Home Health Toe hair: ನಿಮಗೂ ಕಾಲಿನ ಹೆಬ್ಬೆರಳಲ್ಲಿ ಕೂದಲು ಇದೆಯೇ? ಹಾಗಿದ್ರೆ ಈ ಸೀಕ್ರೆಟ್ ತಿಳಿಯಿರಿ

Toe hair: ನಿಮಗೂ ಕಾಲಿನ ಹೆಬ್ಬೆರಳಲ್ಲಿ ಕೂದಲು ಇದೆಯೇ? ಹಾಗಿದ್ರೆ ಈ ಸೀಕ್ರೆಟ್ ತಿಳಿಯಿರಿ

Toe hair

Hindu neighbor gifts plot of land

Hindu neighbour gifts land to Muslim journalist

Toe Hair: ಮನುಷ್ಯನ ದೇಹದಲ್ಲಿ ಕೂದಲು ಇರುವುದು ಸಹಜ. ಆದ್ರೆ ಕೆಲವರಿಗೆ ಕೆಲವು ಭಾಗಗಳಲ್ಲಿ ಹೆಚ್ಚು ಕೂದಲು ಗೋಚರಿಸುತ್ತೆ. ಅಂತೆಯೇ ಕಾಲಿನ ಹೆಬ್ಬೆರಳಿನ ಮೇಲೆ ಕೆಲವರಿಗೆ ಕೂದಲು (Toe Hair) ಇರುತ್ತದೆ.  ಒಂದು ವೇಳೆ ನಿಮಗೂ ಕಾಲ್ಪೆರಳಲ್ಲಿ ಕೂದಲು ಇದೆಯೇ? ಒಮ್ಮೆ ಪರಿಶೀಲಿಸಿ ನೋಡಿ. ಯಾಕೆಂದರೆ ಕಾಲಿನ ಹೆಬ್ಬೆರಳಿನಲ್ಲಿರುವ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಸೀಕ್ರೆಟ್.

ಸಹಜವಾಗಿ ಕೂದಲು ಚರ್ಮದ ಒಳಗೆ ಬೆಳೆಯಲು ಪ್ರಾರಂಭವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕೂದಲು ಬೆಳೆಯಲು ರಕ್ತದ ಸಹಾಯವೂ ಬೇಕು. ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳು ರಕ್ತದೊಂದಿಗೆ ಬೆರೆತು ಕೂದಲಿನ ಬುಡಕ್ಕೆ ತಲುಪುತ್ತವೆ. ಇದು ಕೂದಲಿನ ರಚನೆಗೆ ಕಾರಣವಾಗುತ್ತದೆ. ಅಂತೆಯೇ ಕೆಲವರಿಗೆ ಹೆಬ್ಬೆರಳಿನ ಮೇಲ್ಬಾಗದಲ್ಲಿ ಕೂದಲು ಬೆಳೆಯುತ್ತದೆ. ಆದರೆ, ಕೆಲವರಲ್ಲಿ ಈ ರೀತಿ ಕೂದಲು ಬೆಳೆಯುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಆ ಪ್ರದೇಶಕ್ಕೆ ರಕ್ತ ಪೂರೈಕೆ ಸರಿಯಾಗಿ ಆಗುವುದಿಲ್ಲ. ರಕ್ತ ಪೂರೈಕೆಯ ಕೊರತೆಗೆ ಕಾರಣವೆಂದರೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಅಡಚಣೆ ಉಂಟಾಗಿರುತ್ತದೆ ಎಂದು ಅರ್ಥವಾಗಿದೆ.

ನಾವು ಆಹಾರವನ್ನು ಸೇವಿಸಿದಾಗ, ದೇಹದಲ್ಲಿ ಬಹಳಷ್ಟು ಕೊಬ್ಬು ಸಂಗ್ರಹವಾಗುತ್ತದೆ. ಈ ಕೊಬ್ಬು ಮೊದಲು ಅಪಧಮನಿಗಳಲ್ಲಿ ಸಂಗ್ರಹವಾಗುತ್ತದೆ. ಕೊಬ್ಬು ಹೆಚ್ಚು ಶೇಖರಣೆಗೊಂಡರೆ, ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಇದು ಕೂದಲು ಬೆಳವಣಿಗೆಗೆ ಕಾರಣವಾಗುವುದಿಲ್ಲ.

ಆದ್ದರಿಂದ ತಜ್ಞರ ಪ್ರಕಾರ ಹೆಬ್ಬೆರಳಿನಲ್ಲಿ ಕೂದಲು ಚೆನ್ನಾಗಿ ಬೆಳೆದರೆ ರಕ್ತ ಪೂರೈಕೆ ಸರಿಯಾಗಿದೆ ಎಂದರ್ಥ ಮತ್ತು ಹೃದಯದ ಆರೋಗ್ಯ ಚೆನ್ನಾಗಿದೆ ಎಂದರ್ಥ. ಇದು ಹೃದ್ರೋಗದ ಅಪಾಯ ಕಡಿಮೆ ಎಂಬ ಸೂಚನೆ ನೀಡುತ್ತದೆ.

ಹಾಗಂತ ಕೆಲವರಲ್ಲಿ ತಲೆ ಮತ್ತು ತೋಳುಗಳ ಮೇಲೂ ಕೂದಲು ಇರುವುದಿಲ್ಲ. ಆದ್ರೆ ಅದಕ್ಕೂ ಹೃದಯದ ಆರೋಗ್ಯಕ್ಕೂ  ಸಂಬಂಧ ಇಲ್ಲ. ಅಂದರೆ ತಲೆ ಮತ್ತು ಕೈಗಳು ಹೃದಯಕ್ಕೆ ಹತ್ತಿರದಲ್ಲಿದೆ. ಆದರೆ ಕಾಲ್ಪೆರಳು ಹೃದಯದಿಂದ ದೂರವಿದೆ. ಆದ್ದರಿಂದ ನಾವು ಅದನ್ನು ಗಣನೆಗೆ ತೆಗೆದುಕೊಳ್ಳಬೇಕು.