Home Interesting ಶ್ರೀಕೃಷ್ಣನೊಂದಿಗೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ ತಂದೆ | ಕಾರಣ ಕೇಳಿದ್ರೆ ಮೂಕವಿಸ್ಮಿತರಾಗೋದು ಪಕ್ಕಾ!!

ಶ್ರೀಕೃಷ್ಣನೊಂದಿಗೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ ತಂದೆ | ಕಾರಣ ಕೇಳಿದ್ರೆ ಮೂಕವಿಸ್ಮಿತರಾಗೋದು ಪಕ್ಕಾ!!

Hindu neighbor gifts plot of land

Hindu neighbour gifts land to Muslim journalist

ಬದುಕು ಎಷ್ಟು ವಿಚಿತ್ರ ಅಂದ್ರೆ, ಕೆಲವೊಂದು ಬಾರಿ ಕನಸೇ ಜೀವನ ಆಗಬೇಕಾಗಿದೆ. ಒಂದು ಕಡೆ ಆರೋಗ್ಯವಂತರಾಗಿ, ಶಕ್ತಿಶಾಲಿಗಳಿಗೆ ತಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ಅಸಾಧ್ಯವಾದರೆ, ಇನ್ನೊಂದು ಕಡೆ ತಮ್ಮ ಕನಸನ್ನ ಇನ್ನೊಬ್ಬರ ಮೇಲಿನ ನಂಬಿಕೆ ಮೂಲಕ ಈಡೇರಿಸಿಕೊಳ್ಳುವ ಮಹದಾಸೆ. ಇಷ್ಟೆಲ್ಲ ಯಾಕೆ ಹೇಳುತ್ತಿದ್ದೇವೆ ಅಂದ್ರೆ, ನಾವೀಗ ಹೇಳಲು ಹೊರಟಿರುವುದು ಕೂಡ ಅಂತದ್ದೇ ನಿಜ ಸಂಗತಿ.

ಹೌದು. ಆಕೆ ಹಾಸಿಗೆ ಹಿಡಿದ ಸುಂದರಿ. ಆದ್ರೆ, ಆಕೆಯ ಕನಸು ಮಾತ್ರ ತಂದೆಯ ಜವಬ್ದಾರಿ. ನೂರಾರು ತೊಂದರೆಗಳ ನಡುವೆ ತನ್ನ ಮಗಳಿಗೆ ಸುಂದರವಾದ ವರನೊಂದಿಗೆ ಮದುವೆ ಮಾಡಿಸಿಕೊಡುವ ದೊಡ್ಡ ಆಸೆ. ನನ್ನನ್ಯಾರು ಮದುವೆ ಆಗುತ್ತಾರೆ ಎನ್ನುವ ಆಕೆಯ ಮನಸ್ಥಿತಿ ಅಳಿಸಿ ಹಾಕಿ, ಆಕೆಯ ಆಸೆಯಂತೆ ಅವಳಿಗೆ ಮದುವೆ ಮಾಡಿಸುವ ಜವಾಬ್ದಾರಿ. ಹೀಗಾಗಿ, ತನ್ನ ಮಗಳಿಗೆ ಕೃಷ್ಣನೊಂದಿಗೆಯೇ ಮದುವೆ ಮಾಡಿಸಿದ್ದಾರೆ.

ಇಂತಹದೊಂದು ಸುಂದರವಾದ ಮದುವೆ ನಡೆದಿದ್ದು, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ಮಾರಣಾಂತಿಕ ಕಾಯಿಲೆಯಿಂದ 26 ವರ್ಷದ ಯುವತಿ ಸೋನಾಲ್ ಹಾಸಿಗೆ ಹಿಡಿಡಿದ್ದಾಳೆ. ಈಕೆ ಜಿಲ್ಲೆಯ ಮೋಹನ ಗ್ರಾಮದ ನಿವಾಸಿ ಶಿಶುಪಾಲ್ ರಾಥೋಡ್ ಪ್ರತಿಷ್ಠಿತ ಉದ್ಯಮಿಯ ಪುತ್ರಿ. ಈಕೆ ಗುಣಪಡಿಸಲಾಗದ ನರರೋಗ ಕಾಯಿಲೆಯಿಂದ ಬಳಲುತ್ತಿದ್ದು, ನಡೆಯಲೂ ಕೂಡ ಸಾಧ್ಯವಾಗಲ್ಲ. ಹೀಗಾಗಿ, 26 ವರ್ಷಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಳು.

