Home Interesting Miracle Child: ತನ್ನ ಕರುಳಬಳ್ಳಿಯನ್ನು 20 ಅಡಿ ಆಳದ ಬಾವಿಗೆ ಎಸೆದ ತಾಯಿ, ಸರ್ಪಗಾವಲಿನಲ್ಲಿ ಬದುಕುಳಿದ...

Miracle Child: ತನ್ನ ಕರುಳಬಳ್ಳಿಯನ್ನು 20 ಅಡಿ ಆಳದ ಬಾವಿಗೆ ಎಸೆದ ತಾಯಿ, ಸರ್ಪಗಾವಲಿನಲ್ಲಿ ಬದುಕುಳಿದ ಪವಾಡ ಮಗು!!!

Miracle Child

Hindu neighbor gifts plot of land

Hindu neighbour gifts land to Muslim journalist

Miracle child :ಈ ಜಗವೇ ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ಕೆಲವೊಂದು ವಿಸ್ಮಯಗಳು ನಮ್ಮನ್ನು ಅಚ್ಚರಿಗೊಳಿಸಿ ಮೂಕ ವಿಸ್ಮಿತರನ್ನಾಗಿಸುತ್ತದೆ. ಅದರಲ್ಲಿಯೂ ಕೆಲ ಘಟನೆಗಳ ಬಗ್ಗೆ ಕೇಳಿದಾಗ ಹೀಗೂ ಉಂಟೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದರೂ ಅಚ್ಚರಿಯಿಲ್ಲ. ಇದೆ ರೀತಿ ತರ್ಕಕ್ಕೆ ನಿಲುಕದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.ಹೌದು!! ಉತ್ತರ ಪ್ರದೇಶದ ಗ್ರಾಮವೊಂದರ ನೀರಿಲ್ಲದ ಬಾವಿಗೆ 20 ಅಡಿ ಎತ್ತರದಿಂದ ಮಗುವನ್ನು ಎಸೆದಿದ್ದರು ಕೂಡ ಪುಟ್ಟ ಕಂದಮ್ಮ ಅದೃಷ್ಟವಶಾತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಪುಟ್ಟ ಗ್ರಾಮವಾದ ಬರೇಲಿಯಲ್ಲಿ ಪವಾಡ ಸದೃಶ ಘಟನೆಯೊಂದು ನಡೆದಿದೆ. ಇಲ್ಲಿನ ನಿವಾಸಿಗಳಾದ ವರ್ಷ ವಯಸ್ಸಿನ ಪ್ರೇಮ ರಾಜ್ ಹಾಗೂ ವರ್ಷ ವಯಸ್ಸಿನ ಅವರಿಗೆ ತಮ್ಮ ಕಣ್ಣನ್ನು ತಾವೇ ನಂಬಲು ಸಾಧ್ಯವಾಗದಂಥಾ ಅಚ್ಚರಿಯೊಂದು ಘಟಿಸಿದೆ. ಉತ್ತರ ಪ್ರದೇಶ ರಾಜ್ಯದ ಬುದೌನ್ ಜಿಲ್ಲೆಯ ಬಸೌನಿ ಗ್ರಾಮದ ಗ್ರಾಮ ಕೃಷಿಕ (Farmers) ದಂಪತಿಗಳಾದ ಪ್ರೇಮ ರಾಜ್(50) ಅವರ ಪತ್ನಿ ಸೌಮ್ವತಿ ದೇವಿ(48 )ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಗು( baby)ಅಳುವ (cry)ಸದ್ದು ಕೇಳಿ ಬಂದಿದೆ. ಅಳುವ ಮಗುವಿನ ದ್ವನಿ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಹುಡುಕುತ್ತಾ ಹೊರಟಾಗ ತಮ್ಮದೇ ಜಮೀನಿನ ನೀರಿಲ್ಲದ ಹಾಳು ಬಾವಿಯಲ್ಲಿ ಮಗುವಿನ ದ್ವನಿ ಕೇಳಿ ಬಂದಿದೆ ಎನ್ನಲಾಗಿದೆ.

ಪಾಳು ಬಿದ್ದಿರುವ ಬಾವಿ ಎಂದ ಮೇಲೆ ಅದು ಹೇಗಿದ್ದಿರಬಹುದು ಎಂಬ ಅಂದಾಜು ನಿಮಗೂ ಇರುತ್ತೆ. ಬಾವಿಯ ತುಂಬಾ ಮುಳ್ಳು ಗಿಡ ಗಂಟಿಗಳು ಸೇರಿಕೊಂಡು20 ಅಡಿ ಆಳದ ಈ ಬಾವಿಗೆ ಇಳಿಯುವುದು ಸುಲಭದ ಮಾತಲ್ಲ. ಆದರೂ ಮಗುವನ್ನು ಕಾಪಾಡುವ (Save)ನಿಟ್ಟಿನಲ್ಲಿ ಪ್ರೇಮ ರಾಜ್ ಗ್ರಾಮಸ್ಥರ ಸಹಾಯ ಪಡೆದು ಹಗ್ಗವನ್ನು ಕಟ್ಟಿಕೊಂಡು ಬಾವಿಯೊಳಗೆ ಇಳಿದಿದ್ದು, ಅಲ್ಲಿನ ದೃಶ್ಯ ಕಂಡು ನಿಜಕ್ಕೂ ಬೆರಗಾಗಿದ್ದರು. ಅಷ್ಟಕ್ಕೂ ಅಂತದ್ದು ಏನಿತ್ತು ? ಅಂತೀರಾ!!

