಫ್ರೆ ಅವರು ಹೇಳುತ್ತಾರೆ.

ಓದಿದ್ರಲ್ಲಾ ನೀವು ಕೂಡ ನಿಮ್ಮ ಮಗುವಿಗೆ ಹೆಸರು ಇಡಿಸಲು ಇವರ ಬಳಿ ಹೋಗಿ. ಆದರೆ ದುಡ್ಡು ಮಾತ್ರ ಎಷ್ಟು ಇರಬೇಕು ಅಂತ ಗೊತ್ತಾಯ್ತಲ್ವಾ?