Home Interesting Baby girl born after 138 years : ಬರೀ ಗಂಡು ಮಕ್ಕಳೇ ಹುಟ್ಟುತ್ತಿದ್ದ ಈ...

Baby girl born after 138 years : ಬರೀ ಗಂಡು ಮಕ್ಕಳೇ ಹುಟ್ಟುತ್ತಿದ್ದ ಈ ಕುಟುಂಬದಲ್ಲಿ 138 ವರ್ಷಗಳ ಬಳಿಕ ಹೆಣ್ಣುಮಗು ಜನನ ! ಅಮೆರಿಕ ದಂಪತಿ ಸಂಭ್ರಮ

Baby-girl born after 138 years

Hindu neighbor gifts plot of land

Hindu neighbour gifts land to Muslim journalist

Baby-girl born after 138 years : ದಂಪತಿಗಳು ಆರತಿಗೊಂದು ಹೆಣ್ಣು, ಕೀರುತಿಗೊಂದು ಗಂಡು ಮಗುಬೇಕೆಂದು ಬಯಸುತ್ತಾರೆ. ಕೆಲವರು ಹೆಣ್ಣು ಮಗು ಹುಟ್ಟಿತೆಂದರೆ ಬೇಸರಪಟ್ಟುಕೊಳ್ಳುವವರಿದ್ದಾರೆ, ಆ ಕಾರಣಕ್ಕಾಗಿ ಕುಪಿತರಾಗಿ ಕ್ರೌರ್ಯ ಮೆರೆಯುವವರೂ ಇದ್ದಾರೆ. ಮನೆಯಲ್ಲೊಂದು ಹೆಣ್ಣು ಮಗು ಜನಿಸಿದರೆ ಸಂಭ್ರಮಿಸುವವರೂ ಅಲ್ಲಲ್ಲಿ ಕಾಣಸಿಗುತ್ತಾರೆ. ಆದರೆ ಈ ಕುಟುಂಬವೊಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಸಂಭ್ರಮಿಸುತ್ತಿರುವ ಪರಿ ಅಷ್ಟಿಷ್ಟಲ್ಲ. ಏಕೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

ಹೌದು, ಅಮೆರಿಕದ(America) ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ ಹೆಣ್ಣು ಮಗು ಜನಿಸಿದದಕ್ಕೆ ಸಂಭ್ರಮಿಸೋದನ್ನು ಕಂಡರೆ ನೀವೇ ಅಚ್ಚರಿ ಪಡುತ್ತೀರಿ. ಯಾಕೆಂದರೆ ಈ ಕುಟುಂಬದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 138 ವರ್ಷಗಳಿಂದ (Baby-girl born after 138 years )  ಹೆಣ್ಣು ಮಗುವೇ ಜನಿಸಿರಲಿಲ್ಲ. ತಲೆಮಾರುಗಳು ಕಳೆದರೂ ಹುಟ್ಟುವ ಪ್ರತಿ ಮಗುವೂ ಗಂಡೇ ಆಗಿರುತ್ತಿತ್ತು. ಇದೀಗ ಹೆಣ್ಣು ಮುಗುವಿನ ಜನನ ಈ ಕುಟುಂಬಕ್ಕೆ ಅತೀವ ಸಂತೋಷ ತಂದಿದೆ.

ಮಗುವಿನ ತಂದೆ ಆಂಡ್ರೂ ಕ್ಲಾರ್ಕ್ ಅವರ ಪೂರ್ವಜರ ಕುಟುಂಬದಲ್ಲಿ ಕೊನೆಯ ಬಾರಿ ಹೆಣ್ಣು ಮಗು ಜನಿಸಿದ್ದು 1885ರಲ್ಲಿ ಎಂದರೆ ನಿಜಕ್ಕೂ ಅಚ್ಚರಿಯಾಗಲೇಬೇಕು. ಆಂಡ್ರೂ ಮತ್ತು ಕೆರೋಲಿನ್ ದಂಪತಿಗೆ ಮಾರ್ಚ್ 17ರಂದು ಆಡ್ರೆ ಎಂಬ ಮಗಳು ಜನಿಸಿದ್ದಾಳೆ. 138 ವರ್ಷಗಳ ಬಳಿಕ ಈ ಮನೆಯಲ್ಲಿ ಹೆಣ್ಣುಮಗು ಹುಟ್ಟಿದ್ದು ಅಪಾರ ಸಂತಸಕ್ಕೆ ಕಾರಣವಾಗಿದೆ.

