Home Breaking Entertainment News Kannada Anushka Shetty : ಅನುಷ್ಕಾ ಮನಸ್ಸು ಈ ಸ್ಟಾರ್‌ ಕ್ರಿಕೆಟಿಗನ ಮೇಲೆ, ಅರೇ ಇವರೇನಾ ಅವರು?

Anushka Shetty : ಅನುಷ್ಕಾ ಮನಸ್ಸು ಈ ಸ್ಟಾರ್‌ ಕ್ರಿಕೆಟಿಗನ ಮೇಲೆ, ಅರೇ ಇವರೇನಾ ಅವರು?

Hindu neighbor gifts plot of land

Hindu neighbour gifts land to Muslim journalist

ತೆಲುಗು ಚಿತ್ರರಂಗದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ (Actress Anushka Shetty) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ತಮ್ಮ ಕ್ರಶ್ ಯಾರು ಎಂಬುದನ್ನು ತಿಳಿಸಿ ಮತ್ತೊಮ್ಮೆ ಸುದ್ಧಿಯಾಗಿದ್ದಾರೆ. ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ ‘ಅರುಂಧತಿ’ ಸಿನಿಮಾ ಮೂಲಕ ಮನೆಮಾತಾಗಿ, ಬಾಹುಬಲಿಯ ದೇವಸೇನಳಾಗಿ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದರು.

ಹಾಗೇ ಈ ಹಿಂದೆಯೇ ಅನುಷ್ಕಾ ತಮ್ಮ ಮದುವೆ ವಿಚಾರವಾಗಿ ಸಖತ್ ವೈರಲ್ ಆಗಿದ್ದರು. ಕಳೆದ ಕೆಲದಿನಗಳ ಹಿಂದೆ ನಟ ಪ್ರಭಾಸ್‌ (Actor Prabhas) ಜೊತೆ ಅನುಷ್ಕಾ ಮದುವೆ ಆಗುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಅಭಿಮಾನಿಗಳು ಈ ಜೋಡಿ ಮದುವೆ ಆಗುತ್ತಾರೆ ಎಂದು ಭಾರೀ ಖುಷಿ ಪಟ್ಟಿದ್ದೇ ಪಟ್ಟಿದ್ದು. ಆದ್ರೆ ಇವರಿಬ್ಬರು ಜಸ್ಟ್‌ ಫ್ರೇಂಡ್ಸ್‌ ಅಂತ ಹೇಳಿಕೊಂಡಿದ್ದಾರೆ. ಇದೀಗ ಅನುಷ್ಕಾ ತಮಗೆ ಸ್ಟಾರ್‌ ಕ್ರಿಕೆಟಿಗರೊಬ್ಬರ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಚಾರ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಅನುಷ್ಕಾ ಶೆಟ್ಟಿ ಕ್ರಶ್ ಯಾರು ಅಂತ ಗೊತ್ತಾ? ನಿಮಗೂ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕ್ರಶ್ ಆಗಿರಬಹುದು. ಇವರು ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಆಗಿದ್ದರು. ಅವರೇ ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ (Rahul Dravid). ಹೌದು, ಅನುಷ್ಕಾ ಶೆಟ್ಟಿಗೆ ರಾಹುಲ್ ದ್ರಾವಿಡ್ ಮೇಲೆ ಕ್ರಶ್ ಆಗಿತ್ತಂತೆ. ಹಾಗಂತ ಸಂದರ್ಶನವೊಂದರಲ್ಲಿ ಅಭಿಮಾನಿಯೊಬ್ಬರು ಅನುಷ್ಕಾಗೆ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಅಂತ ಪ್ರಶ್ನೆ ಕೇಳಿದಾಗ, ರಾಹುಲ್ ದ್ರಾವಿಡ್ ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಅನುಷ್ಕಾ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ನನ್ನ ನೆಚ್ಚಿನ ಕ್ರಿಕೆಟಿಗ. ನನಗೆ ಆತನ ಮೇಲೆ ಕ್ರಶ್ ಆಗಿತ್ತು. ರಾಹುಲ್ ಅವರ ಅಮೋಘ ಬ್ಯಾಟಿಂಗ್ ಮತ್ತು ಅದ್ಭುತ ವಿಕೆಟ್ ಕೀಪಿಂಗ್‌ ನನಗೆ ತುಂಬಾ ಇಷ್ಟವಾಗಿತ್ತು. ಅದ್ಭುತವಾದ ಆಟಗಾರ ಎಂದು ಅನುಷ್ಕಾ ಶೆಟ್ಟಿ ಹೇಳಿದರು. ಹೌದು, ರಾಹುಲ್ ದ್ರಾವಿಡ್ ಉತ್ತಮ ಆಟಗಾರ. ಇದಕ್ಕೆ ಫ್ಯಾನ್ಸ್ ಕೂಡ ತಲೆ ಆಡಿಸಿದ್ದಾರೆ. ಆದರೆ ದ್ರಾವಿಡ್‌ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ ಮದುವೆ ಯಾವಾಗ ಆಗ್ತಾರೆ? ಅದರಲ್ಲೂ ಹುಡುಗ ಯಾರಿರಬಹುದು? ಎಂಬ ಕುತೂಹಲ, ಹಾಗೇ ಸೋಷಿಯಲ್ಸ್ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ನೀಡುವ ಅಪ್ಡೇಟ್ ಗಾಗಿ ಕಾದು ಕುಳಿತಿದ್ದಾರೆ.