ಸಿನಿಮೀಯ ಮಾದರಿಯಲ್ಲಿ ಅಳುತ್ತಿದ್ದ ಮಗುವಿನ ಸಮೀಪದಲ್ಲೇ ಸರ್ಪವೊಂದು ಹೆಡೆ ಎತ್ತಿಕೊಂಡಿತ್ತು. ಪ್ರೇಮ ರಾಜ್ ಅವರು ಬಾವಿಯ ತಳಕ್ಕೆ ಇಳಿದ ನಂತರ ನಾಗರಾಜ ಅಲ್ಲೇ ಇದ್ದ ಬಿಲದ ಒಳಗೆ ನುಸುಳಿ ನಾಪತ್ತೆಯಾಗಿದ್ದಾನೆ. ಅಷ್ಟೆ ಅಲ್ಲದೇ, ಹಾವಿನಿಂದಲೆ ಮಗುವಿನ ಜೀವ(Miracle child) ಕೂಡ ಉಳಿದಿದೆಯಂತೆ. ಇದು ಯಾವುದೋ ಸಿನಿಮಾ ಕಥೆಯಲ್ಲ ಸ್ವಾಮಿ!! ನೈಜ ಘಟನೆ. ಪ್ರೇಮ ರಾಜ್ ಬಾವಿಯಿಂದ ಮಗುವನ್ನು ಎತ್ತಿಕೊಂಡು ಬಂದ ತಕ್ಷಣ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರು ಮಗುವನ್ನು ತಮ್ಮ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಮೂಲಕ ಕರೆದೊಯ್ದಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆನಂತರ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಪೊಲೀಸ್ ಅಧಿಕಾರಿ ಸಿದ್ಧಾಂತ್ ಶರ್ಮಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಮಗುವಿಗೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಈ ನಡುವೆ ಮಗುವಿನ ತಲೆಯಲ್ಲಿ ಊತ ಕಂಡು ಬಂದಿದ್ದು, ಹೀಗಾಗಿ, ಮಗುವಿನ ತಲೆಯ ಬಳಿ ಸಣ್ಣ ಒಳ ಗಾಯವಾಗಿರುವ ಸಂಭವವಿದೆ. ಇದರಿಂದ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಬುದೌನ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗುತ್ತದೆ.

ಆಗ ತಾನೇ ಜನಿಸಿದ ಪುಟ್ಟ ಹಸುಳೆಯನ್ನು ಪಾಳು ಬಾವಿಗೆ ಎಸೆದು ಹೋಗಿದ್ದು, ರಾತ್ರಿಯಿಡೀ ಸರ್ಪವು ಮಗುವಿನ ಬಳಿ ಇದ್ದುಸರ್ಪವು(snake) ಮಗುವಿಗೆ ಎದುರಾಗಬಹುದಾದ ಅಪಾಯದಿಂದ ಪಾರು (Baby Saved By Snake)ಮಾಡಿದ್ದು, ಅದರಲ್ಲಿಯೂ 20 ಅಡಿ ಮೇಲಿನಿಂದ ಎಸೆದರೂ ಮಗುವಿಗೆ ಅಪಾಯವಾಗಿಲ್ಲ ಎಂದರೆ ಅಚ್ಚರಿಯೇ ಸರಿ. ಸರ್ಪವೆ ಮಗುವಿನ ಜೀವ ಉಳಿಸಿರಬೇಕು ಎಂಬುದು ಊರಿನವರ ಊಹೆಯಾಗಿದೆ. ಸದ್ಯ ಮಗುವನ್ನು ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಇರಿಸಲಾಗಿದ್ದು, ಮಗು ಚೇತರಿಸಿ ಕೊಂಡ ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಮಗುವನ್ನು ಪೊಲೀಸರಿಗೆ ಹಾಗೂ ಮಕ್ಕಳ ರಕ್ಷಣಾ ತಂಡದ ವಶಕ್ಕೆ ನೀಡಲಿದ್ದಾರೆ. ಈ ಪ್ರಕರಣದ ಕುರಿತಂತೆ ಎಫ್‌ಐಆರ್ ದಾಖಲು ಮಾಡಿದ್ದು, ಮಗುವಿನ ಪೋಷಕರನ್ನು ಪತ್ತೆ ಹಚ್ಚಲು ಮಕ್ಕಳ ರಕ್ಷಣಾ ತಂಡ ನಿರತವಾಗಿದೆ ಎಂದು ತಿಳಿದು ಬಂದಿದೆ.