Home Interesting ನಮ್ಮ ಪಕ್ಕದ ಜಿಲ್ಲೆಯಲ್ಲಿದೆ ಒಂದು ವಿಚಿತ್ರ ಆಚರಣೆ | ಹಸಿ ಹಸಿ ಸಗಣಿಯಿಂದ ಹೊಡೆಸಿಕೊಂಡರೆ ಎಲ್ಲಾ...

ನಮ್ಮ ಪಕ್ಕದ ಜಿಲ್ಲೆಯಲ್ಲಿದೆ ಒಂದು ವಿಚಿತ್ರ ಆಚರಣೆ | ಹಸಿ ಹಸಿ ಸಗಣಿಯಿಂದ ಹೊಡೆಸಿಕೊಂಡರೆ ಎಲ್ಲಾ ಪರಿಹಾರ !!

Hindu neighbor gifts plot of land

Hindu neighbour gifts land to Muslim journalist

ಹಾಸನ:ಅದೆಷ್ಟೋ ದೇವಾಲಯಗಳ ದೇವರು ಬೇಡಿಕೊಂಡು ಬಂದ ಭಕ್ತರಿಗೆ ಇಂಬನ್ನು ಕೊಟ್ಟು ಭಕ್ತರ ಪ್ರೀತಿಗೆ ಪಾತ್ರವಾಗಿದೆ. ಆದರೆ ಇಲ್ಲೊಂದು ದೇವಾಲಯದ ಪದ್ಧತಿಯಿಂದಲೇ ಪ್ರಸಿದ್ಧಿ ಹೊಂದಿದೆ.ಹೌದು. ಇಲ್ಲಿಯ ಹರಕೆ ಸೇವೆ ವಿಚಿತ್ರವಾದರೂ ವಿಶಿಷ್ಟವಾಗಿದೆ.ಅಷ್ಟಕ್ಕೂ ಇದು ಯಾವ ರೀತಿಯಲ್ಲಿದೆ ಎಂಬುದು ಮುಂದೆ ನೋಡಿ.

ಇಲ್ಲಿ ಹರಕೆ ತೀರಿಸಲು ಬಂದ ಭಕ್ತರಿಗೆ ಸಗಣಿ ಎಸೆಯುವುದು ಇಲ್ಲಿಯ ಪದ್ಧತಿ.ಹೌದು ಈ ಸಂಜೀವಿನಿ ಆಂಜನೇಯಸ್ವಾಮಿ ನೆಲೆಸಿರುವ ಪುಣ್ಯಕ್ಷೇತ್ರವು ಹಾಸನ ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮವಾಗಿದ್ದು,ಜೈನಕಾಶಿ ಶ್ರವಣಬೆಳಗೊಳದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ.

ಇಲ್ಲಿಯ ದೇವರ ಹರಕೆ ಹೇಗಿರುತ್ತ ಎಂದರೆ, ಹರಕೆಯೊತ್ತವರನ್ನು, ಹರಕೆ ತೀರಿಸುವವರನ್ನು ಏಣಿಯ ಮೇಲೆ ಕೂರಿಸಿ,ಬಳಿಕ ಅವರಿಗೆ ಗೋಣಿಚೀಲದ ಬಟ್ಟೆಯನ್ನು ತೊಡಿಸಿ ಏಣಿಯ ಮೇಲೆ ಕುಳಿತ ಭಕ್ತನನ್ನು ಹೊತ್ತು ಊರಿನ ತುಂಬಾ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ವೇಳೆ ಊರ ಮಂದಿ ಆತನಿಗೆ ತಮ್ಮ ಮನೆಯ ಮುಂದೆ ಬಂದಾಗ ಸಗಣಿ, ಬೂದಿ, ಗಂಜಲ, ನೀರಿನಿಂದ ಆತನಿಗೆ ಎರಚುತ್ತಾರೆ. ಹೀಗೆ ಊರ ಮಂದಿಯಿಂದ ಹೊಡೆಸಿಕೊಂಡರೆ ಕುಟುಂಬದ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ರಾಜ್ಯದಲ್ಲೆಲ್ಲೂ ಆಚರಿಸದ ಈ ಆಚರಣೆಯನ್ನು ಈ ಗ್ರಾಮದಲ್ಲಿ ಆಚರಿಸುವುದು ವಿಶೇಷ ಅಂತಾನೆ ಹೇಳಬಹುದು. ಊರಿಗೆ ಯಾವುದೇ ಬರಗಾಲ, ಕ್ಷಾಮ, ಅಂಗಮಾರಿ, ಸಾಂಕ್ರಾಮಿಕ ಮತ್ತು ಮಾರಕ ರೋಗಗಳಂತಹ ಖಾಯಿಲೆಗಳು ಬಾರದಿರಲೆಂದು ಹಾಗೂ ಸರಿಯಾದ ಸಮಯಕ್ಕೆ ಮಳೆಯಾಗಿ ಫಸಲು ಬರಲೆಂದು ಸಹ ಗ್ರಾಮದವರು ಹರಕೆಯೊತ್ತು ಏಣಿ ಮೇಲೆ ಕುಳಿತು ಬೂದಿ, ಗಂಜಲ ಮತ್ತು ಸಗಣಿಯಿಂದ ಹೊಡೆಸಿಕೊಳ್ಳುತ್ತಾರೆ. ಇದು ವಿಚಿತ್ರವೆನಿಸಿದರೂ ಕೂಡಾ ಇದು ಹನುಮನ ಹರಕೆ ಹಾಗಾಗಿ ನಾವು ಶಿಸ್ತು ಪಾಲಿಸುತ್ತೇವೆ ಎಂಬುದು ಭಕ್ತರ ಮಾತಾಗಿದೆ.