ಅಂದಹಾಗೆ 2022ರ ಸೆಪ್ಟೆಂಬರ್‌ನಲ್ಲಿ ಮಿಚಿಗನ್‌ನ ಕುಟುಂಬವು ಲಿಂಗ ಬಹಿರಂಗ ಪಾರ್ಟಿ ಆಯೋಜಿಸಿತ್ತು. ಭಾರತದಲ್ಲಿ ಮಗು ಹುಟ್ಟುವವರೆಗೂ ಅದರ ಲಿಂಗ ಬಹಿರಂಗ ಮಾಡಬಾರದು ಎಂಬ ಕಾನೂನು ಇದೆ. ಆದರೆ ಅನೇಕ ದೇಶಗಳಲ್ಲಿ ಮೊದಲೇ ಇದನ್ನು ಪೋಷಕರಿಗೆ ತಿಳಿಸುತ್ತಾರೆ. ಅದನ್ನು ಸಂಭ್ರಮಿಸಲು ಸಂತೋಷ ಕೂಟ ಸಹ ನಡೆಸುತ್ತಾರೆ. ತಮಗೆ ಜನಿಸುತ್ತಿರುವುದು ಹೆಣ್ಣು ಮಗು ಎಂದು ಕುಟುಂಬ ಘೋಷಿಸಿದಾಗ ಅಲ್ಲಿ ನೆರೆದಿದ್ದವರಿಗೆ ಅಚ್ಚರಿಯೂ ಆಗಿತ್ತು.

ತನ್ನ ಕುಟುಂಬದ ಸೊಸೆಯು ಗರ್ಭಿಣಿಯಾದ ಸುದ್ದಿ ಕೇಳುತ್ತಲೇ, ಬಹುಶಃ ಇದೂ ಗಂಡು ಮಗುವೇ ಆಗಿರಲಿದೆ ಎಂದು ಭಾವಿಸಿದ್ದರು ಕ್ಲಾಸ್ ಕುಟುಂಬಸ್ಥರು. ಆದರೆ ಅವರ ಊಹೆ ಬೇರೆಯಾಗಿದೆ. ಸದ್ಯ ಈ ಹೆಣ್ಣು ಮಗುವಿನ ಜನನದಿಂದ ಇಡೀ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಈ ಹೆಣ್ಣು ಮಗುವಿಗೆ ಆಡ್ರೇ ಎಂದು ಹೆಸರಿಡಲಾಗಿದೆ. ತನಗೆ ಮಗಳು ಹುಟ್ಟಿದ್ದಾಳೆ ಎಂದು ಎಲ್ಲರೂ ಹೇಳಿದಾಗ ಖುದ್ದು ತಾಯಿ ಕೆರೋಲಿನ್ ಕ್ಲಾರ್ಕ್ ಅವರೇ ಮೊದಲಿಗೆ ನಂಬಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಹೆಣ್ಣು ಮಗುವಿನ ತಾಯಿ ಕೆರೋಲಿನ್ ‘ನಾನು ಹತ್ತು ವರ್ಷಗಳ ಹಿಂದೆ ಕುಟುಂಬದ ಈ ಇತಿಹಾಸದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಾಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೇಲಿಂದ ಮೇಲೆ ಗಂಡು ಮಕ್ಕಳೇ ಜನಿಸುತ್ತಾ ಸಾಗಿದ ಮೇಲೆ ನಂಬಲೇ ಬೇಕಾಯಿತು. ನಮಗೆ ಜನವರಿ 2021ರಲ್ಲಿ ಗರ್ಭಪಾತವಾಗಿತ್ತು. ಇದಾದ 15 ತಿಂಗಳ ಬಳಿಕ ನಾನು ಆಡ್ರೇಗೆ ತಾಯಿಯಾದೆ. ಅವಳು ನಮ್ಮೆಲ್ಲಾ ಕಾಯುವಿಕೆಗೊಂದು ಸಾರ್ಥಕತೆ ತಂದಿದ್ದಾಳೆ. ಅವಳು ನಮ್ಮ ಅದೃಷ್ಟ ದೇವತೆ. ಅವಳ ಅಣ್ಣ ಕ್ಯಾಮರೂನ್ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದಾನೆ’ ಎಂದಿದ್ದಾರೆ.

 

ಇದನ್ನು ಓದಿ : Innova Car Booking Information : ಇನ್ನೋವಾ ಬುಕಿಂಗ್ ಮಾಡಲು ಪ್ಲಾನ್ ಇದ್ದಲ್ಲಿ ಈ ಮಾಹಿತಿ ತಿಳಿಯಿರಿ!!