Home Interesting Goat Tree: ಇದೇನು ಮೇಕೆ ಮರವೇ?? ವೀಡಿಯೋ ನೋಡಿ ಶಾಕ್ ಆದ ನೆಟ್ಟಿಜನ್ಸ್!!

Goat Tree: ಇದೇನು ಮೇಕೆ ಮರವೇ?? ವೀಡಿಯೋ ನೋಡಿ ಶಾಕ್ ಆದ ನೆಟ್ಟಿಜನ್ಸ್!!

Hindu neighbor gifts plot of land

Hindu neighbour gifts land to Muslim journalist

Goat Tree: ಸೋಶಿಯಲ್ ಮೀಡಿಯಾದಲ್ಲಿ(Social Media)ದಿನಕ್ಕೊಂದು ವೀಡಿಯೋ(Video)ವೈರಲ್ ಆಗಿ ಸಂಚಲನ ಮೂಡಿಸುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ, ಮತ್ತೆ ಕೆಲವು ನಗೆಗಡಲಲ್ಲಿ ತೇಲಿಸುತ್ತವೆ. ಇದೀಗ, ವೈರಲ್ ಆಗಿರುವ ವೀಡಿಯೋ (Viral on Social Media)ನೋಡುಗರ ಕಣ್ಮನ ಸೆಳೆದಿದೆ. ಮೇಕೆಗಳ ಹಿಂಡುಗಳು (Goat)ಮರವೇರಿ ಕುಳಿತಿರುವ ದೃಶ್ಯ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.

 

ವೈರಲ್ ಆಗಿರುವ ವೀಡಿಯೋ ನೋಡಿದಾಗ ಇದೇನು ಮೇಕೆಯ ಮರವೇ?? ಎಂಬ ಪ್ರಶ್ನೆ ಸಹಜವಾಗಿ ನೋಡುಗರಿಗೆ ಕಾಡದೇ ಇರದು. ಸೂರಜ್ ಕುಶ್ವಾ (@surajkushwah5081) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೇಕೆಗಳು ಮರವೇರಿ ಕುಳಿತಿರುವ ದೃಶ್ಯವನ್ನು ನೋಡಬಹುದಾಗಿದೆ. ಈ ವೈರಲ್ ವಿಡಿಯೋ 11.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಮೂರು ಲಕ್ಷಕ್ಕೂ ಅಧಿಕ ಲೈಕ್ ಪಡೆದಿದೆ.

https://www.instagram.com/reel/Cxc33pMvhXG/?igsh=dXZqdTZ1eWhhemE4

 

ವೈರಲ್ ಆಗಿರುವ ವೀಡಿಯೋ ಮೊರೆಕೋದ ಪ್ರವಾಸಿ ತಾಣವೊಂದರ ದೃಶ್ಯವಾಗಿದ್ದು, ಈ ಪ್ರದೇಶದಲ್ಲಿ ಅರ್ಗಾನ್ ಹಣ್ಣಿನ ಮರವಿದೆಯಂತೆ. ಮೇಕೆಗಳು ಬಹಳ ಇಷ್ಟಪಟ್ಟು ತಿನ್ನುವ ರುಚಿಕರ ಹಣ್ಣು ಇದಾಗಿದ್ದು, ಈ ಪ್ರದೇಶದಲ್ಲಿ ಮೇಕೆಗಳ ಹಿಂಡು ಅರ್ಗಾನ್ ಹಣ್ಣಿನ ಮರವೇರಿ ಕುಳಿತು, ಮರದಲ್ಲಿನ ಹಣ್ಣುಗಳನ್ನು ತಿನ್ನುತ್ತವಂತೆ. ಮೇಕೆಗಳು ಮರವೇರುವ ಈ ಸುಂದರ ದೃಶ್ಯವನ್ನು ನೋಡುವ ಸಲುವಾಗಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರಂತೆ. ಇದೀಗ ಈ ಮೇಕೆಗಳು ಮರವೇರಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.