ಆದರೆ, ಈಕೆಯ ಕನಸು, ಎಲ್ಲ ವಯಸ್ಸಿನ ಹುಡುಗಿಯರಂತೆ ತಾನೂ ಕೂಡ ಮದುವೆಯಾಗಬೇಕು ಎಂಬುದು. ಆದರೆ, ಎಷ್ಟೇ ಚಿಕಿತ್ಸೆ ಕೊಡಿಸಿದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಾಗಿಲ್ಲ. ಆದ್ದರಿಂದ ಮಗಳ ಆಸೆಯನ್ನು ಪೂರೈಸಲು ತಂದೆ ಶಿಶುಪಾಲ್ ರಾಥೋಡ್ ನಿರ್ಧರಿಸಿದ್ದಾರೆ. ಆದ್ರೆ, ಮದುವೆಯಾಗಲು ಯಾರೂ ತಯಾರಾಗದ ಹಿನ್ನೆಲೆಯಲ್ಲಿ, ಶ್ರೀಕೃಷ್ಣನೊಂದಿಗೆ ಮಗಳ ವಿವಾಹಕ್ಕೆ ನಿರ್ಧರಿಸಿದ್ದರು.

ಅಂತೆಯೇ, ನವೆಂಬರ್ 7ರಂದು ಶ್ರೀಕೃಷ್ಣನೊಂದಿಗೆ ಮಗಳ ವಿವಾಹ ನಿಶ್ಚಯಿಸಿ, ಆಮಂತ್ರಣ ಪತ್ರಿಕೆಯನ್ನೂ ಮಾಡಿಸಿದ್ದರು. ಮಗಳ ಮದುವೆಗೆ ಎಲ್ಲ ಸಂಬಂಧಿಕರಿಗೆ ಆಹ್ವಾನ ಕೊಟ್ಟು, ಸಂಪ್ರದಾಯದಂತೆ ಮಂಗಳ ವಾದ್ಯಗಳೊಂದಿಗೆ ನೆರವೇರಿಸಲಾಗಿದೆ. ಮದುವೆ ಆಮಂತ್ರಣ ನೀಡಿದಾಗ ನಮ್ಮ ಸಂಬಂಧಿಕರೇ ಆಶ್ಚರ್ಯಗೊಂಡಿದ್ದರು. ಯಾಕೆಂದ್ರೆ, ಹಾಸಿಗೆ ಹಿಡಿದ ಮಗಳನ್ನು ಮದುವೆಯಾಗಲು ಒಪ್ಪಿದವರು ಯಾರು ಎಂದು ಶಾಕ್ ಆಗಿದ್ದರು. ಹೀಗಾಗಿ ವರ ಯಾರೆಂದು ತಿಳಿಯಲು ಎಲ್ಲರೂ ಕಾತರರಾಗಿದ್ದರು ಎಂದು ತಂದೆ ಶಿಶುಪಾಲ್ ರಾಥೋಡ್ ತಿಳಿಸಿದ್ದಾರೆ.

ಅಷ್ಟಕ್ಕೂ ಆ ವರನೇ ಕೃಷ್ಣ. ಯುವತಿಗೆ ಕೃಷ್ಣನ ವೇಷ ಹಾಕಿಸಿ, ಆ ವೇಷಧಾರಿಯೊಂದಿಗೆ ಸೋನಾಲ್​ಗೆ ಪರಸ್ಪರ ಹಾರ ಬದಲಾವಣೆ ಮಾಡಿಸಲಾಗಿದೆ. ನಂತರ ಮದುವೆ ಮೆರವಣಿಗೆ ಸಹ ನಡೆಸಲಾಗಿದೆ.ಈ ಮದುವೆಯನ್ನು ತುಂಬಾ ವಿಶಿಷ್ಟವಾಗಿ ಮಾಡಲಾಗಿದೆ. ಮಗಳ ಮದುವೆ ಇಚ್ಛೆಯಂತೆ ತಂದೆ ಅದ್ದೂರಿಯಾಗಿ ನಡೆಸಿ, ಮಗಳ ಮೊಗದಲ್ಲಿ ಖುಷಿ ಕಂಡಿದ್ದಾರೆ…