Home Interesting ದೇವರ ಹರಕೆ ತೀರಿಸಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡ ಭಕ್ತ! ಬಳಿಕ ಆತ ಮಾಡಿದ್ದೇನು ಗೊತ್ತಾ?

ದೇವರ ಹರಕೆ ತೀರಿಸಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡ ಭಕ್ತ! ಬಳಿಕ ಆತ ಮಾಡಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ತಮ್ಮ ಬೇಡಿಕೆಗಳು, ಆಸೆ ಆಕಾಂಕ್ಷೆಗಳು ಈಡೇರಲೆಂದು ಜನರು ದೇವರಿಗೆ ಹರಕಗಳನ್ನು, ದಾನಗಳನ್ನು ಕೊಡುವುದಾಗಿ ಹೇಳಿಕೊಂಡಿರುತ್ತಾರೆ. ಈ ರೀತಿಯಲ್ಲಿ ಹರಕೆ ಹೊತ್ತ ಭಕ್ತರು ಸಾಮಾನ್ಯವಾಗಿ ದೇವರಿಗೆ ಹಣ, ಒಡವೆ ವಸ್ತ್ರಗಳನ್ನೋ ಅಥವಾ ಆಹಾರ ಧಾನ್ಯಗಳನ್ನೋ ಕೊಡುವುದನ್ನು ನೋಡಿದ್ದೇವೆ. ಆದರೆ ಬಳ್ಳಾರಿ ಜಿಲ್ಲೆಯ ಈ ಒಂದು ಹಳ್ಳಿಯಲ್ಲಿ ಭೂಪನೊಬ್ಬ ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡು ದಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ದಾನ ಕೊಟ್ಟಿದ್ದಾನೆ. ತನ್ನ ಗ್ರಾಮದ ಸಮೀಪದ ಗುಡ್ಡದಲ್ಲಿರುವ ದಂಡೆ ಮಹಂಕಳಿ ಗುಡಿ ಹತ್ತಿರ ಹೋಗಿ ‘ಶಂಕರಪ್ಪ ತಾತ’ನಿಗಾಗಿ ತನ್ನ ನಾಲಿಗೆಯನ್ನು ಚಾಕುವಿನಿಂದ ಕತ್ತರಿಸಿ ಕೊಟ್ಟಿದ್ದಾನೆ. ಬಳಿಕ ತನ್ನ ತುಂಡಾದ ನಾಲಿಗೆ ಸಮೇತ ವಿಮ್ಸ್ ಆಸ್ಪತ್ರೆಗೆ ಧಾವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ವೀರೇಶ್‌ ಕುಡಿದ ಅಮಲಿನಲ್ಲಿ ನಾಲಿಗೆ ಕತ್ತರಿಸಿಕೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಘಟನೆಗೆ ಮಾನಸಿಕ ಖಿನ್ನತೆಯೇ ಕಾರಣ ಎನ್ನಲಾಗಿದೆ.

ಬಲಕುಂದಿ ಗ್ರಾಮದ ಗುಡ್ಡದ ಮೇಲೆ ಇರುವ ಶಂಕರಪ್ಪ ದೇವಸ್ಥಾನದಲ್ಲಿ ಭಕ್ತ ವಿರೇಶ್​ ಪ್ರತಿ ದಿನ ಪೂಜೆ ಮಾಡುತ್ತಿದ್ದ. ದೇವರನ್ನು ಒಲಿಸಿಕೊಳ್ಳಲು ನಾಲಗೆ ಕತ್ತರಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಚಾಕುವಿನಿಂದ ನಾಲಗೆ ಕತ್ತರಿಸಿಕೊಂಡಿದ್ದ ಯುವಕ ವೀರೇಶ್​ ನಾಲಗೆ ಸಮೇತ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಭಕ್ತನ ಹುಚ್ಚಾಟಕ್ಕೆ ಗ್ರಾಮಸ್ಥರು ಕಿಡಿಕಾರಿದ್ದು, ದೇವರಲ್ಲಿ ನಂಬಿಕೆ ಇರ್ಬೇಕು ಈ ರೀತಿ ಹುಚ್ಚು ನಂಬಿಕೆ ಇರಬಾರದು ಎಂದು ಹೇಳುತ್ತಿದ್ದಾರೆ.

ಇದೇ ಕುರುಡ ಭಕ್ತ ಒಂದು ವರ್ಷದ ಹಿಂದೆ ಬೆರಳು ಕಟ್ ಮಾಡಿಕೊಂಡು ದೇವರ ತಲೆಯ ಮೇಲೆ ಇಟ್ಟಿದ್ದ. ಈವಾಗ ತಮ್ಮ ನಾಲಿಗೆ ಕಟ್​ ಮಾಡಿಕೊಳ್ಳುವ ಮೂಲಕ ಅಂಧ ಭಕ್ತಿ ಪ್ರದರ್ಶಿಸಿದ್ದಾನೆ. ಇಂದಿನ ಕಾಲದಲ್ಲೂ ಕೂಡ ಇಂತಹ ಹುಚ್ಚು ಭಕ್ತರು ಇದ್ದಾರಲ್ಲ ಎಂಬುದು ಆಶ್ಚರ್ಯವನ್ನುಂಟು ಮಾಡುತ್ತದೆ.