Home Interesting Shocking : ಎಮ್ಮೆಯ ಹೊಟ್ಟೆಯಲ್ಲಿ ಹಸು ಕರುವಿನ ಜನನ !!

Shocking : ಎಮ್ಮೆಯ ಹೊಟ್ಟೆಯಲ್ಲಿ ಹಸು ಕರುವಿನ ಜನನ !!

Hindu neighbor gifts plot of land

Hindu neighbour gifts land to Muslim journalist

Shocking : ಕೆಲವೊಮ್ಮೆ ನಾವು ಕಂಡು ಕೇಳರಿಯದ ಘಟನೆಗಳು ನಡೆಯುತ್ತದೆ. ಇಂಥದ್ದೇ ಒಂದು ಆಶ್ಚಯ್ರಕರ ಘಟನೆ ನಡೆದಿದ್ದು, ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಜನಿಸಿ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

ಎಮ್ಮೆಯ ಮಾಲೀಕರು ಇದನ್ನು ಕಂಡು ಸಖತ್‌ ಶಾಕ್‌ ಆಗಿದ್ದಾರೆ. ಇತ್ತ ತಾಯಿ ಮತ್ತು ಕರುವನ್ನು ನೋಡಲು ಇವರ ಮನೆಮುಂದೆ ಜನಜಂಗುಳಿಯೇ ಸೇರಿದೆಯಂತೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದೆಲ್ಲಿ ಎಂಬ ಬಗ್ಗೆ ಮಾಹಿತಿ ಸ್ಪಷ್ಟವಾಗಿ ದೊರೆತಿಲ್ಲ. ಎಮ್ಮೆಗೆ ಎತ್ತಿನ ವೀರ್ಯವನ್ನು ಅಳವಡಿಸಿದ ಪರಿಣಾಮವಾಗಿ ಗೋವಿನ ಕರು ಜನನವಾಗಿದೆ ಎಂದು ಗ್ರಾಮಸ್ಥರು ಊಹಿಸಿದ್ದಾರೆ.

ಇನ್ನು ಈ ಕರು ಎಮ್ಮೆ ಗುಣಲಕ್ಷಣಗಳನ್ನು ಹೊಂದಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ ಎನ್ನಲಾಗಿದೆ. ಎಮ್ಮೆಗೆ ಎತ್ತಿನ ವೀರ್ಯವನ್ನು ನೀಡಿದ ಪರಿಣಾಮವಾಗಿ ಕರು ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಊಹಿಸಿದ್ದಾರೆ. ಆದರೆ, ಪಶುವೈದ್ಯರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಎಮ್ಮೆಯ ದೇಹವು ಎತ್ತಿನ ವೀರ್ಯವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.