Home Health Health Tpis: ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ – ನೋವಿಲ್ಲದೆ ಉದುರಿ ಹೋಗುತ್ತೆ ‘ನರುಳ್ಳೆ’

Health Tpis: ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ – ನೋವಿಲ್ಲದೆ ಉದುರಿ ಹೋಗುತ್ತೆ ‘ನರುಳ್ಳೆ’

Hindu neighbor gifts plot of land

Hindu neighbour gifts land to Muslim journalist

 

Health Tpis : ಕೆಲವರಲ್ಲಿ ಸಣ್ಣ ಪ್ರಮಾಣದಲ್ಲಿ ಇನ್ನು ಕೆಲವರಲ್ಲಿ ದೊಡ್ಡ ದೊಡ್ಡ ನರುಳ್ಳೆಗಳು ಆಗಬಹುದು. ಇದು ಆರೋಗ್ಯದ ಮೇಲೆ ಯಾವುದೇ ರೀತಿ ಹಾನಿ ಉಂಟು ಮಾಡುತ್ತಿದ್ದರೂ ಕೂಡ ಸೌಂದರ್ಯ ಅಥವಾ ತ್ವಚೆಯ ಮೇಲಂತೂ ಪರಿಣಾಮ ಬೀರುತ್ತದೆ. ಹಾಗಿದ್ದರೆ ಇದನ್ನು ತೆಗೆಯುವುದು ಹೇಗೆ? ನೀವು ಯಾವ ಹಾಸ್ಪಿಟಲ್ಗೆ ಅಲೆಯಬೇಕಿಲ್ಲ. ಜಸ್ಟ್ ಈ ರೀತಿ ಟ್ರಿಕ್ಸ್ ಯೂಸ್ ಮಾಡಿ ಸಾಕು. ನೋವಿಲ್ಲದೆ ಅದು ಉದುರಿ ಹೋಗುತ್ತದೆ.

 

ಹೌದು, ನರಹುಲಿ ಅಥವಾ ನರುಳ್ಳೆ ತೆಗೆಯುವ ಪ್ರಕ್ರಿಯೆಯನ್ನು ಮನೆಯಲ್ಲಿ ನೈಸರ್ಗಿಕವಾಗಿ ಕಂಡುಬರುವ ಪದಾರ್ಥಗಳನ್ನು ಬಳಸಿ ಮಾಡಬಹುದು. ನಿಮ್ಮ ದೇಹದ ಮೇಲಿನ ನರುಳ್ಳೆಗಳು ಯಾವುದೇ ನೋವು ಇಲ್ಲದೆ ಉದುರಿಹೋಗುವುದನ್ನು ನೀವು ಗಮನಿಸಬಹುದು. ಈ ಸಲಹೆಯನ್ನು ಹೇಗೆ ಬಳಸುವುದು ಎಂದು ವಿವರವಾಗಿ ತಿಳಿಯಿರಿ.

 

ಪದಾರ್ಥಗಳು

1 ಟೀಚಮಚ ಅರಿಶಿನ

1 ಟೀಚಮಚ ಅಡಿಗೆ ಸೋಡಾ

1 ಟೀಚಮಚ ನಿಂಬೆ ರಸ

ತಯಾರಿಸುವ ವಿಧಾನ

 

ಇದನ್ನು ತಯಾರಿಸಲು, ಮೊದಲು ಒಂದು ಬಟ್ಟಲಿನಲ್ಲಿ ಅರಿಶಿನ, ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ನೀವು ಈ ಪೇಸ್ಟ್ ಅನ್ನು ನರುಳ್ಳೆ ಮೇಲೆ ಮೂರು ಬಾರಿ ಹಚ್ಚಿದರೆ, ಅವು ತಾನಾಗಿಯೇ ಉದುರಿಹೋಗುತ್ತವೆ.

 

ಅಲ್ಲದೆ ಇನ್ನೊಂದು ಹಂತ ನೋಡೋದಾದರೆ 2- 3 ಎಸಳು ಬೆಳ್ಳುಳ್ಳಿ ತೆಗೆದು ಸಿಪ್ಪೆ ಸುಲಿದು ಜಜ್ಜಿ, ಅದನ್ನು ನರಹುಲಿ ಅಥವಾ ನರುಳ್ಳೆ ಮೇಲೆ ಇಡಿ, ಅದರ ಮೇಲೆ ಪ್ಲಾಸ್ಟರ್‌ ಅಥವಾ ತೆಳುವಾದ ಬಟ್ಟೆ ಕಟ್ಟಿ ಕಟ್ಟಿ ರಾತ್ರಿ ಹೊತ್ತು ಬಿಡಿ, ಬೆಳಗ್ಗೆ ಅದನ್ನು ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಬಿದ್ದು ಹೋಗುತ್ತದೆ.

 

ಇದಲ್ಲದೆ ಸುಣ್ಣ ಅರ್ಧ ಚಮಚ ತೆಗೆದುಕೊಳ್ಳಿ, ಅದಕ್ಕೆ ಅರ್ಧ ಚಮಚ ಕೋಲ್ಗೆಟ್‌ ಹಾಕಿ ಮಿಕ್ಸ್‌ ಮಾಡಿ, ನಂತರ ನರುಳ್ಳೆ ಇರುವ ಕಡೆ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ ನಂತರ ನೋಡಿದರೆ ನರುಳ್ಳೆ ಮಾಯವಾಗಿರುತ್ತದೆ. ಸುಣ್ಣ ಮತ್ತು ಕೋಲ್ಗೆಟ್‌ ಹಚ್ಚಿದಾಗ ಮೊದಲಿಗೆ ಸ್ವಲ್ಪ ಉರಿ ಅನಿಸಿದರೂ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮುಖಕ್ಕೆ ಹಾಕಿದರೆ ಕಲೆ ಬೀಳಬಹುದು, ಆದರೆ ಆ ಕಲೆ ಸ್ವಲ್ಪ ದಿನಗಳ ಬಳಿಕ ತಾನಾಗಿಯೇ ಹೋಗುತ್ತದೆ.