Home Interesting Mur’muthar ಮುರ್ಮ ಮದರ್ | Amul – ಬೆಣ್ಣೆಯಲ್ಲಿ ಟಾಪ್ ಪೊಸಿಷನ್ ಎಂಬ Amul India...

Mur’muthar ಮುರ್ಮ ಮದರ್ | Amul – ಬೆಣ್ಣೆಯಲ್ಲಿ ಟಾಪ್ ಪೊಸಿಷನ್ ಎಂಬ Amul India ಕಂಪನಿಯ ಆಕರ್ಷಕ ಜಾಹೀರಾತು !

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರಪತಿ ದೌಪದಿ ಮುರ್ಮು ಅವರ ಗೆಲುವನ್ನು ಇಡೀ ದೇಶದ ಜನರು ತಮ್ಮದೇ ಗೆಲುವು ಅನ್ನುವ ರೀತಿಯಲ್ಲಿ ಆಚರಿಸಿದೆ. ದೇಶದ ಮೂಲೆ ಮೂಲೆಗಳಿಂದ  ಅಭಿನಂದನಾ ಸಂದೇಶಗಳು ಹರಿದುಬರುತ್ತಿದೆ‌. ಹಾಗೆನೇ  ಅಮುಲ್” ಕೂಡ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಸ್ವಾಗತ ನೀಡಲು ವಿಶೇಷ ಡೂಡಲ್  ಸಮರ್ಪಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ, ಅಮುಲ್ ಇಂಡಿಯಾ ಕಾರ್ಟೂನ್ ಅನ್ನು ಈ ಕೆಳಗಿನ
ಶೀರ್ಷಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದೆ,” ರಾಷ್ಟ್ರಪತಿ ಮೇಡಂ ಗೆ ಸ್ವಾಗತ” “ಮುರ್ಮು ಮದರ್ ಇಂಡಿಯಾ” ಮತ್ತು “ಬೆಣ್ಣೆಯಲ್ಲಿ ಅಗ್ರಸ್ಥಾನ” ಎಂಬ ಶೀರ್ಷಿಕೆಯೊಂದಿಗೆ ಮುರ್ಮು ಕೈಗಳನ್ನು ಮಡಚಿ ರಾಷ್ಟ್ರಪತಿ ಭವನದ ಮುಂದೆ ನಿಂತಿರುವುದನ್ನು ಡೂಡಲ್ ತೋರಿಸಿದೆ.

ಈ ಪೋಸ್ಟ್ 4,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು ನಮ್ಮ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮಹಿಳೆಗೆ ಈ ಮೂಲಕ ಗೌರವವನ್ನು ನೀಡಿದ್ದಕ್ಕಾಗಿ ನೆಟಿಜನ್‌ಗಳು ಅಮುಲ್ ನವರ ಇನ್ಸ್ಟಾ ಗ್ರಾಮ್ ಪೋಸ್ಟ್ ಅನ್ನು ಅಭಿನಂದಿಸಿದ್ದಾರೆ.

ಜುಲೈ 21 ರಂದು ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಹುಮತದೊಂದಿಗೆ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅಷ್ಟು ಮಾತ್ರವಲ್ಲದೇ, ಮೊದಲ ಬುಡಕಟ್ಟು ಜನಾಂಗದ ಆದಿವಾಸಿಯೊಬ್ಬರು ರಾಷ್ಟ್ರಪತಿ ಸ್ಥಾನ ಪಡೆದ ಹೆಗ್ಗಳಿಕೆಗೆ ಭಾಜನರಾದರು.

ಇಂದು, ಸೋಮವಾರ (ಜುಲೈ 25) ದ್ರೌಪದಿ ಮುರ್ಮ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಮುರ್ಮು ಅವರು ಪ್ರತಿಭಾ ಪಾಟೀಲ್ (2007-2012) ನಂತರ ಮೊದಲ ಬುಡಕಟ್ಟು ಎರಡನೇ ಮಹಿಳೆ ಮತ್ತು ದೇಶದ ಅತ್ಯುನ್ನತ ಹುದ್ದೆಗೆ ಏರಿದ ಮಹಿಳೆಯಾಗಿದ್ದಾರೆ.