Home Interesting ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಮೈ ಜುಮ್ ಏನಿಸುವ ಚಿತ್ರ|ಕಪ್ಪಗಿನ ಮೂರು ನಾಗರ ಹಾವು ಒಂದೇ ಮರವನ್ನು...

ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಮೈ ಜುಮ್ ಏನಿಸುವ ಚಿತ್ರ|ಕಪ್ಪಗಿನ ಮೂರು ನಾಗರ ಹಾವು ಒಂದೇ ಮರವನ್ನು ಸುತ್ತಿಕೊಂಡು ನಮ್ಮನ್ನೇ ದಿಟ್ಟಿಸಿ ನೋಡುವಂತಹ ದೃಶ್ಯ!

Hindu neighbor gifts plot of land

Hindu neighbour gifts land to Muslim journalist

ಫೋಟೋಗ್ರಫಿ ಎಂಬುದು ಒಂದು ಕಲೆ.ಸೋಶಿಯಲ್ ಮೀಡಿಯಾ ಎಂಬ ಮಾಧ್ಯಮಗಳು ಬಂದ ಮೇಲೆ ಇಂತಹ ಪ್ರತಿಭೆಗಳಿಗೆ ಒಂದು ಅವಕಾಶ ಸಿಕ್ಕಿದೆ ಎಂದೇ ಹೇಳಬಹುದು. ಕೆಲವರಿಗೆ ಪರಿಸರದಲ್ಲಿನ ವಿಚಿತ್ರ-ವಿಶಿಷ್ಟತೆಗಳನ್ನು ಕ್ಲಿಕ್ಕಿಸುವಲ್ಲಿ ಆಸಕ್ತಿ ಹೆಚ್ಚಾಗಿ ಇರುತ್ತದೆ.ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳ ತುಂಟಾಟ ಮೋಜು ಮಸ್ತಿಯದ್ದು.ಹೀಗೆ ವೈರಲ್​ ಆಗುವ ಕೆಲವು ಭಯಾನಕ ವಿಡಿಯೊಗಳು ಜನರಿಗೆ ಹೆಚ್ಚು ಕುತೂಹಲ ಕೆರಳಿಸುತ್ತವೆ. ಅವುಗಳಲ್ಲಿ ಕೆಲವು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಇದೀಗ ವೈರಲ್ ಆದ ಒಂದು ಫೋಟೊ ನೆಟ್ಟಿಗರ ಗಮನ ಸೆಳೆದಿದೆ.

ಇದು ಮಹಾರಾಷ್ಟ್ರದ ಮೆಲ್ಘಾಟ್ ಕಾಡಿನಲ್ಲಿ ಸೆರೆಹಿಡಿಯಲಾದ ಚಿತ್ರವಾಗಿದ್ದು,ಮೂರು ದೈತ್ಯ ನಾಗರ ಹಾವು ಮರವನ್ನೇರಿ ಕೂತು ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಿರುವ ದೃಶ್ಯವನ್ನು ಕ್ಲಿಕ್ಕಿಸಲಾಗಿದೆ.ಇಂಡಿಯನ್ ವೈಲ್ಡ್ ಲೈಫ್ ಹೆಸರಿನ ಫೇಸ್ ಬುಕ್ ಗ್ರೂಪ್​ನಲ್ಲಿ ಫೋಟೊ ಹಂಚಿಕೊಳ್ಳಲಾಗಿದೆ. ‘ಮ್ಯಾಜಿಕಲ್ ಮೆಲ್ಘಾಟ್, ಹರಿಸಲ್ ಕಾಡಿನಲ್ಲಿ 3 ನಾಗರಹಾವುಗಳನ್ನು ಗುರುತಿಸಲಾಗಿದೆ! ‘ಎಂಬ ಶೀರ್ಷಿಕೆ ನೀಡುವ ಮೂಲಕ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಫುಲ್ ವೈರಲ್ ಆಗಿದೆ.

ಐಎಫ್ಎಸ್ ಅಧಿಕಾರಿ ಸುಶಾಂತಾ ನಂದಾ ಅವರು ಕೂಡಾ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ನೋಡಿದಂತೆ, ಕಪ್ಪು ಬಣ್ಣದ ಮೂರು ನಾಗರ ಹಾವುಗಳು ಮರವನ್ನು ಸುತ್ತಿಕೊಂಡು ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುವ ದೃಶ್ಯ ಒಮ್ಮೆಲೆ ಮೈ ಜುಮ್ ಅನಿಸುವಂತಿದೆ.