Home Interesting ಆಹಾರದ ವಾಸನೆ ಹಿಡಿದು ಅಡುಗೆ ಮನೆಯ ಕಿಟಕಿ ಒಡೆದು ಒಳ ಹೊಕ್ಕ ಆನೆ !! |...

ಆಹಾರದ ವಾಸನೆ ಹಿಡಿದು ಅಡುಗೆ ಮನೆಯ ಕಿಟಕಿ ಒಡೆದು ಒಳ ಹೊಕ್ಕ ಆನೆ !! | ಅಷ್ಟಕ್ಕೂ ಅಲ್ಲಿ ಬಂದು ಏನು ಮಾಡಿತು ಗೊತ್ತೇ??

Hindu neighbor gifts plot of land

Hindu neighbour gifts land to Muslim journalist

ಆನೆಗಳು ಹಾಗೂ ಮನುಷ್ಯನ ನಡುವಿನ ಸಂಘರ್ಷ ಇಂದು ಮತ್ತು ನೆನ್ನೆಯದಲ್ಲ.ಯಾವಾಗ ಮನುಷ್ಯ ಕಾಡನ್ನು ಕಡಿದು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡನೋ ಅಂದಿನಿಂದ ಇಂದಿನವರೆಗೂ ಆನೆಗಳು ಹಾಗೂ ಮನುಷ್ಯನ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬಂದಿದೆ. ಈಗೀಗ ಆಹಾರ ಅರಸಿ ಕಾಡಿನಿಂದ ನಾಡಿಗೆ ಆನೆಗಳು ಬರುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಹೀಗೆ ಆಹಾರ ಅರಸಿ ನಾಡಿಗೆ ಬಂದಾಗ ಕಾಡಾನೆಗಳ ಹಿಂಡು ಸಿಕ್ಕಸಿಕ್ಕ ಕಡೆ ಬೆಳೆದು ಬೆಳೆಯನ್ನೆಲ್ಲಾ ತಿಂದು ಮನಸೋಇಚ್ಛೆ ದಾಳಿಮಾಡಿ ಹೋಗುತ್ತವೆ. ಆದರೆ ಇಲ್ಲೊಂದು ಕಡೆ ನಾಡಿಗೆ ಬಂದ ಆನೆಯೊಂದು ಏನು ಮಾಡಿದೆ ಗೊತ್ತಾ??

ಒಂದು ಕ್ಷಣ ಎಲ್ಲರೂ ಬೆಚ್ಚಿಬೀಳುವಂತಹ ದೃಶ್ಯ ಇದು. ಇಲ್ಲೊಂದು ಕಡೆ ಆನೆಯೊಂದು ಮನೆಯ ಅಡುಗೆ ಮನೆಯ ಆಹಾರದ ತಿನಿಸಿಗೆ ಕೋಣೆಯ ಕಿಟಕಿಯನ್ನೇ ಮುರಿದಿದೆ. ಬಳಿಕ ಸಲೀಸಾಗಿ ಸೊಂಡಲಿನನ್ನು ಮನೆಯೊಳಗೆ ಹಾಕಿ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಈ ದೃಶ್ಯ ಎಲ್ಲರಿಗೂ ಒಂದು ಕ್ಷಣ ಆಘಾತ ಮೂಡಿಸಿದ್ದಂತೂ ನಿಜ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆನೆಯೊಂದು ಅಡುಗೆ ಕೋಣೆಯ ಕಿಟಕಿ ಮುರಿದು ಸೊಂಡಿಲನ್ನು ಒಳಗೆ ಹಾಕಿ ಆಹಾರ ಹುಡುಕುತ್ತಿರುವ ದೃಶ್ಯದ ಮೂಲಕ ಈ 1 ನಿಮಿಷ 59 ಸೆಕೆಂಡಿನ ಕ್ಲಿಪ್ ಶುರುವಾಗುತ್ತದೆ. ಆನೆಯ ಈ ಕಾರ್ಯವನ್ನು ಕಂಡು ಮನೆಯವರು ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಜೊತೆಗೆ, ಆನೆಯನ್ನು ಬೆದರಿಸಲು ಜೋರಾಗಿ ಶಬ್ದ ಕೂಡಾ ಮಾಡಿದ್ದರು. ಆದರೆ, ಯಾವ ಶಬ್ದಕ್ಕೂ ಹೆದರದ ಆನೆ ತನ್ನ ಪಾಡಿಗೆ ತಾನು ಆಹಾರಕ್ಕಾಗಿ ಹುಡುಕುತ್ತಿತ್ತು, ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿತ್ತು.

ಸದ್ಯ ಈ ವೀಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಈ ದೃಶ್ಯ ಕಂಡ ಎಲ್ಲರೂ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಅಚ್ಚರಿಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಹಾಗಂತ, ಇಂತಹ ಘಟನೆ ನಡೆಯುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡಾ ಇಂತಹ ಸಾಕಷ್ಟು ಘಟನೆಗಳು ನಡೆದಿದ್ದವು. ಇದೇ ವರ್ಷದ ಜೂನ್‌ನಲ್ಲಿ ಥೈಲ್ಯಾಂಡ್‌ನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಇಲ್ಲಿನ ಹುವಾ ಹಿನ್ ಜಿಲ್ಲೆಯ ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದ ಮನೆಯೊಂದರ ಗೋಡೆಯೊಡೆದು ಕಾಡಾನೆ ಆಹಾರಕ್ಕಾಗಿ ಹುಡುಕಾಟ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು.